ತಮ್ಮೂರಿನತ್ತ ಬಂಡಿ ಊಡಿದ ಕಾರ್ಮಿಕರು


Team Udayavani, Apr 28, 2021, 7:24 PM IST

covid effect

ತುಮಕೂರು: ಹುಟ್ಟಿಸಿದ ಶಿವ ಹುಲ್ಲು ಮೇಸಲ್ಲ.ಸಪ್ಪೋ, ಹುರಳಿ ಕಾಳ್ಳೋ ತಿಂದು ಕೊಂಡು ಹೇಗೋನಮ್ಮ ಹಳ್ಳಿಯಲ್ಲಿ ಬದುಕು ನಡೆಸುತ್ತೇವೆ. ಈ ಪಟ್ಟಣದಸಹವಾಸವೇ ಬೇಡ ಎಂದು ಕೂಲಿ ಕಾರ್ಮಿಕರುಕೊರೊನಾ ಹಿನ್ನೆಲೆ ಆದ ಲಾಕ್‌ಡೌನ್‌ಗೆ ಹೆದರಿ ನಗರಬಿಟ್ಟು ತಮ್ಮ ಊರಿನತ್ತ ಪ್ರಯಾಣ ಬೆಳಸಿದರು.

ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಕೂಲಿಗಾಗಿಬಂದು ತಮ್ಮ ಬದುಕು ಕಟ್ಟಿ ಕೊಂಡವರ ಬದುಕನ್ನುಕೊರೊನಾ ಹಾಳು ಮಾಡುತ್ತಿದೆ. ಹೇಗೊ ಕೊರೊನಾಕಡಿಮೆ ಯಾಗಿತ್ತು. ನಮ್ಮ ಬದುಕು ಕಟ್ಟಿಕೊಳ್ಳೋಣಎಂದು ನಗರ ಪ್ರದೇಶಗಳಿಗೆ ಬಂದಿದ್ದಕೂಲಿ ಕಾರ್ಮಿಕರು ಕೊರೊನಾಎರಡನೇ ಆರ್ಭಟಕ್ಕೆ ನಲುಗಿಮತ್ತೆ ತಮ್ಮ ತಮ್ಮಊರುಗಳತ್ತ ಬಂಡಿಊಡಿದ್ದಾರೆ.

ಯಾವುದೇ ಯೋಜನೆಯ ಕಾಮಗಾರಿಗಳು ನಡೆಯಬೇಕಾದರೂ ಹೊರರಾಜ್ಯ, ಹೊರ ಜಿಲ್ಲೆಗಳಿಂದ ಕೂಲಿ ಹರಸಿ ಬರುವಕಾರ್ಮಿಕರು ಪ್ರಮುಖವಾಗಿರುತ್ತಾರೆ. ಜಿಲ್ಲೆಯಲ್ಲಿನಡೆಯುತ್ತಿರುವ ಕಾಮಗಾರಿಗಳಿಗೆ ಪಕ್ಕದಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ,ಗುಜರಾತ್‌, ರಾಜಸ್ಥಾನ.ಉತ್ತರ ಪ್ರದೇಶ ಸೇರಿದಂತೆಬೇರೆ ಬೇರೆ ರಾಜ್ಯಗಳಿಂದವಲಸೆ ಬಂದಿರುವಕಾರ್ಮಿಕರು ನಗರದಹೊರವಲಯಗಳಲ್ಲಿ ಶೆಡ್‌ಗಳನ್ನು ಹಾಕಿಕೊಂಡುಗುತ್ತಿಗೆದಾರರ ಅಧೀನದಲ್ಲಿ ಕೆಲಸಮಾಡುತ್ತಿದ್ದರು.

ಅದೇ ರೀತಿ ರಾಜ್ಯದಉತ್ತರ ಕರ್ನಾಟಕ, ಗುಲ್ಬರ್ಗಾ, ಬಿಜಾಪುರ,ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬೀದರ್‌ತುಮಕೂರು ಜಿಲ್ಲೆಯ ಪಾವಗಡ ಸೇರಿದಂತೆ ವಿವಿಧಕಡೆಗಳಿಂದ ಬಂದಿರುವ ಕಾರ್ಮಿಕರು ಜಿಲ್ಲೆಯಲ್ಲಿ ರಸ್ತೆಕಾಮಗಾರಿ, ಪೈಪ್‌ಲೈನ್‌ ಕಾಮಗಾರಿ ಸೇರಿ ಹಲವುಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದರು.

ಬದುಕು ಕಿತ್ತುಕೊಂಡ ಕೊರೊನಾ: ಕೊರೊನಾಎರಡನೇ ಮಹಾಮಾರಿ ಜಿಲ್ಲೆಯಲ್ಲಿನ ಜನಸಾಮಾನ್ಯರಬದುಕನ್ನು ಕಿತ್ತುಕೊಂಡಿದೆ. ಕಳೆದ ವರ್ಷಕಾಣಿಸಿಕೊಂಡಿದ್ದ ಮೊದಲ ಅಲೆ ಸಾವಿರಾರು ಜನರಬದುಕು ಹಾಳು ಮಾಡಿತ್ತು. ಕೊರೊನಾದಿಂದ ಆದಲಾಕ್‌ಡೌನ್‌ನಿಂದ ಸಾವಿರಾರು ಕಾರ್ಮಿಕರುಕೆಲಸವಿಲ್ಲದೇ ತಮ್ಮ ಊರುಗಳತ್ತ ನಡೆದರು.ನಂತರ ಕೊರೊನಾ ಕಡಿಮೆಯಾಗಿದ ª ಹಿನ್ನೆಲೆಯಲ್ಲಿಮತೆ ¤ ಎಂದಿನಂತೆ ತಮ್ಮ ಕೆಲಸ ಕಾರ್ಯಗಳುಆರಂಭಗೊಂಡಾಗ ಕಾರ್ಮಿಕರು ತಮ್ಮ ಬದುಕುಕಟ್ಟಿಕೊಳ್ಳಲು ಹಳ್ಳಿಗಳಿಂದ ನಗರಕ್ಕೆ ಬಂದು ತಮ್ಮಕೆಲಸ ಆರಂಭಿಸಿದ್ದರು.

ಆದರೆ, ಈಗ ಮತ್ತೆ ಕೊರೊನಾ ಎರಡನೇ ಅಲೆ ತನ್ನರುದ್ರನರ್ತನವನ್ನು ತೋರಲಾರಂಭಿಸಿದ್ದು, ಪ್ರತಿದಿನಸಾವಿರಾರು ಜನರಿಗೆ ಸೋಂಕು ಇರುವುದುಕಂಡುಬರುತ್ತಿದ್ದು, ಇದರಿಂದ ಆತಂಕಗೊಂಡಿರುವಕೂಲಿ ಕಾರ್ಮಿಕರು ಈಗ ಸರ್ಕಾರ ಕೊರೊನಾನಿಯಂತ್ರಿಸಲು 14 ದಿನ ಕರ್ನಾಟಕ ಲಾಕ್‌ಡೌನ್‌ಘೋಷಣೆ ಮಾಡಿದೆ. ಇದರಿಂದ ಎಲ್ಲ ಕೆಲಸಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಇಲ್ಲಿ ಇದ್ದು ಏನುಮಾಡುವುದು ನಮ್ಮ ಹಳ್ಳಿಗಾದರೂ ಹೋದರೆಸಂಬಂಧಿಕರ ಜೊತೆ ಇರಬಹುದು ಎಂದುತುಮಕೂರು ನಗರವನ್ನು ಖಾಲಿ ಮಾಡುತ್ತಿದ್ದಾರೆಕಾರ್ಮಿಕರು.

ವಾಹನಸಂಚಾರ ಅಧಿಕಮಂಗಳವಾರ ಸಂಜೆಯಿಂದ ರಾಜ್ಯ ಸರ್ಕಾರಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ ಮಾಡಿರುವಹಿನ್ನೆಲೆ ಬೆಂಗಳೂರಿನಿಂದ ಸಾವಿರಾರು ಕಾರ್ಮಿಕರುತುಮಕೂರಿನತ್ತ ಹೆಜ್ಜೆ ಹಾಕಿದರು. ರೈಲು, ಬಸ್‌,ಲಾರಿ, ಟ್ಯಾಕ್ಸಿ, ಕಾರು, ಬೈಕ್‌ ಸೇರಿದಂತೆ ವಿವಿಧವಾಹನಗಳಲ್ಲಿ ಕಾರ್ಮಿಕರು ಬರುತ್ತಿದ್ದ ಹಿನ್ನೆಲೆನಗರದ ರಿಂಗ್‌ ರಸ್ತೆಯಲ್ಲಿ ವಾಹನಸಂಚಾರ ಅಧಿಕವಾಗಿತ್ತು.1.50 ಲಕ್ಷ ಕಾರ್ಮಿಕರ ಬದುಕು ಅತಂತ್ರಪ್ರತಿದಿನ ಜಿಲ್ಲೆಯಲ್ಲಿ 1.50 ಲಕ್ಷ ಕೂಲಿ ಕಾರ್ಮಿಕರು ವಿವಿಧ ಹಂತಗಳಲ್ಲಿ ಕೆಲಸ ಮಾಡಿ ತಮ್ಮ ಬದುಕುಕಟ್ಟಿಕೊಂಡಿದ್ದರು. ಆದರೆ, ಕೊರೊನಾ ಮಹಾಮಾರಿಯ ಆರ್ಭಟದಿಂದ ಬುಧವಾರದಿಂದ ಆಗಲಿರುವ 14ದಿನಗಳ ಲಾಕ್‌ಡೌನ್‌ಗೆ ಹೆದರಿ ತುಮಕೂರು ತೊರೆಯುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲಿನ 86,500 ಕಟ್ಟಡಕಾರ್ಮಿಕರು ಇದ್ದು, 11 ಸಾವಿರ ಗಾರ್ಮೆಂಟ್ಸ್‌ ಕಾರ್ಮಿಕರು, 9,000 ಅಸಂಘಟಿತ ಕಾರ್ಮಿಕರು ಇದ್ದಾರೆ.ಇನ್ನೂ ವಿವಿಧ ಬಗೆಯ ಕಾರ್ಮಿಕರು ಸೇರಿ 1.50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದ್ದು, ಇನ್ನೂ ಹಲವುಕಾರ್ಮಿಕರ ನೋಂದಣಿ ಕಾರ್ಮಿಕ ಇಲಾಖೆಯಲ್ಲಿ ಆಗಿಲ್ಲ. ಇವರ ಜೊತೆಗೆ ಪೈಪ್‌ಲೈನ್‌ ಕಾರ್ಮಿಕರು ರಸ್ತೆಕಾರ್ಮಿಕರು ಸೇರಿದಂತೆ ವಿವಿಧ ಕೆಲಸ ಮಾಡುವವರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿಲಕ್ಷಾಂತರ ಕಾರ್ಮಿಕರು ಇದ್ದು, ಲಾಕ್‌ಡೌನ್‌ನಿಂದ ಕಾರ್ಮಿಕರ ಬದುಕು ಮತ್ತೆ ಅತಂತ್ರವಾಗಿ ಬಿಟ್ಟಿದೆ.

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿಯೇದೆ ಪತನದ ನಿಗೂಢ ಕಾರಣ…

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿದೆಯೇ ಪತನದ ನಿಗೂಢ ಕಾರಣ…

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

bommai

ನೈಟ್ ಕರ್ಫ್ಯೂ ಬಗ್ಗೆ ಸದ್ಯದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

17accident

ಉಪ್ಪಿನಂಗಡಿ: ಸರಣಿ ಅಪಘಾತ, ತಪ್ಪಿದ ಭಾರಿ ದುರಂತ

ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ ಮತದಾನ

ಪರಿಷತ್ ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ ಮತದಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಅನುಷ್ಠಾನವಾಗಿಲ್ಲ 

ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಅನುಷ್ಠಾನವಾಗಿಲ್ಲ 

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು

Untitled-1

ಸರ್ಕಾರದಿಂದ ಅನುದಾನ ತಂದು ಗ್ರಾಪಂ ಅಭಿವೃದಿಗೆ ಆದ್ಯತೆ

ಅಪ್ಪು ಪುಣ್ಯಸ್ಮರಣೆ: 250 ಮಂದಿ ನೇತ್ರದಾನಕೆ ನೋಂದಣಿ 

ಅಪ್ಪು ಪುಣ್ಯಸ್ಮರಣೆ: 250 ಮಂದಿ ನೇತ್ರದಾನಕೆ ನೋಂದಣಿ 

MUST WATCH

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

ಹೊಸ ಸೇರ್ಪಡೆ

davanagere news

ಮದ್ಯ ಮಾರಾಟ ನಿಷೇಧ

covid news

ಕೋವಿಡ್‌ ಪತ್ರದ ಚಿಕ್ಕ ಕಾರ್ಡ್‌ಗೆ ಡಿಮ್ಯಾಂಡ್‌

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಭತ್ತದ ಜಮೀನಿಗೆ‌ ನುಗ್ಗಿದ ಕಾಲುವೆ ನೀರು: ಅಪಾರ ಹಾನಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಭತ್ತದ ಜಮೀನಿಗೆ‌ ನುಗ್ಗಿದ ಕಾಲುವೆ ನೀರು: ಅಪಾರ ನಷ್ಟ

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿಯೇದೆ ಪತನದ ನಿಗೂಢ ಕಾರಣ…

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿದೆಯೇ ಪತನದ ನಿಗೂಢ ಕಾರಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.