Udayavni Special

ಸಂಚಾರ ದಟ್ಟಣೆ ನಿಯಂತ್ರಣಕ್ಕೆ “ಬೊಲಾರ್ಡ್‌’ ವ್ಯವಸ್ಥೆ

Team Udayavani, Aug 21, 2017, 10:11 AM IST

21-STATE-8.jpg

ಶಿವಮೊಗ್ಗ: ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಅಳವಡಿಸುವ “ಬೊಲಾರ್ಡ್‌’ ವ್ಯವಸ್ಥೆ ಇದೇ ಮೊದಲ ಬಾರಿಗೆ ಮಲೆನಾಡು ನಗರಿ ಶಿವಮೊಗ್ಗಕ್ಕೆ ಬಂದಿದೆ.

ಮುಂದುವರಿದ ದೇಶ ಮತ್ತು ದೇಶದ ಮೆಟ್ರೋ ಸಿಟಿಗಳಲ್ಲಿ ಮಾತ್ರ ಕಾಣುವ ಈ ಬೊಲಾರ್ಡ್‌ ವ್ಯವಸ್ಥೆ ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಅಳವಡಿಸಲಾಗುತ್ತಿದ್ದು, ನಗರದ ವಾಣಿಜ್ಯ ವ್ಯವಹಾರಗಳ ಹೃದಯ ಭಾಗ ಎನಿಸಿರುವ ಗಾಂಧಿ ಬಜಾರ್‌ನಲ್ಲಿ “ಬೊಲಾರ್ಡ್‌’ ಬಳಕೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಮುಂದಾಗಿದೆ. ಆ. 21ರಂದು ಇದರ ಉದ್ಘಾಟನೆ ನೆರವೇರಲಿದೆ. ಈ ಬೊಲಾರ್ಡ್‌ ವ್ಯವಸ್ಥೆ ಅಳವಡಿಸಿದರೆ ದ್ವಿಚಕ್ರ ವಾಹನದ ಹೊರತಾಗಿ ಬೇರಾವುದೇ ವಾಹನ ಸಂಚಾರ ಆ ಸ್ಥಳದಲ್ಲಿ ಸಾಧ್ಯವಿಲ್ಲ. ಪದೇಪದೆ ಸರಿಸಬೇಕಾದ ಬ್ಯಾರಿಕೇಡ್‌ನ‌ ಬದಲಿಗೆ ಶಾಶ್ವತವಾಗಿ
ರಸ್ತೆಯಲ್ಲಿ ಅಳವಡಿಸುವ ವ್ಯವಸ್ಥೆಯೇ ಈ ಬೊಲಾರ್ಡ್‌. ನೆಲದೊಳಗೆ ಅಳವಡಿಸುವ ಬೊಲಾರ್ಡ್‌ ಕಂಬಗಳನ್ನು ಬೇಕೆನಿಸಿದಾಗ ಮೇಲಕ್ಕೆತ್ತಿ ಬೀಗ ಹಾಕಿದರೆ ಬ್ಯಾರಿಕೇಡ್‌ ರೀತಿಯಲ್ಲಿ ಕೆಲಸ ಮಾಡುತ್ತದೆ.

ಇಲ್ಲಿನ ಗಾಂಧಿ ಬಜಾರ್‌ ಪ್ರವೇಶದಲ್ಲೇ 3 ಸೆಟ್‌ ಬೊಲಾರ್ಡ್‌ ಅಳವಡಿಸಲಾಗಿದೆ. ಪೊಲೀಸ್‌ ಇಲಾಖೆಯ ವಿಶೇಷ ಆಸಕ್ತಿಯಿಂದ ಇದು ಅಸ್ತಿತ್ವಕ್ಕೆ ಬಂದಿದೆ. ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ಸೇರಿ ಯಾವುದೇ ವಿಶೇಷ ಹಾಗೂ ಸಾಮಾನ್ಯ ಸಂದರ್ಭದಲ್ಲಿ ಬೊಲಾರ್ಡ್‌ ಬಳಸಲು ನಿರ್ಧರಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಗಾಂಧಿ ಬಜಾರ್‌ ರಸ್ತೆಯ ಅಭಿವೃದ್ಧಿ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಇದರಿಂದ ಸಹಾಯವಾಗಲಿದೆ. ಬೊಲಾರ್ಡ್‌ ಅಳವಡಿಕೆಯಿಂದ ಪೊಲೀಸ್‌ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜನೆ ತಪ್ಪಲಿದೆ.

ಏನಿದು ಬೊಲಾರ್ಡ್‌?: ಬೊಲಾರ್ಡ್‌  ಎಂಬುದು ವಾಹನ ಸಂಚಾರ ನಿಯಂತ್ರಣಕ್ಕೆ ಬಳಸುವ ಸಾಧನವಾಗಿದ್ದು, ವಿಶೇಷವಾದ ಕಬ್ಬಿಣ ಅಥವಾ ಉಕ್ಕಿನಿಂದ ತಯಾರಿಸಲಾಗಿರುತ್ತದೆ. ಪ್ರಸ್ತುತ ಮುಂದುವರಿದ ದೇಶ ಹಾಗೂ ಭಾರತದ ಮೆಟ್ರೋ ನಗರಗಳಲ್ಲಿ ಇದನ್ನು ಬಳಸಲಾಗುತ್ತಿದ್ದು ಉತ್ತಮ ಫಲಿತಾಂಶ ಲಭಿಸಿದೆ. ನಾಲ್ಕರಿಂದ ಐದು ಅಡಿ ಉದ್ದ ಹಾಗೂ ದಪ್ಪವಾದ ಕಬ್ಬಿಣದ ಪಟ್ಟಿಯ (ಬೊಲಾರ್ಡ್‌) ಸೆಟ್‌ನ್ನು ರಸ್ತೆಯಲ್ಲಿ ಶಾಶ್ವತವಾಗಿ
ಹುಗಿಯಲಾಗುತ್ತದೆ. ಅಗತ್ಯಕ್ಕನುಗುಣವಾಗಿ ಬೊಲಾರ್ಡ್‌ನ್ನು ಮೇಲೆತ್ತಿ ಅದಕ್ಕೆ ಬೀಗ ಹಾಕಿದರೆ ಮುಗಿಯಿತು. ಪದೇಪದೆ ಕಬ್ಬಿಣದ ಬ್ಯಾರಿಕೇಡ್‌ ಇಡುವುದು ತಪ್ಪುತ್ತದೆ. ಪ್ರಸ್ತುತ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಅಳವಡಿಸಲಾಗಿರುವ ಬೊಲಾರ್ಡ್‌ ನೆಲಮಟ್ಟದಿಂದ 3 ಅಡಿ ಎತ್ತರದಲ್ಲಿದ್ದು ಪ್ರತಿ ಎರಡು  ಕಂಬದ ನಡುವಿನ ಅಂತರ 3.75 ಅಡಿ ಇದೆ. ಇದರಿಂದಾಗಿ ದ್ವಿಚಕ್ರ ಹೊರತುಪಡಿಸಿ ಆಟೋ ಸೇರಿ ಯಾವುದೇ ವಾಹನ ಗಾಂಧಿ ಬಜಾರ್‌ನ ಮುಖ್ಯ ರಸ್ತೆಯಿಂದ ಪ್ರವೇಶಿಸುವುದು ಸಾಧ್ಯವಾಗದು. ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಬೊಲಾರ್ಡ್‌ಗೆ ರೇಡಿಯಂ ಸ್ಟಿಕ್ಕರ್‌ ಅಂಟಿಸಲಾಗಿದೆ.

ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಶಿವಮೊಗ್ಗದ ಉದ್ಯಮಿ ವೆಂಕಟೇಶ್‌ ಮತ್ತು ತಂಡದವರು ಇದನ್ನು ಸಿದ್ಧಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೊಲಾರ್ಡ್‌ನ ಬೆಲೆ ಸುಮಾರು 1 ಲಕ್ಷ ರೂ. ತನಕ ಇದೆ. ಆದರೆ ಶಿವಮೊಗ್ಗದ ಉದ್ಯಮಿ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ
23 ಸಾವಿರ ರೂ.ಗೆ ಉತ್ತಮ ಗುಣಮಟ್ಟದ ಬೊಲಾರ್ಡ್‌ ತಯಾರಿಸಿಕೊಟ್ಟಿದ್ದಾರೆ. 

ಗೋಪಾಲ್‌ ಯಡಗೆರೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್ ಅಟ್ಟಹಾಸ : 182 ಮಂದಿಯಲ್ಲಿ ಸೋಂಕು ದೃಢ

ಕುಲಭೂಷಣ್ ಜಾಧವ್ ಮರಣದಂಡನೆ ಕೇಸ್; ಮತ್ತೊಂದು ದಾಳ ಉರುಳಿಸಿದ ಪಾಕ್

ಕುಲಭೂಷಣ್ ಜಾಧವ್ ಮರಣದಂಡನೆ ಕೇಸ್; ಮತ್ತೊಂದು ದಾಳ ಉರುಳಿಸಿದ ಪಾಕ್!

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೂ ಕೋವಿಡ್ ಪಾಸಿಟಿವ್

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೂ ಕೋವಿಡ್ ಪಾಸಿಟಿವ್

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಗುಂಡ್ಮಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್

ಗುಂಡ್ಮಿ: ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿನಿಂದ ಅಂತ ಆಣೆ ಮಾಡಲಿ: ಜಾರಕಿಹೊಳಿ‌

ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿನಿಂದ ಅಂತ ಆಣೆ ಮಾಡಲಿ: ಜಾರಕಿಹೊಳಿ‌

DK-Shivakumar

ಡಿ.ಕೆ ಶಿವಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರು

covid-19

ಎಂ.ಪಿ.ರೇಣುಕಾಚಾರ್ಯ ಆಪ್ತ ಸಿಬ್ಬಂದಿಗೆ ಕೋವಿಡ್ ಸೊಂಕು ದೃಢ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್ ಅಟ್ಟಹಾಸ : 182 ಮಂದಿಯಲ್ಲಿ ಸೋಂಕು ದೃಢ

8-July-18

ಜಿಪಂ ಅಧ್ಯಕ್ಷೆ ಸುಜಾತಾಗೆ ಸನ್ಮಾನ

ಕುಲಭೂಷಣ್ ಜಾಧವ್ ಮರಣದಂಡನೆ ಕೇಸ್; ಮತ್ತೊಂದು ದಾಳ ಉರುಳಿಸಿದ ಪಾಕ್

ಕುಲಭೂಷಣ್ ಜಾಧವ್ ಮರಣದಂಡನೆ ಕೇಸ್; ಮತ್ತೊಂದು ದಾಳ ಉರುಳಿಸಿದ ಪಾಕ್!

ಶುರುವಾಗಿದೆ ಸ್ವಯಂಪ್ರೇರಿತ ಲಾಕ್‌ಡೌನ್‌ ಚಿಂತನೆ

ಶುರುವಾಗಿದೆ ಸ್ವಯಂಪ್ರೇರಿತ ಲಾಕ್‌ಡೌನ್‌ ಚಿಂತನೆ

ಸೇವಾ ಭದ್ರತೆಗೆ ಉಪನ್ಯಾಸಕರ ಆಗ್ರಹ

ಸೇವಾ ಭದ್ರತೆಗೆ ಉಪನ್ಯಾಸಕರ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.