ಮದುವೆಗೆ ವಧು ಬೇಕೆಂದು ಎಸ್ಪಿಗೆ ಪತ್ರ ಬರೆದ ಶಿವಮೊಗ್ಗದ ಯುವಕ!
Team Udayavani, Nov 26, 2022, 8:15 AM IST
ಶಿವಮೊಗ್ಗ: ವಧು ಬೇಕೆಂದರೆ ಬ್ರೋಕರ್ ಹುಡುಕಿ ಬಯೋಡಾಟಾ ಕೊಡ್ಬೇಕು. ಅವರು ವಧು ತೋರಿಸಿ ಒಪ್ಪಿಗೆಯಾದರೆ ಮದುವೆ. ಆದರೆ ವಧು ಅನ್ವೇಷಣೆಯಲ್ಲಿ ತೊಡಗಿದ ಭೂಪನೊಬ್ಬ ಶಿವಮೊಗ್ಗ ಎಸ್ಪಿಗೆ ವಧು ಹುಡುಕಿ ಕೊಡಿ ಅಂತ ಪತ್ರ ಬರೆದಿದ್ದಾನೆ.
ಭದ್ರಾವತಿ ಮೂಲದ ಪ್ರವೀಣ ಓ.ಎಸ್ ಎಂಬಾತ ಎಸ್‌ಪಿಗೆ ಪತ್ರ ಬರೆದಿದ್ದು ಈ ಪತ್ರ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ. ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಗೊಲ್ಲ ಸಮುದಾಯಕ್ಕೆ ಸೇರಿದ್ದು, ನನ್ನ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ಅಣ್ಣ ಕೂಡ ಮದ್ವೆಯಾಗಿದ್ದಾನೆ. ನಾನು ಈ ಹಿಂದೆ ಸಾಫ್ಟ್‌ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿದ್ದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡಿದ್ದೆ. ಇದೀಗ ಊರಲ್ಲಿ ವ್ಯವಸಾಯ ಮಾಡ್ಕೊಂಡು ಓಡಾಡ್ಕೊಂಡಿದ್ದೇನೆ. ವಯಸ್ಸು ಮಿತಿ ಮೀರಿರೋದ್ರಿಂದ ಪ್ರವೀಣಣ್ಣಂಗೆ ಜೀವನದಲ್ಲಿ ಜಿಗುಪ್ಸೆ ಬಂದುಬಿಟ್ಟಿದೆ.
ವಧು ಅನ್ವೇಷಣೆಯಲ್ಲಿ ಯಾವುದೂ ಸರಿ ಹೊಂದುತ್ತಿಲ್ಲ. ಹೀಗಾಗಿ ಗೊಲ್ಲ ಸಮುದಾಯದ ಹುಡುಗಿಯನ್ನು ಹುಡುಕಿಕೊಡಿ’ ಎಂದು ಪತ್ರ ಬರೆದಿದ್ದಾನೆ. ಈ ಪತ್ರ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ತರಹೇವಾರಿ ಕಮೆಂಟ್‌ಗಳೂ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸ್ವಾಗತ
ಕೊಪ್ಪಳ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಾರ್ಯಾಚರಣೆ: ದಾಖಲೆ ಇಲ್ಲದ ಕಂತೆ ಕಂತೆ ಹಣ ವಶಕ್ಕೆ
ಹೃದಯಾಘಾತದಿಂದ ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ ನಿಧನ
ಬಿಜೆಪಿಯ ರಾಜಕೀಯ ಪ್ರೇರಿತ ಮೀಸಲಾತಿ ಕಾನೂನಿನೆದುರು ಸೋಲಲಿದೆ: ಎಂ.ಬಿ.ಪಾಟೀಲ್
ಮೀಸಲಾತಿ ಕುರಿತ ಬೊಮ್ಮಾಯಿ ಸರ್ಕಾರದ ತೀರ್ಮಾನಗಳು ಕೇವಲ ಚುನಾವಣಾ ಗಿಮಿಕ್ಕು: ಸಿದ್ದು ಕಿಡಿ