ಬಿಜೆಪಿಯವರು ನೀತಿ ಹೇಳುವುದು ಬದ್ನೆಕಾಯಿ ತಿನ್ನೋಕಾ..?: ಸಿದ್ದರಾಮಯ್ಯ ಟೀಕೆ

Team Udayavani, Nov 29, 2022, 1:02 PM IST

siddaramaih

ಶಿವಮೊಗ್ಗ: ಅವನ್ಯಾವನೋ ಒಬ್ಬ ಸುನೀಲನ ಜೊತೆ ಸೂರ್ಯ, ಮೋಹನ್ ಅವರೆಲ್ಲಾ ಹೋಗಿದ್ದಾರೆ‌. ಡಕಾಯಿತಿ, ಕೊಲೆ ಪ್ರಕರಣದಲ್ಲಿದ್ದವನ ಜೊತೆ ಬಿಜೆಪಿ ಮುಖಂಡರೆಲ್ಲಾ ಸೇರಿಕೊಂಡಿದ್ದರು. ಇವರು ನೀತಿ ಹೇಳುವುದು ಬದನೆಕಾಯಿ ತಿನ್ನೋಕಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು ಸುನೀಲನನ್ನು ಹುಡುಕುತ್ತಿದ್ದಾರೆ. ಅವನು ಬಿಜೆಪಿ ಮುಖಂಡರ ಜೊತೆಗೆ ಇದ್ದ. ಆಡಳಿತರೂಢ ಬಿಜೆಪಿ ಶಾಸಕರು, ಸಂಸದರು ಅವರ ಜೊತೆಗಿದ್ದರೆ ಪೊಲೀಸ್ ಹೇಗೆ ಬಂಧಿಸುತ್ತಾರೆ? ಅವರಿಗೆ ಹೇಗೆ ಧೈರ್ಯ ಬರುತ್ತದೆ? ಕಾನೂನು ಕ್ರಮ ಕೈಗೊಂಡು ಶಿಕ್ಷೆ ಕೊಡಿಸಲು ಸಾಧ್ಯವೇ ಎಂದರು.

ಬಿಜೆಪಿಯವರು ಹೇಳೋದೊಂದು ಮಾಡುವುದೊಂದು. ನಲಪಾಡ್ ಮೇಲೆ ಒಂದು ಕೇಸ್ ಇದೆ. ಆದರೇ, ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ?  ಅಮಿತ್ ಶಾ ಕೊಲೆ ಕೇಸ್ ನಲ್ಲಿದ್ದರು. ಗಡಿಪಾರು ಆದೇಶದಲ್ಲಿದ್ದರು. ಬಿಜೆಪಿಗೆ ಏನು ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿದ್ದರಾಮಯ್ಯ ಲೈಫ್ ಜರ್ನಿ ಸಿನಿಮಾ ವಿಚಾರವಾಗಿ ಮಾತನಾಡಿದ ಅವರು, ‘’ಗೊತ್ತಿಲ್ಲಪ್ಪಾ. ಅವರು ಕನಕಗಿರಿ ಕ್ಷೇತ್ರದಿಂದ ಬಂದಿದ್ದರು. ಅವರು ಸಿನಿಮಾ ಮಾಡುವುದಾಗಿ ಹೇಳಿದ್ದಾರಷ್ಟೆ. ಬೇರೆ ಏನೂ ಗೊತ್ತಿಲ್ಲ. ನಾನು ಆಕ್ಟಿಂಗ್ ಮಾಡಲ್ಲ. ನನಗೆ ಆಕ್ಟಿಂಗ್ ಬರುವುದಿಲ್ಲ ಎಂದರು.

ಚುನಾವಣೆ ಸ್ಫರ್ಧೆಗೆ ಬೇರೆ ಕ್ಷೇತ್ರಗಳಿಂದ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರೆಯುತ್ತಿದ್ದಾರೆ. ನಾನೂ ಅರ್ಜಿ ಹಾಕಿದ್ದೇನೆ. ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರೇ ಹೇಳಿದ ಜಾಗದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಕೇಂದ್ರ V/s ಸುಪ್ರೀಂಕೋರ್ಟ್: ಕೊಲಿಜಿಯಂ ಶಿಫಾರಸು ಮಾಡಿದ ಸೌರಭ್ ಹೆಸರನ್ನು ತಿರಸ್ಕರಿಸಿದ್ದೇಕೆ?

ಒಂದೇ ಕ್ಷೇತ್ರಕ್ಕೆ ಹಲವು ಜನರಿಂದ ಅರ್ಜಿ ವಿಚಾರವಾಗಿ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವುನ್ನು ಪರಿಗಣನೆ ಮಾಡಬೇಕಾಗುತ್ತದೆ. ಕೋಮುವಾದಿ ಪಕ್ಷ, ಮನುವಾದಿ ಪಕ್ಷವನ್ನು ಕಿತ್ತು ಹಾಕಬೇಕು. ಇವರಿಂದ ದೇಶ ಮತ್ತು ರಾಜ್ಯ ಉಳಿಯುವುದಿಲ್ಲ. ಇದು ನಮ್ಮ ಕಾರ್ಯಕರ್ತರ ಅಭಿಪ್ರಾಯವಾಗಿದೆ . ಟಿಕೆಟ್ ಯಾರಿಗೆ ಸಿಗುತ್ತದೆ ಸಿಗುವುದಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು.

ಕೊಪ್ಪಳದಲ್ಲಿ ನಾನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮದುವೆ ಸಮಾರಂಭದಲ್ಲಿ ರಾಜಕೀಯ ಮಾತನಾಡಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಹೆಸರು ಹೇಳಿದ್ದೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಟಾಪ್ ನ್ಯೂಸ್

ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ| ಸುಧಾಕರ್‌ ಪ್ರಶ್ನೆ

ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ.ಸುಧಾಕರ್‌ ಪ್ರಶ್ನೆ

ಕಾಂಗ್ರೆಸ್‌ನಲ್ಲೇ ಅಸಮಾಧಾನ ಭುಗಿಲು: ಸಚಿವ ಬಿ.ಸಿ.ಪಾಟೀಲ್‌

ಕಾಂಗ್ರೆಸ್‌ನಲ್ಲೇ ಅಸಮಾಧಾನ ಭುಗಿಲು: ಸಚಿವ ಬಿ.ಸಿ.ಪಾಟೀಲ್‌

ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ

ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

PM Modi

ಫೆ.6ರಂದು ಪ್ರಧಾನಿ ಮೋದಿ ಅವರಿಂದ ತುಮಕೂರು ಎಚ್‌ಎಎಲ್‌ ಘಟಕ ಲೋಕಾರ್ಪಣೆ

Thinking of giving bus pass to rural journalists: CM Bommai

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ

ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್

ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್

MUST WATCH

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

ಹೊಸ ಸೇರ್ಪಡೆ

ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ| ಸುಧಾಕರ್‌ ಪ್ರಶ್ನೆ

ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ.ಸುಧಾಕರ್‌ ಪ್ರಶ್ನೆ

ಕಾಂಗ್ರೆಸ್‌ನಲ್ಲೇ ಅಸಮಾಧಾನ ಭುಗಿಲು: ಸಚಿವ ಬಿ.ಸಿ.ಪಾಟೀಲ್‌

ಕಾಂಗ್ರೆಸ್‌ನಲ್ಲೇ ಅಸಮಾಧಾನ ಭುಗಿಲು: ಸಚಿವ ಬಿ.ಸಿ.ಪಾಟೀಲ್‌

ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ

ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.