
ಬಂಧಿಸಿರುವ ಮಹಾರಾಷ್ಟ್ರದ ಹಸುಕರುಗಳ ಬಿಡುಗಡೆ ಮಾಡಲು ಮನವಿ
Team Udayavani, Mar 26, 2023, 4:44 PM IST

ಶಿರಾ: ಮಹಾರಾಷ್ಟ್ರ ರೈತರ ಹಸುಕರುಗಳನ್ನು ಬಂಧಿಸಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ್ ಮುರಳೀಧರ್‌ಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಧನಂಜಯಾರಾಧ್ಯ, ಮಹಾ ರಾಷ್ಟ್ರದ ರೈತರು ಚಿಂತಾಮಣಿ ಹಸುಗಳ ಸಂತೆ ಯಲ್ಲಿ ಖರೀದಿಸಿ 110 ಹೈಬ್ರಿಡ್ ಎಚ್‌ಎಫ್ ತಳಿ ಹಸು ಸಾಗಾಣೆ ಮಾಡುತ್ತಿದ್ದಾಗ ಮಾ.3ರಂದು ತುಮಕೂರು ನಗರ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖ ಲಿಸಿ, ಶಿರಾ ತಾಲೂಕಿನ ಚಿಕ್ಕಬಾಣಗೆರೆ ಸರ್ಕಾರಿ ಗೋಶಾಲೆಗೆ ಕಳುಹಿಸಿದ್ದಾರೆ ಎಂದು ಹೇಳಿದರು.
ಬಂಧಿಸಿರುವ ಹಸುಗಳು ಹಾಲು ಕರೆಯುತ್ತವೆ ಮತ್ತು ಗರ್ಭ ಧರಿಸಿವೆ. ಗೋಶಾಲೆಗೆ ಬಂದ ಮೇಲೆ 40 ಹಸುಗಳು ಕರು ಹಾಕಿವೆ. ಕೆಲವು ಹಾಕುವ ಹಂತದಲ್ಲಿವೆ. ಎಲ್ಲಾ ಹಸುಗಳು 75000 ರೂ.ನಿಂದ 1 ಲಕ್ಷ ರೂ. ಬೆಲೆ ಬಾಳುತ್ತವೆ. ಬಂಧಿ ಸಿರುವ ಹಸುಗಳ ಒಟ್ಟು ಮೌಲ್ಯ 1.50 ಕೋಟಿ ರೂ. ಆಗಿದ್ದು, ಎಲ್ಲಾ ಹಸುಗಳು ಸಾಕಾಣಿಕೆ ಮಾಡಲು ಖರೀದಿಸಿ, ಮಹಾರಾಷ್ಟ್ರಕ್ಕೆ ಸಾಗಾಣೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಖಲಾತಿ ಪರಿಶೀಲಿ ಸದೇ, ದುರುದ್ದೇಶದಿಂದ ಕೇಸು ದಾಖಲಿಸಿರುವು ದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ಹಸುಕರುಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣದ್ಯಾಮೇಗೌಡ, ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷ ಲಕ್ಕಣ್ಣ ಕುದುರೆಕುಂಟೆ, ಮುಖಂಡ ರಾದ ಜುಂಜಣ್ಣ, ಜಗದೀಶ್, ನಾರಾಯಣಪ್ಪ, ಪ್ರಕಾಶ್ ಹಲವರು ಹಾಜರಿದ್ದರು. ಅಧಿಕಾರಿಗಳಿಗೆ ತರಾಟೆ: ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿಸಿಲಿನಲ್ಲೇ ಹಸು, ಕರುಗಳನ್ನು ಕಟ್ಟಿ ಹಾಕಿರುವುದನ್ನು ಕಂಡು ಪಶು ಇಲಾಖೆ ಜಿಲ್ಲಾ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ನೆರಳಿನ ವ್ಯವಸ್ಥೆ ಮಾಡಲು ಸೂಚಿಸಿದರು.
ಬಿಸಿಲಿನ ತಾಪಕ್ಕೆ ಹಸುಗಳ ಸಾವು: ಕೆಲವು ಹಸುಗಳು, ಕರುಗಳು ಬಿಸಿಲಿನ ತಾಪ ತಾಳದೇ ಮೃತಪಟ್ಟಿದ್ದು, ಅವುಗಳನ್ನು ಸರಿಯಾಗಿ ಹೂತು ಹಾಕಿಲ್ಲ. ಒಂದೇ ಗುಂಡಿಯಲ್ಲಿ ಮೂರು ನಾಲ್ಕು ಕರುಗಳನ್ನು ಹಾಕಲಾಗಿದೆ. ಸರಿಯಾಗಿ ಮಣ್ಣು ಮುಚ್ಚಿಲ್ಲದ ಕಾರಣ ದುರ್ನಾತ ಬೀರುತ್ತಿದೆ. ಸ್ವತ್ಛತೆ, ಸೌಲಭ್ಯ ಮರೀಚಿಕೆ ಆಗಿದ್ದು, ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರು, ರೈತ ಸಂಘದವರಿಂದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ, ಭಾನುವಾರ ನೆರಳಿಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸಬೇಕು, ಹಿಂಡಿ, ರಾಗಿ ಹುಲ್ಲು ಹಾಗೂ ಜೋಳದ ತೆನೆ ಕತ್ತರಿಸಿ ರಾಸುಗಳಿಗೆ ನೀಡಬೇಕು, 15 ಗೋಪಾಲಕರನ್ನು ನೇಮಿಸಬೇಕು, ಸತ್ತ ಕರುಗಳನ್ನು ಸೂಕ್ತವಾಗಿ ಸುಡಬೇಕು. ಒಬ್ಬ ಪಶು ವೈದ್ಯ ಸ್ಥಳದಲ್ಲೇ ಇದ್ದು ರಾಸುಗಳಿಗೆ ಚಿಕಿತ್ಸೆ ನೀಡಬೇಕು. ಔಷಧ ಕೊರತೆ ಉಂಟಾಗಬಾರದು, ಇನ್ನು ಮುಂದೆ ಏನಾದರೂ ಹಸು, ಕರು ಸಾವನ್ನಪಿದ್ರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ಎಲ್.ಮುರಳೀಧರ್, ತಹಶೀಲ್ದಾರ್, ಶಿರಾ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
