

Team Udayavani, Jul 7, 2023, 4:14 PM IST
ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆ ಗ್ರಾಮದಲ್ಲಿರುವ ಶ್ಮಶಾನದಲ್ಲಿ ಗ್ರಾಮಪಂಚಾಯಿತಿಯ ಬೇಜವಾಬ್ದಾರಿಯಿಂದ ಸ್ಮಶಾನದ ಮೇಲ್ಭಾಗದ ಶೀಟುಗಳು ಹಾರಿ ಹೋಗಿದ್ದು ಮಳೆಯಲ್ಲೇ ಮೃತಪಟ್ಟ ವ್ಯಕ್ತಿಯೋರ್ವರ ಶವವನ್ನು ಕುಟುಂಬವರ್ಗ ಹಾಗೂ ಸ್ಥಳೀಯರು ಮಳೆ ನೀರಿನಲ್ಲಿ ಸಂಸ್ಕಾರ ನೆಡೆಸುತ್ತಿರುವ ಅಮಾನವೀಯ ಘಟನೆ ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಶುಕ್ರವಾರ ನಡೆದಿದೆ.
ಶ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಸಮಸ್ಯೆ ಆಗಿದೆ..
ಮಲೆನಾಡ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಜೋರಾಗಿ ಸುರಿಯುವ ಮಳೆಯಲ್ಲಿಯೇ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ. ಸ್ಮಶಾನಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಲವು ಭಾರೀ ಗ್ರಾಮಪಂಚಾಯಿತಿಗೆ ಮನವಿ ಮಾಡಿದ್ದರು ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜನರಿಗೆ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿ ಶ್ಮಶಾನಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಕೊಡುತ್ತಾರ ಕಾದು ನೋಡಬೇಕಿದೆ.
Ad
ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!
Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ
Anandapura: ಮಾರಿಕಾಂಬ ದೇವಿಯ ಕಾಣಿಕೆ ಹುಂಡಿ ಎಣಿಕೆ
Thirthahalli: ವೈದ್ಯರ ವರ್ಗಾವಣೆ ತಡೆ ಹಿಡಿಯುವಂತೆ ಕಿಮ್ಮನೆ ಮನವಿ
Thirthahalli: ಕೆಲಸ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ; ಓರ್ವ ವ್ಯಕ್ತಿ ಸಾ*ವು
You seem to have an Ad Blocker on.
To continue reading, please turn it off or whitelist Udayavani.