
ತೀರ್ಥಹಳ್ಳಿ: 618 ಕೋಟಿ ರೂ. ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಸಿಎಂ
ಅಡಿಕೆಗೆ ಎಲೆಚುಕ್ಕೆ ರೋಗ ಹರಡದಂತೆ ತಡೆಯಲು 10 ಕೋಟಿ ರೂ.ಹಣ ಬಿಡುಗಡೆ
Team Udayavani, Nov 27, 2022, 5:54 PM IST

ತೀರ್ಥಹಳ್ಳಿ : ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ತೀರ್ಥಹಳ್ಳಿ ಜನರೇ ಸಾಕ್ಷಿ.ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಅಭಿವೃದ್ಧಿ ಮರೆತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಭಾನುವಾರ 618 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಮ್ಮ ಸರ್ಕಾರ 618 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಕ್ರಮ ಕೈಗೊಳ್ಳಲಾಗಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಂಡಿದೆ. ಈ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.
ಮಲೆನಾಡಿನ ಸಮಸ್ಯೆ ಬಗೆಹರಿಸಲು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಜ್ವಲಂತ ಸಮಸ್ಯೆ ಪರಿಹರಿಸುತ್ತೇವೆ. ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಅನುಮತಿ ಪಡೆದು ಪರಿಹರಿಸುವಂತೆ ಸೂಚಿಸಿದ್ದಾರೆ.ಹೀಗಾಗಿ ಸರ್ಕಾರ ಸಂಪೂರ್ಣ ಸರ್ವೇ ನಡೆಸಿ ಕೇಂದ್ರದ ಅನುಮತಿ ಪಡೆದು ಡಿಸೆಂಬರ್ ಸಂತ್ರಸ್ತರ ಸಮಸ್ಯೆ ಪರಿಹರಿಸುತ್ತೇವೆ ಎಂದರು.
ಕನ್ಸರ್ವೇಟರ್ ಫಾರೆಸ್ಟ್ ಆ್ಯಕ್ಟ್ ಜಾರಿಗೆ ಬರುವ ಮೊದಲು ಸಂತ್ರಸ್ತರ ಸಮಸ್ಯೆ ಪರಿಹರಿಸಬಹುದಿತ್ತು.ಆದರೆ ಅಂದಿನ ಸರ್ಕಾರ ಸಮಸ್ಯೆ ಪರಿಹರಿಸಿಲ್ಲ. ಆದರೆ ಇದೀಗ ಅವರೇ ಈ ಸಮಸ್ಯೆ ಮುಂದಿಟ್ಟುಕೊಂಡು ರಾಜಕೀಯ ಮಾಡುತಿದ್ದಾರೆ. ಇದು ಅಕ್ಷಮ್ಯ.ಒಂದು ಸಮಸ್ಯೆಯಿಟ್ಟುಕೊಂಡು ಎಷ್ಟು ಬಾರಿ ರಾಜಕೀಯ ಮಾಡುತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಲವರು ತಮ್ಮ ಮುಳುಗಡೆ ಉಳಿಸಿಕೊಳ್ಳಲು ಶರಾವತಿ ಸಂತ್ರಸ್ಥರ ಸಮಸ್ಯೆ ಬಗ್ಗೆ ಮೊಸಳೆ ಕಣ್ಣೀರು ಸುರಿಸುತಿದ್ದಾರೆ. ಅಡಿಕೆಗೆ ಬಂದಿರುವ ಎಲೆಚುಕ್ಕೆ ರೋಗಕ್ಕೂ ಸೂಕ್ತ ಪರಿಹಾರ ನೀಡುತ್ತೇವೆ. ವಿಜ್ಞಾನಿಗಳಿಗೂ ಸಮಗ್ರ ತನಿಖೆ ನಡೆಸಿ ಪರಿಹಾರ ಕಂಡುಹಿಡಿಯಲು ಹೇಳಿದ್ದೇವೆ. 42 ಸಾವಿರ ಹೆಕ್ಟೇರ್ ಅಡಕೆ ಬೆಳೆಯಿದ್ದು ಈ ಬೆಳೆ ಉಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ.ಮಲೆನಾಡಿನ ಭೂಮಿ ಹಾಗೂ ಈ ಭೂಮಿಯ ಮಕ್ಕಳನ್ನು ಉಳಿಸುವ ಕೆಲಸವನ್ನು ನಮ್ಮಸರ್ಕಾರ ಮಾಡುತ್ತದೆ ಎಂದರು.
ಎಲೆಚುಕ್ಕೆ ರೋಗ ಪರಿಶೀಲನೆ
ಕಳೆದ ಎರಡು ವರ್ಷದಿಂದ ನಿರಂತರವಾಗಿ ಮಳೆ ಬರುತ್ತಿದೆ. ಬೇಸಿಗೆ ಕಾಲದಲ್ಲು ಮಳೆ, ಈ ವರ್ಷ ಮಳೆ ಬಂದಿದ್ದರಿಂದ ಅಡಿಕೆಗೆ ಎಲೆಚುಕ್ಕೆ ರೋಗ ಬಂದಿದೆ. ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡಿದೆ. ತೋಟಗಾರಿಕಾ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಗಾಳಿಯಲ್ಲಿ ಹರಡುತ್ತಿದೆ. 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇದೆ. ರೋಗ ಹರಡದಂತೆ ತಡೆಯಲು 10 ಕೋಟಿ ರೂ.ಹಣ ಬಿಡುಗಡೆ ಮಾಡಿದೆ. ತಜ್ಞರ ತಂಡ ಅಧ್ಯಯನದ ಬಳಿಕ ಪರಿಹಾರದ ಬಗ್ಗೆ ಮಾಹಿತಿ ನೀಡಲಿದೆ. ಎಷ್ಟೇ ಖರ್ಚು ಆದರೂ ಆ ಹಣವನ್ನು ಸರಕಾರ ಭರಿಸಲಿದೆ.ಸರಕಾರ ರೈತರ ಜೊತೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಯಡಿಯೂರಪ್ಪ

ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿಯಲ್ಲಿ ರಾತ್ರೋ ರಾತ್ರಿ ಹೈಡ್ರಾಮಾ: ಪಿಡಿಓ ಎತ್ತಂಗಡಿ, ಆದೇಶ ವಾಪಾಸ್

ಇವರಿಗೆ ಪಕ್ಷದಲ್ಲಿ ಚುನಾವಣೆ ಸಮಿತಿ ಇಲ್ಲವೇ: ಭವಾನಿ ರೇವಣ್ಣ ವಿಚಾರಕ್ಕೆ ಈಶ್ವರಪ್ಪ ವ್ಯಂಗ್ಯ

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ

ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ: ಬಿಎಸ್‌ವೈ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಪ್ರೆಸ್ ಮೀಟ್ ನಲ್ಲಿ ಚಿತ್ರ ನಿರ್ದೇಶಕರ ಮೈಮೇಲೆ ಅಗೋಚರ ಶಕ್ತಿ!

ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಿಂದ ಹೊರಬಿದ್ದ ಸ್ಟಾರ್ ಬ್ಯಾಟರ್: ಸೂರ್ಯಗೆ ಅವಕಾಶ ಸಾಧ್ಯತೆ

ಪುತ್ತೂರು: ಸ್ಕೂಟರ್-ಮಾರುತಿ ವ್ಯಾನ್ ಡಿಕ್ಕಿ; ಸವಾರ ಗಂಭೀರ ಗಾಯ

ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ