Udayavni Special

ಮೌಲ್ಯದ ಕಡೆ ಕೊಂಡೊಯ್ಯುವ ರಂಗಭೂಮಿ : ಭಂಡಾರಿ


Team Udayavani, Mar 28, 2021, 8:21 PM IST

ಗಹಗಗ

ಸಾಗರ: ರಂಗಭೂಮಿ ಮನುಷ್ಯನೊಳಗಿನ ಪ್ರೇಕ್ಷಕರನ್ನು ಬದಲಾಯಿಸುತ್ತಾ ಮೌಲ್ಯದ ಕಡೆ ಕೊಂಡೊಯ್ಯುತ್ತದೆ. ಇತರ ಎಲ್ಲ ಮಾಧ್ಯಮಗಳಿಗಿಂತ ರಂಗಭೂಮಿ ಮಾಧ್ಯಮ ಪ್ರೇಕ್ಷಕ ಮತ್ತು ನಟನ ನಡುವೆ ನಿಕಟ ಸಂಪರ್ಕ ಹೊಂದಿದ್ದು, ಕಾಲಕಾಲಕ್ಕೆ ಬದಲಾಗುತ್ತಿರುವ ಮೌಲ್ಯವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ರಂಗ ವಿಮರ್ಶಕ ವಿಠ್ಠಲ್‌ ಭಂಡಾರಿ ತಿಳಿಸಿದರು.

ಇಲ್ಲಿನ ಎಸ್‌.ಎನ್‌. ನಗರದ ಭೂಮಿ ರಂಗಮನೆಯಲ್ಲಿ ಶನಿವಾರ ಸ್ಪಂದನ ಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಗಭೂಮಿ ಪ್ರೇಕ್ಷಕರ ಜೊತೆ ನೇರ ಅನುಸಂಧಾನ ಮಾಡುವುದರಿಂದ ಇದು ನೋಡುಗರಿಗೆ ಹೆಚ್ಚು ಆಪ್ತ ಎನಿಸುತ್ತದೆ ಎಂದರು.

ಹಲವು ಬದಲಾವಣೆ, ಚಳುವಳಿಗಳು ಮೊದಲ್ಗೊಳ್ಳುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿದೆ. ಆಯಾ ಕಾಲ, ನಟ, ಪ್ರೇಕ್ಷಕರ ಮನಸ್ಥಿತಿಗೆ ಅನುಗುಣವಾಗಿ ರಂಗಭೂಮಿ ಬದಲಾಗುತ್ತಾ ಬಂದರೂ ಸತ್ಯದರ್ಶನ ಸಂದರ್ಭದಲ್ಲಿ ಯಾವುದೇ ರಾಜಿ ರಂಗಭೂಮಿ ಮಾಡಿಕೊಂಡಿಲ್ಲ. ಕೊರೊನಾದಂತಹ ಸಂದರ್ಭದಲ್ಲಿ ಸಹ ರಂಗಭೂಮಿ, ರಂಗನಟರು ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಇಂತಹ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಶುರಾಮ್‌ ಸೂರನಗದ್ದೆ, ಗ್ರಾಮೀಣ ಪ್ರದೇಶದ ಭಾಷೆ, ಪರಿಸರ ಹಾಗೂ ಜನಜೀವನವನ್ನು ರಂಗಭೂಮಿಗೆ ಅಳವಡಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿಕೊಂಡು ಬಂದಿದ್ದೇನೆ. ನಾವು ಬದುಕಿನ ಜೊತೆಗೆ ರಂಗಭೂಮಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ರಂಗಭೂಮಿಗೆ ವಿಶೇಷವಾದ ಶಕ್ತಿಯಿದ್ದು ಅದು ವ್ಯಕ್ತಿತ್ವ ವಿಕಸನದ ಜೊತೆಗೆ ಮೌಲ್ಯವನ್ನು ಬಿತ್ತುತ್ತದೆ ಎಂದರು. ವಿಶ್ವರಂಗಭೂಮಿ ದಿನದ ಅಂಗವಾಗಿ ಸೂರನಗದ್ದೆ ಭೀರೇಶ್ವರ ನಾಟ್ಯ ಸಂಘದ ಜೆ. ಪರಶುರಾಮ್‌ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ರೈತಸಂಘದ ಮಂಜುನಾಥ ಗೌಡ, ಎನ್‌.ಡಿ. ವಸಂತಕುಮಾರ್‌, ಶಿವಾನಂದ ಕುಗ್ವೆ, ಸತೀಶ್‌ ಶೆಣೈ ಇನ್ನಿತರರು ಇದ್ದರು. ಎಂ.ವಿ. ಪ್ರತಿಭಾ ರಾಘವೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್‌ ಶೇಟ್‌ ಸನ್ಮಾನಿತರ ಪರಿಚಯ ಮಾಡಿದರು. ಭೂಮಿ ರಂಗಭೂಮಿ ಸಂದೇಶ ಓದಿದರು. ಎಂ.ರಾಘವೇಂದ್ರ ನಿರೂಪಿಸಿದರು. ನಂತರ ನಾಗೇಂದ್ರ ಕುಮಟಾ ಮತ್ತು ಸಂಗಡಿಗರಿಂದ ರಂಗಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಸ್ಪಂದನ ಸಂಸ್ಥೆ ವತಿಯಿಂದ ಪಿ. ಲಂಕೇಶ್‌ ಮೂಲಕತೆ ಆಧರಿಸಿದ, ಎಂ.ವಿ. ಪ್ರತಿಭಾ ನಿರ್ದೇಶಿಸಿ ರಂಗರೂಪಕ್ಕೆ ತಂದ “ಮುಟ್ಟಿಸಿಕೊಂಡವರು’ ನಾಟಕ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

ghyrryrt

ಮುಂಬೈ : ಇಂದಿನಿಂದ ಮತ್ತೆ ಮರುಪ್ರಸಾರವಾಗುತ್ತಿದೆ ‘ರಾಮಾಯಣ’ ಧಾರಾವಾಹಿ 

dgdgr

ಮೊಬೈಲ್ ಟವರ್ ಬ್ಯಾಟರಿಗಳನ್ನು ದೋಚಿದ್ದ ಖದೀಮರ ಬಂಧನ !

fhretgre

ದೇಶದಲ್ಲಿ ಕೋವಿಡ್ ಅಟ್ಟಹಾಸದ ಆತಂಕ : NEET ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ!

ಇಸ್ರೋ ಗೂಢಚರ್ಯೆ ಪ್ರಕರಣ‌ : ಸಿಬಿಐನಿಂದ ವಿಸ್ತೃತ ತನಿಖೆ ನಡೆಸಲು ಸುಪ್ರೀಂ ಆದೇಶ

ಇಸ್ರೋ ಗೂಢಚರ್ಯೆ ಪ್ರಕರಣ‌ : ಸಿಬಿಐನಿಂದ ವಿಸ್ತೃತ ತನಿಖೆ ನಡೆಸಲು ಸುಪ್ರೀಂ ಆದೇಶ

ಪಾಕ್‌ನಿಂದ ಭಾರತಕ್ಕೆ ಬರುತ್ತಿದ್ದ 300 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ

ಪಾಕ್‌ನಿಂದ ಭಾರತಕ್ಕೆ ಬರುತ್ತಿದ್ದ 300 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ

ghhrre

ಬೆಲೆ ಕುಸಿತ: ಬಾಳೆ ನಾಶ ಮಾಡಿದ ಅನ್ನದಾತ

ಧರ್ಮಶಾಲಾದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dgdgr

ಮೊಬೈಲ್ ಟವರ್ ಬ್ಯಾಟರಿಗಳನ್ನು ದೋಚಿದ್ದ ಖದೀಮರ ಬಂಧನ !

ಬಜನಗಹ

ರಾಹುಲ್‌ ಕಾಲಿಟ್ಟ ಕಡೆ ಕಾಂಗ್ರೆಸ್‌ ಸೋಲು ಖಚಿತ

ಕಹಜಕಲಹಗಹ

ಡಾ| ಅಂಬೇಡ್ಕರ್ ಆದರ್ಶ ಪಾಲಿಸಿ : ಈಶ್ವರಪ್ಪ

ಸಿದ್ದರಾಮಯ್ಯ, ಡಿಕೆಶಿಗೆ ಮುಂದಿನ ಜನ್ಮದಲ್ಲೂ ಅಧಿಕಾರಕ್ಕೇರುವ ಅದೃಷ್ಟ ಇಲ್ಲ: ಈಶ್ವರಪ್ಪ

ಸಿದ್ದರಾಮಯ್ಯ, ಡಿಕೆಶಿಗೆ ಮುಂದಿನ ಜನ್ಮದಲ್ಲೂ ಅಧಿಕಾರಕ್ಕೇರುವ ಅದೃಷ್ಟ ಇಲ್ಲ: ಈಶ್ವರಪ್ಪ

14-20

ಸಾಗರದಲ್ಲಿ ಹೆಚ್ಚುತ್ತಿದೆ‌ ಡೆಂಘೀ ಪ್ರಕರಣ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

ghyrryrt

ಮುಂಬೈ : ಇಂದಿನಿಂದ ಮತ್ತೆ ಮರುಪ್ರಸಾರವಾಗುತ್ತಿದೆ ‘ರಾಮಾಯಣ’ ಧಾರಾವಾಹಿ 

dgdgr

ಮೊಬೈಲ್ ಟವರ್ ಬ್ಯಾಟರಿಗಳನ್ನು ದೋಚಿದ್ದ ಖದೀಮರ ಬಂಧನ !

್ಸ್ದಗಜರತಗ್ಗ

ಕೋವಿಡ್ ಹಿನ್ನೆಲೆ : ಹರಿಯಾಣದಲ್ಲಿ 10ನೇ ತರಗತಿ ಪರೀಕ್ಷೆ ರದ್ದು!

fhretgre

ದೇಶದಲ್ಲಿ ಕೋವಿಡ್ ಅಟ್ಟಹಾಸದ ಆತಂಕ : NEET ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ!

fryertr

ಬೇಡಿಕೆ ಈಡೇರದಿದ್ದರೆ ಮತ್ತೂಮ್ಮೆ ಹೋರಾಟ : ಬಸವಜಯಮೃತ್ಯುಂಜಯ ಮಹಾಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.