

Team Udayavani, May 12, 2019, 2:54 PM IST
ತುಮಕೂರು: ತಾಲೂಕಿನ ಬೆಳ್ಳಾವಿ ಹೋಬಳಿಯ ಬೊಮ್ಮೆ ಗೌಡನಪಾಳ್ಯ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಶನಿವಾರದಿಂದ ಆರಂಭ ಗೊಂಡಿದ್ದು ಜಾತ್ರೆ ಅಂಗವಾಗಿ ನಡೆಯುವ ಧಾರ್ಮಿಕ ಗೋಷ್ಠಿ ಮೇ 13ರಂದು ನಡೆಯಲಿದೆ. ಜಾತ್ರಾ ಮಹೋತ್ಸವ ಶನಿವಾರ ಬಸವೇಶ್ವರ ಸ್ವಾಮಿಯನ್ನು ಗಂಗಾ ಸ್ಥಾನಕ್ಕೆ ಶ್ರೀ ಸಿದ್ದರಬೆಟ್ಟ ಕ್ಷೇತ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಸ್ವಾಮಿಗೆ ವಿಶೇಷ ಪೂಜೆ ಗಂಗಾ ಪೂಜೆ ನಡೆಯಿತು. ಮೇ 13 ರಂದು ಬೆಳಗಿನಜಾವ 5.30ಕ್ಕೆ ಸ್ವಾಮಿಗೆ ರುದ್ರಾಭೀಷೇಕ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯ ಲಿದೆ. ಇದೇ ದಿನ ಸಂಜೆ 5.30ಕ್ಕೆ ಧಾರ್ಮಿಕ ಗೋಷ್ಠಿ ನಡೆಯಲಿದ್ದು, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತಮ್ಮ ಡಿಹಳ್ಳಿ ವಿರಕ್ತ ಮಠದ ಅಭಿನವ ಮಲ್ಲಿ ಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿ ಸುವರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರ ಬಸವ ಸ್ವಾಮೀಜಿ ಆಶೀರ್ವಚನ ನೀಡುವರು. ಮೇ 13ರ ಬೆಳಗ್ಗೆಯಿಂದ ಸಂಜೆವರಿಗೆ ದಾಸೋಹ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.
Ad
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ
Koratagere: ಕೈಕೊಟ್ಟ ಮಳೆರಾಯ; ಬಿತ್ತನೆ ಕಾರ್ಯ ಮುಗಿಸದ ರೈತ; ತಾಲೂಕಿನಲ್ಲಿ ಬರದ ಛಾಯೆ
ಬಿಲ್ ಪಾವತಿಸದ ಸರ್ಕಾರಿ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತ: ಡಯಾಲಿಸಿಸ್ ರೋಗಿಗಳ ಪರದಾಟ
Congress: ಸುರ್ಜೇವಾಲರಿಂದ ಅಭಿಪ್ರಾಯ ಸಂಗ್ರಹಕ್ಕೆ ರಾಜಣ್ಣ ಅಸಮಾಧಾನ
ಯಾರು ಕೈ ಹಿಡಿದು ಬಸ್ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ
You seem to have an Ad Blocker on.
To continue reading, please turn it off or whitelist Udayavani.