ಕೃಷಿ ಕಾಯ್ದೆ ವಿರುದ್ಧ ಅಪಪ್ರಚಾರ


Team Udayavani, Dec 27, 2020, 9:10 PM IST

ಕೃಷಿ ಕಾಯ್ದೆ ವಿರುದ್ಧ ಅಪಪ್ರಚಾರ

ತುಮಕೂರು: ರೈತ ಪರವಾಗಿರುವ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ರೈತ ಪರ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌  ಸೇರಿದಂತೆ ಹಲವು ಪಕ್ಷಗಳು ತಮ್ಮ ರಾಜಕೀಯ ಉದ್ದೇಶ ದಿಂದ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶಗೌಡ ಕಿಡಿಕಾರಿದರು.

ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಹಾಗೂ ಕಿಸಾನ್‌ ಸಮ್ಮಾನಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ತಾವು ಬೆಳೆದಬೆಳೆಗಳನ್ನು ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಮುಕ್ತ ಅವಕಾಶವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು.

ಭಯ ಹುಟ್ಟಿಸಿರುವ ವಿರೋಧ ಪಕ್ಷಗಳು: ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಲ್ಲಿಹಲವಾರು ರೈತಪರ ಕ್ರಾಂತಿಕಾರಕ ಅಂಶಗಳಿದ್ದರೂಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ರೈತರಿಗೆಇಲ್ಲ, ಸಲ್ಲದ ಭಯ ಹುಟ್ಟಿಸಿ, ತಪ್ಪುದಾರಿಗೆಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ತಕ್ಕ ಉತ್ತರ ನೀಡುವಂತೆ ಸಲಹೆ: ಕಳೆದ 7 ವರ್ಷಗಳಲ್ಲಿ ಕೇಂದ್ರದ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ನಂತಹ ಪಕ್ಷಗಳು ಕೃಷಿ ಮಸೂದೆಗಳು ಅಪಾಯಕಾರಿಎಂಬ ವಿಷ ಬೀಜ ಭಿತ್ತಿ ಪ್ರತಿಭಟನೆಗೆ ಇಳಿಯುವಂತೆ ಮಾಡಿವೆ. ಹೊಸ ಕಾಯ್ದೆಯಲ್ಲಿರುವ ಒಳ್ಳೆಯ ಅಂಶಗಳನ್ನು ಕರಪತ್ರದಲ್ಲಿ ಮುದ್ರಿಸಿ ಹಂಚಿದ್ದು, ಇದನ್ನು ಓದಿದ ಪ್ರತಿಯೊಬ್ಬರು, ಕಾಯ್ದೆಯ ವಿರುದ್ಧ ಟೀಕೆ ಮಾಡುವವರಿಗೆ ತಕ್ಕ ಉತ್ತರ ನೀಡುವಂತೆ ಸಲಹೆ ನೀಡಿದರು. ಸರ್ಕಾರದ ಸವಲತ್ತುಗಳು ಆರ್ಹ ಫ‌ಲಾನುಭವಿಗೆ ತಲುಪದೆ ಅನ್ಯರ ಪಾಲಾಗುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ, ನೇರವರ್ಗಾವಣೆಯ ಮೂಲಕ ಸಾರ್ವಜನಿಕರ ಹಣ ಪೋಲಾಗದಂತೆ ಮಾಡಿದ್ದಾರೆ.

ರೈತರ ಖಾತೆಗಳಿಗೆ ಹಣ: ದೇಶದ 9 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರದಂತೆ 18 ಸಾವಿರ ಕೋಟಿ ರೂ. ತಲುಪುವಂತೆ ಮಾಡಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಬಿಗಿಯಾದ ನಿಯಮಗಳನ್ನುರೂಪಿಸಿದ ಪರಿಣಾಮ 11 ಸಾವಿರ ಇದ್ದ ಕೊಬ್ಬರಿ ಬೆಲೆ18 ಸಾವಿರ ರೂ.ಗೆ ಹೆಚ್ಚಳವಾಗಿದೆ. 22 ಸಾವಿರ ಇದ್ದ ಕ್ವಿಂಟಲ್‌ ಅಡಕೆ ಬೆಲೆ 33 ಸಾವಿರಕ್ಕೂ ಹೆಚ್ಚಾಗಿದೆ. ಇದು ರೈತರಿಗೆ ವರದಾನವಲ್ಲವೇ ಎಂದು ಪ್ರಶ್ನಿಸಿದ ಅವರು, ರೈತರು ವಿರೋಧಪಕ್ಷಗಳ ಮಾತುಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಷಡ್ಯಂತ್ರ: ಬಿಜೆಪಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌. ಶಿವಪ್ರಸಾದ್‌ ಮಾತನಾಡಿ, ಕೃಷಿ ತಜ್ಞರಾದ ಡಾ.ಸ್ವಾಮಿನಾಥನ್‌ ಅವರ ವರದಿಯಲ್ಲಿ ನಮೂದಿಸಿದ್ದ ಅಂಶಗಳನ್ನು ಮುಂದಿಟ್ಟುಕೊಂಡೆ

2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದೆ.ಅಲ್ಲದೆ ಸರ್ಕಾರ ಸಹ ಕಾಯ್ದೆಗಳನ್ನು ಲೋಪದೋಷಗಳನ್ನು ಸರಿಪಡಿಸಲು ಮುಕ್ತ ಮನಸ್ಸಿನಿಂದ ರೈತರನ್ನು ಆಹ್ವಾನಿಸಿ, ಮಾತುಕತೆ ನಡೆಸಿದೆ. 6 ಬಾರಿ ನಡೆದ ರೈತರೊಂದಿಗಿನ ಮಾತುಕತೆ ವಿಫ‌ಲವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಜಿಪಂ ಸದಸ್ಯ ಗೂಳೂರು ಶಿವಕುಮಾರ್‌, ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಎಪಿಎಂಸಿ ಉಪಾಧ್ಯಕ್ಷ ಶಿವರಾಜು, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ರೈತಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ಸ್ನೇಕ್‌ ನಂದೀಶ್‌, ಮುಖಂಡರಾದ ಓಂಕಾರ ಇತರರು ಇದ್ದರು.

ಟಾಪ್ ನ್ಯೂಸ್

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಅನಂತ ನಾಗೇಶ್ವರನ್‌ ನೂತನ ಸಿಇಎ

ನೂತನ ಸಿಇಎ ಆಗಿ ಅನಂತ ನಾಗೇಶ್ವರನ್ ಅಧಿಕಾರ ಸ್ವೀಕಾರ

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6arrest

ಕುಣಿಗಲ್: ಕತ್ತು ಸೀಳಿ ಹತ್ಯೆ; ಆರೋಪಿಗಳಿಬ್ಬರ ಬಂಧನ

ಸಂವಿಧಾನದ ಸವಿ ನೆನಪಿಗೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು:  ನಾಹಿದಾ ಜಮ್ ಜಮ್

ಸಂವಿಧಾನದ ಸವಿ ನೆನಪಿಗೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು:  ನಾಹಿದಾ ಜಮ್ ಜಮ್

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

ಪುರದಮಠದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಬೇಡ

ಪುರದಮಠದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಬೇಡ

ಬಿಜೆಪಿ ಸರ್ಕಾರದ ಸಾಧನೆ ಜನರಿಗೆ ತಿಳಿಸಿ

ಬಿಜೆಪಿ ಸರ್ಕಾರದ ಸಾಧನೆ ಜನರಿಗೆ ತಿಳಿಸಿ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!

ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಅನಂತ ನಾಗೇಶ್ವರನ್‌ ನೂತನ ಸಿಇಎ

ನೂತನ ಸಿಇಎ ಆಗಿ ಅನಂತ ನಾಗೇಶ್ವರನ್ ಅಧಿಕಾರ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.