ಪುರಸಭೆಗೆ 12 ಲಕ್ಷ ರೂ. ಕರ ಪಾವತಿ

ಸ್ಪರ್ಧಾ ಆಕಾಂಕ್ಷಿಗಳಿಂದ ಬೊಕ್ಕಸ ಭರ್ತಿ•ಒಟ್ಟಾರೆ 30 ಲಕ್ಷ ರೂ. ಬಾಕಿ ಕರ ಜಮೆಯಾಗುವ ನಿರೀಕ್ಷೆ

Team Udayavani, May 13, 2019, 11:34 AM IST

ತಾಳಿಕೋಟೆ ಪುರಸಭೆ ಹೊರನೋಟ.

ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆ ಘೋಷಣೆಯಾದ ಬಳಿಕ ಉಮೇದುವಾರಿಕೆ ಸಲ್ಲಿಸಲು ಅಗತ್ಯ ಬೇ ಬಾಕಿ ಪ್ರಮಾಣ ಪತ್ರ ಪಡೆಯಲು ತಮ್ಮ ಆಸ್ತಿಕರದ ಜೊತೆಗೆ ಸೂಚಕರ ಆಸ್ತಿ ಕರ ಪಾವತಿಯಿಂದ ಪುರಸಭೆ ಬೊಕ್ಕಸಕ್ಕೆ 12 ಲಕ್ಷ ರೂ.ಗಿಂತ ಅಧಿಕ ಕರ ಬಾಕಿ ಪಾವತಿಯಾಗಿದೆ.

ಪುರಸಭೆಯಿಂದ ಪ್ರತಿ ವರ್ಷ ಕರ ಬಾಕಿ ತುಂಬಲು ಏಷ್ಟೇ ಪ್ರಯತ್ನಿಸಿದರೂ ತಾತ್ಸಾರ ತೋರುತ್ತಿದ್ದ ಕೆಲವರು ಚುನಾವಣೆ ಉಮೇದುವಾರಿಕೆ ಸಲ್ಲಿಸಲು ಮುಂದಾಗಿದ್ದಾರೆ. ತಮ್ಮ ಆಸ್ತಿ ಮತ್ತು ನೀರಿನ ಕರ ಅಲ್ಲದೇ ಇನ್ನಿತರವಾಗಿ ಪುರಸಭೆಗೆ ಕಟ್ಟಬೇಕಾದ ಕರ ಬಾಟಕಿಯ ಜೊತೆಗೆ ನಾಲ್ವರು ಸೂಚಕರ ಕರ ಬಾಕಿಯನ್ನು ಪಾವತಿಸುವ ಹೊಣೆ ಹೊತ್ತುಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಸೂಚಕರಾಗುವ ಪ್ರತಿಯೊಬ್ಬರಿಗೂ ಲಕ್ಕಿ ಆಫರ್‌ ಸಿಕ್ಕಂತಾಗಿದೆ.

ಪುರಸಭೆಗೆ ಆಸ್ತಿ ಕರ, ನೀರಿನ ಕರ ಒಳಗೊಂಡಂತೆ ಇನ್ನಿತರಾಗಿ ಪುರಸಭೆಗೆ ಕಟ್ಟಬೇಕಾದ ಕರವನ್ನು ಪ್ರತಿ ವರ್ಷ ತುಂಬವವರಿಗಿಂತ ಬಾಕಿ ಉಳಿಸಿಕೊಂಡವರೇ ಹೆಚ್ಚಾಗಿದ್ದಾರೆ. ಪುರಸಭೆಯ 23 ವಾರ್ಡ್‌ಗಳ ಪೈಕಿ ಪ್ರತಿ ವಾರ್ಡ್‌ಗೆ 8ರಿಂದ 10 ಸ್ಪರ್ಧಾಕಾಂಕ್ಷಿಗಳು ಹುಟ್ಟಿrಕೊಂಡಿದ್ದಾರೆ. ಕೆಲವರು ರಾಜಕೀಯ ಪಕ್ಷಗಳ ಮೇಲೆ ಸ್ಪರ್ಧೆಗೆ ಇಚ್ಚೆ ಪಟ್ಟರೇ ಇನ್ನೂ ಕೆಲವರು ಪಕ್ಷೇತರವಾಗಿ ಸ್ಪರ್ಧೆಗೆ ಇಚ್ಚೆ ಪಟ್ಟಿದ್ದಾರೆ.

ಪಕ್ಷದಿಂದ ಸ್ಪರ್ಧಿಸುವವರು ಕೇವಲ ಒಬ್ಬ ಸೂಚಕನನ್ನು ಕೊಟ್ಟರೆ ಸಾಕು. ಆದರೆ ಪಕ್ಷೇತರವಾಗಿ ಸ್ಪರ್ಧಿಸುವವರಿಗೆ ನಾಲ್ವರು ಸೂಚಕರ ಅಗತ್ಯವಿದೆ. ಈ ಎಲ್ಲ ಸೂಚಕರ ಕರ ಬಾಕಿ ಸಂಪೂರ್ಣ ತುಂಬಿ ಬೇ ಬಾಕಿ ಪ್ರಮಾಣ ಪತ್ರ ಸಲ್ಲಿಸಿದ್ದರೆ ಸ್ಪರ್ಧಾ ಆಕಾಂಕ್ಷಿ ಸಲ್ಲಿಸಿದ ಉಮೇದುವಾರಿಕೆಗೆ ತೊಂದರೆಯಾಗುವದಿಲ್ಲ. ಚುನಾವಣಾ ಆಯೋಗ ಅಗತ್ಯ ದಾಖಲೆ ಸೂಚಿಸಿದ್ದರಲ್ಲಿ ಬೇ ಬಾಕಿ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ. ಈ ಪ್ರಮಾಣ ಪತ್ರ ಇಲ್ಲದಿದ್ದರೆ ಉಮೇದುವಾರಿಕೆ ತಿರಸ್ಕಾರಗೊಳ್ಳುವ ಸೂಚನೆಯನ್ನು ಚುನಾವಣಾಧಿಕಾರಿಗಳು ಪುರಸಭೆ ಮುಂದುಗಡೆ ಇಟ್ಟಿರುವ ಸೂಚನಾ ಫಲಕದಲ್ಲಿ ಅಳವಡಿಸಿದ್ದಾರೆ.

10 ವರ್ಷದ ಕರ ಬಾಕಿ: ಸಾಮಾನ್ಯವಾಗಿ ಪಟ್ಟಣದ ಬುಹುತೇಕರು ಆಸ್ತಿಕರ ಅಲ್ಲದೇ ನೀರಿನ ಮತ್ತು ಇನ್ನಿತರ ಕರವನ್ನು ಸುಮಾರು 10ಕ್ಕೂ ಹೆಚ್ಚು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದಾರೆ. ಪುರಸಭೆಯಿಂದ ಸಾಕಷ್ಟು ಬಾರಿ ಕರ ಬಾಕಿಗೆ ರಿಯಾಯಿತಿ ಕೊಟ್ಟು ಭಿತ್ತಿ ಪತ್ರ ಅಲ್ಲದೇ ತಿಂಗಳಾನುಗಟ್ಟಲೇ ಡಂಗುರ ಮೊಳಗಿಸಿದರೂ ಯಾವುದೇ ಪ್ರಯೋಜನೆಗೆ ಬಂದಿದ್ದಿಲ್ಲ.

ಆದರೆ ಈ ಬಾರಿಯ ಪುರಸಭೆ ಚುನಾವಣೆ ಪ್ರತಿ ವಾರ್ಡ್‌ನಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಸುಮಾರು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದ ತಮ್ಮ ಆಸ್ತಿ ಕರದ ಜೊತೆಗೆ ಸೂಚಕರ ಕರ ಪಾವತಿಯನ್ನು ತಾವೇ ಮಾಡುತ್ತಿರುವದು ಮೇಲ್ನೋಟಕ್ಕೆ ಕಾಣತೊಡಗಿದೆ. ಇದರಿಂದ ಚುನಾವಣೆ ಅಧಿಸೂಚನೆ ಘೋಷಣೆಯಾದ ಎರಡೇ ದಿನದಲ್ಲಿ 12 ಲಕ್ಷಕ್ಕೂ ಅಧಿಕ ಕರ ಭಾಕಿ ಪುರಸಭೆ ಬೋಕ್ಕಸ ಸೇರಿದೆ.

15ಕ್ಕೆ ಬಿ ಫಾರ್ಮ್ ಘೋಷಣೆ ಸಾಧ್ಯತೆ: ಪಕ್ಷದ ಚಿಹ್ನೆಯಡಿ ಸ್ಪರ್ಧೆ ಬಯಿಸಿ ಈಗಾಗಲೇ ಕೆಲ ವಾರ್ಡ್‌ಗಳಿಂದ ಟಿಕೆಟ್ ಆಕಾಂಕ್ಷಿಗಳು ಆಯಾ ಪಕ್ಷದ ಅಧ್ಯಕ್ಷರ ಬಳಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಬಯಿಸಿ 15 ವಾರ್ಡ್‌ಗಳಿಂದ 32 ಜನರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ದೆ ಬಯಸಿ 8 ವಾರ್ಡ್‌ಗಳಿಂದ 14 ಜನರು ಟಿಕೆಟ್ ಬಯಿಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕೆಲವು ವಾರ್ಡ್‌ಗಳಲ್ಲಿ ಉಮೇದುವಾರಿಕೆ ಸಲ್ಲಿಸುವ ಎದುರಾಳಿ ಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ತಮ್ಮ ಲಾಭ ನಷ್ಟ ಅನುಸರಿಸಿ ಪಕ್ಷವೋ ಅಥವಾ ಪಕ್ಷೇತರವೋ ಎಂಬ ನಿರ್ಧಾರಕ್ಕೆ ಕಾದು ನೋಡುತ್ತಿದ್ದಾರೆ. ಪಕ್ಷದ ಬಿ ಫಾರ್ಮ್ ಬಯಸಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದು ಮೇ 15ರಂದು ಅಂತಿಮಗೊಳಿಸಲಾಗುವದು ಎಂದು ಎರಡೂ ಪಕ್ಷದ ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.

ಬೇ ಬಾಕಿ ಪ್ರಮಾಣ ಪತ್ರ ಬಯಸಿ ಎರಡು ದಿನದಲ್ಲಿ 95 ಜನರು ಅರ್ಜಿ ಸಲ್ಲಿಸಿದ್ದು 84 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 12 ಲಕ್ಷಕ್ಕೂ ಅಧಿಕ ಕರ ಬಾಕಿ ಜಮೆಯಾಗಿದ್ದು ಚುನಾವಣೆ ವೇಳೆಗೆ ಸುಮಾರು 30 ಲಕ್ಷ ರೂ. ಜಮೆಯಾಗುವ ನಿರೀಕ್ಷೆ ಇದೆ.
•ಸುರೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ

ಜಿ.ಟಿ. ಘೋರ್ಪಡೆ


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

  • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

  • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

  • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

  • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ