
ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧಿಸಲ್ಲ; ಮಾಡಿದರೂ..: ಈಶ್ವರಪ್ಪ
Team Udayavani, Mar 18, 2023, 12:24 PM IST

ಶಿವಮೊಗ್ಗ: ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಮಾಡಿದರೂ ಸೋಲುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಕ್ಕೆ ಬರಲಿ ಎಂದು ದಲಿತರು ಕಾಯುತ್ತಿದ್ದಾರೆ. ಅಲ್ಲಿ 61-62 ಸಾವಿರ ದಲಿತ ಮತಗಳಿವೆ. ಅದರಲ್ಲಿ ಪರಮೇಶ್ವರರನ್ನು ಸೋಲಿಸಿದ್ದು ಅವರಿಗೆ ನೆನಪಿದೆ. ಮುನಿಯಪ್ಪರನ್ನು ಇವರ ಶಿಷ್ಯರು ಸೋಲಿಸಿದ್ದು ನೆನಪಿದೆ. ಶ್ರೀನಿವಾಸ್ ಪ್ರಸಾದ್ ರನ್ನು ಪಕ್ಕಕ್ಕೆ ಸರಿಸಿದ ಸಿಟ್ಟು ದಲಿತ ಸಮಾಜಕ್ಕಿದೆ. ಜೊತೆಗೆ 40 ಸಾವಿರ ಒಕ್ಕಲಿಗ ವೋಟುಗಳಿವೆ. ಅವರೂ ಕಾಯುತ್ತಿದ್ದಾರೆ. ದೇವೆಗೌಡರಿಗೆ ಮಾಡಿದ ದ್ರೋಹ ಅವರಿಗೂ ಗೊತ್ತಿದೆ. ಇನ್ನು ಕುರುಬರ ವೋಟ್ ಗಳಿವೆ. ಅವರು ವರ್ತೂರು ಪ್ರಕಾಶ್ ಗೆ ಬೆಂಬಲ ಕೊಟ್ಟಿದ್ದಾರೆ. ಕೋಲಾರದಲ್ಲಿ ಅವರಿಗೆ ಉಳಿಯುವುದು ಮುಸ್ಲಿಂ ವೋಟುಗಳು ಮಾತ್ರ. ಹಾಗಾಗಿ ಕೋಲಾರದಲ್ಲಿ ನಿಲ್ಲಲ್ಲ. ನಿಂತರೂ ಸಿದ್ದರಾಮಯ್ಯ ಸೋಲುತ್ತಾರೆ ಎಂದರು.
ಇದನ್ನೂ ಓದಿ:ಅಂತರ್ ಜಾತಿ ಸಂಬಂಧಕ್ಕೆ ಮನೆಯವರ ವಿರೋಧ: ದೂರ ಹೋಗಿ ಮದುವೆಯಾದ ಖ್ಯಾತ ಯೂಟ್ಯೂಬರ್
ಚಾಮುಂಡೇಶ್ವರಿ, ಬಾದಾಮಿಯ ಜನರಿಗೂ ಅವರ ಹಣೆಬರಹ ಗೊತ್ತು. ಕಾಂಗ್ರೆಸ್ ನಲ್ಲಿ ಎಲ್ಲಿ ಬೇಕೋ ಅಲ್ಲಿ ತೀರ್ಮಾನ ಮಾಡುವ ಕೆಲವು ನಾಯಕರಿದ್ದಾರೆ. ಚುನಾವಣೆಯಲ್ಲಿ ಸೋತರೂ ವಿಶ್ವಾಸ ಪಡೆಯುವ ಕೆಲಸ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರದ್ರೋಹಿ ಸಂಘಟನೆಗಳೊಂದಿಗೆ ನೇರ ಹೊಂದಾಣಿಕೆ ಮಾಡುತ್ತಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ರಾಜ್ಯದ ಜನರು ಗಮನಿಸಬೇಕು. ರಾಷ್ಟ್ರದ್ರೋಹಿ ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಕೆಲಸ ಮಾಡುತ್ತಿವೆ. ಬಾಂಬ್ ಉತ್ಪಾದನೆ, ದೇಶದ್ರೋಹದ ಕೆಲಸಕ್ಕೆ ಯುವಕರಿಗೆ ಪ್ರಚೋದನೆ ಕೊಡುತ್ತಿವೆ. ರಾಜ್ಯದ ಪೊಲೀಸರು, ಗೃಹ ಇಲಾಖೆ ಹಲವರನ್ನು ಬಂಧಿಸಿದರು, ಕೆಲವರನ್ನು ಗಡಿಪಾರು ಮಾಡಿದರು. ಶಾಂತಿಯಿಂದ ಇದ್ದ ಶಿವಮೊಗ್ಗದಲ್ಲಿ ಹರ್ಷನ ಕೊಲೆ ಮಾಡಿದರು. ಸಾವರ್ಕರ್ ಫ್ಲೆಕ್ಸ್ ಹರಿದು, ಗಲಾಟೆ ಮಾಡಿದರು. ಮಂಗಳೂರು ಕುಕ್ಕರ್ ಬ್ಲಾಸ್ಟ್ ಆದಾಗ ಅಮಾಯಕನ ಬಂಧಿಸಿದರೆಂದು ಎಂದು ಡಿಕೆಶಿ ಹೇಳಿದ್ದರು. ಕಾಂಗ್ರೆಸ್ ನೀಚತನಕ್ಕೆ ಇಳಿದಿರುವ ಬಗ್ಗೆ ನಮಗೆ ಯಾವುದೇ ಅನುಮಾನ ಇಲ್ಲ. ಆದರೆ ಅದನ್ನು ನಾವು ಎದುರಿಸುತ್ತೇವೆ. ಈ ಕಾರಣಕ್ಕೆ ರಾಜ್ಯದ ಜನರು ದೇಶಭಕ್ತ ಬಿಜೆಪಿ ಸಂಘಟನೆ ಬೆಂಬಲಿಸಬೇಕು ಎಂದು ಈಶ್ವರಪ್ಪ ಹೇಳಿದರು.
ಅಧಿಕಾರಕ್ಕಾಗಿ ಇವರು ಯಾವ ಮಟ್ಟಕ್ಕೆ ಹೋಗುತ್ತಾರೆಂದು ರಾಜ್ಯದ ಜನರಿಗೆ ಇಂದು ಕಾಂಗ್ರೆಸ್ ನೋಡಿ ಆಶ್ಚರ್ಯ ಅಗುತ್ತಿದೆ. ರಾಷ್ಟ್ರದ್ರೋಹಿ ಕಾಂಗ್ರೆಸ್ ಪಕ್ಷವನ್ನು ದೇಶದ ಅನೇಕ ರಾಜ್ಯದಲ್ಲಿ ಜನರು ಮನೆ ಕಳುಹಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಬುದ್ದಿ ಕಲಿಸಿ ಎಂದು ಈಶ್ವರಪ್ಪ ಮನವಿ ಮಾಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನ-ಕದನ 2023: ಇಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷನಿಷ್ಠೆಯೇ ಅಂತಿಮ!

ಡೈಲಿ ಡೋಸ್: ಆಡಿಸುವಾತ ಆಟವ ಮುಗಿಸಿ ಸೀಟಿ ಊದಿದ ಓಡುವಾತನ ಕುರ್ಚಿ ಕಸಿದು ಕೆಳಗೆ ಕೂರಿಸಿದ !

ವಿಧಾನ-ಕದನ 2023: ಉಡುಪಿ ಜಿಲ್ಲೆಯ ಎರಡರಲ್ಲಿ ಹತ್ತು ಬೇಡಿಕೆ

ವಿಧಾನ-ಕದನ 2023: ಇನ್ನೇನಿದ್ದರೂ ನೀತಿ ಸಂಹಿತೆಯ ಕಾಲ

ನಮ್ಮ ಹಕ್ಕೊತ್ತಾಯ-ಉಡುಪಿ: ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣವಾಗಲಿ
MUST WATCH
ಹೊಸ ಸೇರ್ಪಡೆ

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ