
165 ಬಾಲ್ ಗಳಲ್ಲಿ 407 ರನ್ ಗಳಿಸಿದ ಸಾಗರದ ತನ್ಮಯ್
Team Udayavani, Nov 13, 2022, 9:46 AM IST

ಶಿವಮೊಗ್ಗ: 50 ಓವರುಗಳ ಕ್ರಿಕೆಟ್ ಪಂದ್ಯದಲ್ಲಿ ಸಾಗರದ ಬಾಲಕನೋರ್ವ ದಾಖಲೆಯ ಅಜೇಯ 407 ರನ್ ಬಾರಿಸಿದ್ದಾನೆ.
ಶಿವಮೊಗ್ಗ ನಗರ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಾಗರದ ತನ್ಮಯ್ ಮಂಜುನಾಥ್ 165 ಬಾಲ್ ಗಳಲ್ಲಿ 407 ರನ್ ಗಳಿಸಿ ಸ್ಟೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾನೆ.
ಹದಿನಾರು ವರ್ಷದೊಳಗಿನ ವಲಯ ಪಂದ್ಯದಲ್ಲಿ ಭದ್ರಾವತಿ ತಂಡದ ಎದುರು ತನ್ಮಯ್ ಔಟಾಗದೆ 407 ರನ್ ಗಳಿಸಿದ್ದಾನೆ. ಈ ಸ್ಫೋಟಕ ಇನ್ನಿಂಗ್ ನಲ್ಲಿ 48 ಬೌಂಡರಿ 24 ಸಿಕ್ಸರ್ ಸಿಡಿಸಿದ್ದಾನೆ. ಅಂಶು (16) ಜೊತೆಗೂಡಿ ತನ್ಮಯ್ ಜೊತೆಗೂಡಿ 120 ರನ್ ಗಳಿಸಿದರು.
ಇದನ್ನೂ ಓದಿ:ಲೋಕ ಅದಾಲತ್ ಬಗ್ಗೆ ಕಕ್ಷಿದಾರರಲ್ಲಿ ತಿಳುವಳಿಕೆ ಅಗತ್ಯ: ಸಿವಿಲ್ ನ್ಯಾಯಾಧೀಶ ಕಿರಣ ಕುಮಾರ
ಈ ದಾಖಲೆ ಕ್ರಿಕೆಟ್ ಇತಿಹಾಸದಲ್ಲಿ ಸರ್ವಕಾಲಿಕ ದಾಖಲೆಯಾಗಿದೆ ಎಂದು ತನ್ಮಯ್ ತರಬೇತುದಾರ ನಾಗೇಂದ್ರ ಪಂಡಿತ್ ತಿಳಿಸಿದರು.
ಕ್ರಿಕೆಟ್ ಕ್ಲಬ್ ಆಫ್ ಸಾಗರ ಮತ್ತು ಎ.ಟಿ.ಸಿ.ಸಿ ಭದ್ರಾವತಿ ನಡುವೆ ನಡೆದ ಪಂದ್ಯದಲ್ಲಿ ತಂಡವು ಒಟ್ಟು 50 ಓವರ್ ಗಳಲ್ಲಿ 583 ರನ್ ಗಳ ಗಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ: ರಾಘವೇಂದ್ರ

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

ಚಕ್ರತೀರ್ಥ ನದಿಯಲ್ಲಿ ಗೋವಿನ ತಲೆ ಪತ್ತೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮನವಿ

ತೀರ್ಥಹಳ್ಳಿ ಪೊಲೀಸ್ ಪೇದೆಯ ಹತ್ಯೆ ಪ್ರಕರಣ: ಓರ್ವ ಆರೋಪಿಯ ಬಂಧನ

ಶಿಕಾರಿಪುರದ ಗಲಭೆ ಹಿಂದೆ ರಾಜಕೀಯ ವಾಸನೆ: ಗೃಹ ಸಚಿವ ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ರಾಮನ ಅವತಾರ ತಾಳಿದ ರಿಷಿ; ಫಸ್ಟ್ ಲುಕ್ ಪೋಸ್ಟರ್ ಬಂತು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್