Udayavni Special

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ


Team Udayavani, Jun 15, 2021, 10:52 PM IST

15-19

ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಎದುರಾಗಿರುವ ಸಮಸ್ಯೆಗಳಿಗೆ ಕಂಡುಕೊಳ್ಳಲಾದ ತುರ್ತು ಪರಿಹಾರ ಕಾರ್ಯಗಳ ಕುರಿತು ಸಚಿವ ಕೆ.ಎಸ್‌. ಈಶ್ವರಪ್ಪ ಸಮೀಪದ ಹಸೂಡಿ ಗ್ರಾಮಕ್ಕೆ ಜಿಪಂ ಅ ಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿ ಗಳು ಹಾಗೂ ಅಧಿ ಕಾರಿಗಳಿಂದ ಮಾಹಿತಿ ಪಡೆದರು. ಕೊರೊನಾಮುಕ್ತ ಗ್ರಾಪಂ ಆಗಿ ಮಾಡುವ ನಿಟ್ಟಿನಲ್ಲಿ ಸೋಂಕಿತರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ಸೋಂಕಿತರು ಎದೆಗುಂದದಂತೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿಬ್ಬಂದಿ, ಟಾಸ್ಕ್ಫೋರ್ಸ್‌, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕಾರ್ಯ ಪ್ರಶಂಸನೀಯ ಎಂದರು.

ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುವ ಜೀವರಕ್ಷಕ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವಂತೆ ಹಾಗೂ ಗುಣಮುಖವಾಗಿ ಬರುವ ವ್ಯಕ್ತಿಗಳನ್ನು ಮೊದಲಿನಂತೆ ಸಾಮಾಜಿಕವಾಗಿ ಗೌರವಿಸುವಂತೆ ಸೂಚಿಸಿದ ಅವರು, ಉದ್ಯೋಗ ಚೀಟಿ ಪಡೆದಿದ್ದಲ್ಲಿ ಅವರಿಗೆ ಉದ್ಯೋಗಾವಕಾಶ ನೀಡುವಂತೆ ಪಿಡಿಒಗೆ ಸೂಚಿಸಿದರು.

ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೆರೆಕಟ್ಟೆ ಕಾಲುವೆಗಳನ್ನು ತಹಶೀಲ್ದಾರರಿಂದ ಸಮೀಕ್ಷೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಿದ ಅವರು, ಈ ಕಾರ್ಯಕ್ಕೆ ಪೊಲೀಸ್‌ ಇಲಾಖೆ ಸಹಕಾರ ಪಡೆಯುವಂತೆ ಸೂಚಿಸಿದರು. ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ-ಕಾಲುವೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ರೈತರ ಹೊಲದಲ್ಲಿ ಬದುಗಳ ನಿರ್ಮಾಣಕ್ಕೂ ಉದ್ಯೋಗ ಖಾತ್ರಿಯಲ್ಲಿ ಅವಕಾಶ ನೀಡಲಾಗಿದೆ.

ಕಳೆದ ಸಾಲಿನಲ್ಲಿ ರಾಜ್ಯಕ್ಕೆ 13.ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಆದರೆ, ರಾಜ್ಯ ಸರಕಾರ ಕೊರೊನಾ ಸಂದರ್ಭ ಬಳಸಿಕೊಂಡು ಸುಮಾರು 15 ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಪೂರೈಸಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ 800 ಕೋಟಿ ರೂ.ಗಳ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿತ್ತು ಎಂದರು.

ಪ್ರಸ್ತುತ ಹಸೂಡಿ ಗ್ರಾಪಂ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು. ಕಾರ್ಯಕ್ರಮದ ನಂತರ ಅಲ್ಲಿನ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ, ಜಿಪಂ ಅಧ್ಯಕ್ಷೆ ಶಾಂತಮ್ಮ, ಜಿಪಂ ಸಿಇಒ ಎಂ.ಎಲ್‌. ವೈಶಾಲಿ, ಪಿ.ಡಿ.ಒ. ರಾಜಪ್ಪ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

iiu

ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಲು ಆಫರ್

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

ಕಾಸರಗೋಡಿಗೆ ಸರ್ಕಾರಿ,  ಖಾಸಗಿ ಬಸ್ ಸಂಚಾರವಿಲ್ಲ:  ನಳೀನ್ ಕುಮಾರ್ ಕಟೀಲು

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

45 ವರ್ಷ ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿದ್ದಕ್ಕೆ ಬಿಎಸ್ ವೈಗೆ ತೃಪ್ತಿಯಿದೆ: ರಾಘವೇಂದ್ರ

45 ವರ್ಷ ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿದ್ದಕ್ಕೆ ಬಿಎಸ್ ವೈಗೆ ತೃಪ್ತಿಯಿದೆ: ರಾಘವೇಂದ್ರ

ಬಿಜೆಪಿಯಲ್ಲಿ ಎರಡು ಹೈಕಮಾಂಡ್ ಇದೆ ಎಂದು ಒಪ್ಪಿಕೊಂಡ ಶಾಸಕ ಹರತಾಳು ಹಾಲಪ್ಪ

ಬಿಜೆಪಿಯಲ್ಲಿ ಎರಡು ಹೈಕಮಾಂಡ್ ಇದೆ ಎಂದು ಒಪ್ಪಿಕೊಂಡ ಶಾಸಕ ಹರತಾಳು ಹಾಲಪ್ಪ

ಸೊರಬ : ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಹೊಟ್ಟೆನೋವು ತಾಳಲಾರದೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಸಾಗರ: ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

29-18

ಬಿಎಸ್ ವೈ ಯೋಜನೆಗ ವೇಗ ನೀಡುವರೇ ಬೊಮ್ಮಾಯಿ ?

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.