ಸಂಸ್ಕಾರಯುತ ಶಿಕ್ಷಣ ಕೊಡುವುದು ನಿಜವಾದ ಶಿಕ್ಷಣ: ಡಾ. ಹನುಮಂತನಾಥ ಸ್ವಾಮೀಜಿ


Team Udayavani, Apr 17, 2022, 7:28 PM IST

1-g-fddg

ಕೊರಟಗೆರೆ: ಮಕ್ಕಳಿಗೆ ಕೇವಲ ಪಠ್ಯದ ವಿಷಯ ಆಭ್ಯಾಸ ಮಾಡಿ ಅಂಕ ಗಳಿಸುವುದನ್ನು ಹೇಳಿಕೊಡುವುದಲ್ಲ ಸಂಸ್ಕಾರಯುತ ಶಿಕ್ಷಣ ಹೇಳಿಕೊಡುವುದು ನಿಜವಾದ ಶಿಕ್ಷಣ ಎಂದು ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸಂಸ್ಕಾರ ಶಿಬಿರದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ ಅತ್ಯುತ್ತಮ ಶಿಕ್ಷಣವನ್ನು ಪಡೆದು ಸಮಾಜಲ್ಲಿ ಅತ್ಯುನ್ನತ ಸ್ಥಾನಮಾನ ಗಳಿಸಿರುವಂತಹ ಬಹುತೇಕರ ಪೋಷಕರು ಇಂದು ವೃದ್ದಾಶ್ರಮದಲ್ಲಿ ಇದ್ದಾರೆ ಇದಕ್ಕೆ ಮುಖ್ಯ ಕಾರಣ ಅವರಿಗೆ ಮೌಲ್ಯಯುವ ಶಿಕ್ಷಣ ಸಿಗದಿರುವುದು ಈ ಹಿನ್ನೆಲೆಯಲ್ಲಿ ಮಠದಲ್ಲಿ ಸಂಸ್ಕಾರಯುವ ಶಿಕ್ಷಣಕ್ಕಾಗಿಯೇ ಸಂಸ್ಕಾರ ಶಿಬಿರನ್ನು ಆಯೋಜಿಸಿರುವುದಾಗಿ ತಿಳಿಸಿದರು.

ನಮ್ಮ ನಿತ್ಯದ ಬದುಕಿನಲ್ಲಿ ನಾವು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಿಂದ ಎಷ್ಟು ದೂರವಿರುತ್ತೇವೆಯೋ ನಮ್ಮ ಬದುಕು ಅಷ್ಟು ಸಂತೋಷವಾಗಿರುತ್ತದೆ ಆದರೆ ನಾವು ಇಂದು ಇದನ್ನು ಬಿಟ್ಟು ಒಂದು ನಿಮಿಷವೂ ಇರಲು ಸಾಧ್ಯವಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಾವು ದಾಸರಾಗಿದ್ದೇವೆ ಇದರಿಂದಲೇ ನಮಗೆ ಹಲವು ತೊಂದರೆಗಳು ಆಗುತ್ತಿದ್ದು, ಆದಷ್ಟು ಇವುಗಳಿಂದ ದೂರವಿರುವಂತೆ ಸೂಚಿಸಿದರು.

ಮಠದಲ್ಲಿ ಸಂಸ್ಕೃತ ಶಾಲೆಯನ್ನು ಆರಂಭಿಬೇಕು ಎನ್ನುವ ಕನಸು ನನಸಾಗಿದೆ ಮುಂದಿನ ದಿನದಲ್ಲಿ ಮಠದಲ್ಲಿ ನರ್ಸಿಂಗ್ ಕಾಲೇಜ್ ಮತ್ತು ಬಡ ಮಕ್ಕಳಿಗಾಗಿ ಹೈಟೆಕ್ ಶಾಲೆ ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಹೊಂದಿದ್ದು ಇವುಗಳ ಸ್ಥಾಪನೆಯನ್ನು ಮಾಡಬೇಕಿದ್ದು ಎಲ್ಲರೂ ಸಹಕರಿಸುವಂತೆ ಹೇಳಿದರು.

ತಹಶೀಲ್ದಾರ್ ನಾಹಿದಾ ಮಾತನಾಡಿ ನಾವು ಮಕ್ಕಗೆ ಎಂದೂ ಮೇಲು-ಕೀಳು ಎನ್ನುವ ಭಾವನೆಗಳನ್ನು ತುಂಬಬಾರದು ಹಣಗಳಿಸಲು ಇರುವಂತಹ ಮಾರ್ಗ ಗಳನ್ನೇ ಯಾವಾಗಲು ತಿಳಿಸಬಾರದು, ಅಂತಹ ವಿಚಾರಗಳನ್ನು ಹೇಳಿ ಪ್ರೇರೇಪಿಸುವುದು ನಿಲ್ಲಬೇಕು ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರವನ್ನು ಕಲ್ಪಿಸಬೇಕು, ಪ್ರತಿಯೊಂದು ಮಗುವೂ ಭಿನ್ನವಾಗಿರುತ್ತದೆ ಒಬ್ಬರನ್ನು ತೋರಿಸಿ ಹೀಗೆ ಆಗು ಎನ್ನುವ ಮಾತುಗಳನ್ನು ಬಿಟ್ಟು ಮಗುವಿನಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಜಿ.ಪಂ ಮಾಜಿ ಸದಸ್ಯ ಶಿವರಾಮಯ್ಯ ಮಾತನಾಡಿ, ಸಮಾಜ ಅದಪತ್ತನತ್ತ ಸಾಗಿದೆ ಹಿಂದೆ ಸಂಜೆಯಾದರೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು ಆದರೆ ಇಂದು ಸಮಾಜ ಮತ್ತು ನಮ್ಮ ಸಂಸ್ಕೃತಿ ಬದಲಾಗಿ ದೇವಾಲಯ ಬದಲು ಮದ್ಯದಂಗಡಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ನಮ್ಮ ಮುಂದಿನ ಸಮಾಜಕ್ಕೆ ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದ ನಿರ್ದೇಶಕ ನರಸಿಂಹ ಮೂರ್ತಿ ,ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಚಂದ್ರ, ಧಾರ್ಮಿಕ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ,ಉಪನ್ಯಾಸಕ ಭೋಗಣ್ಣ ಮಾತನಾಡಿದರು.

ವೇದಿಕೆಯಲ್ಲಿ ಎಲೆರಾಂಪು ಗ್ರಾ.ಪಂ ಅಧ್ಯಕ್ಷೆ ಗಂಗಾದೇವಿ, ಬೆಂಗಳೂರಿನ ಅಂಜನಾದ್ರಿ ವಿದ್ಯಾಕೇಂದ್ರದ ಪಿನ್ಸಿಪಾಲ್ ಡಾ. ಗಣೇಶ್, ಉದ್ಯಮಿ ನಿಲೇಶ್ , ಕುಂಚಿಟಿಗ ಸಂಘದ ಮಹಿಳಾ ಅಧ್ಯಕ್ಷೆ ಲಲಿತಾ ಮಲ್ಲಣ್ಣ,ಮಧುಗಿರಿ ಕುಂಚಿಟಿಗರ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ್,ಶಿಕ್ಷಕರಾದ ಕುಮಾರಸ್ವಾಮಿ, ರವಿಚಂದ್ರ,ಜಗದೀಶ್, ಮುಖಂಡರಾದ ಶಶಿಧರ್,ಈರಣ್ಣ, ಕಾಂತರಾಜು, ಚಂದ್ರಶೇಖರ್, ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Mangaluru ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

4-kinigal

Kunigal: ಮನೆ ಬೀಗ ಹೊಡೆದು ಕಳ್ಳತನ

police

Kunigal; ಜೂಜು ಅಡ್ಡೆ ಮೇಲೆ‌‌ ಪೊಲೀಸರ ದಾಳಿ: ನಾಲ್ವರ ಬಂಧನ

death

Kunigal: ವಿದ್ಯುತ್ ಸ್ಪರ್ಶಗೊಂಡು ರೈತ ಸ್ಥಳದಲ್ಲೇ ಮೃತ್ಯು

Crime: ಅಪರಿಚಿತ ವ್ಯಕ್ತಿಗಳಿಂದ ವೃದ್ದೆಗೆ ಮೋಸ; ಮನೆ ಬಾಡಿಗೆ ಪಡೆದು ಚಿನ್ನಾಭರಣ ದೋಚಿ ಪರಾರಿ

Crime: ಅಪರಿಚಿತ ವ್ಯಕ್ತಿಗಳಿಂದ ವೃದ್ದೆಗೆ ಮೋಸ; ಮನೆ ಬಾಡಿಗೆ ಪಡೆದು ಚಿನ್ನಾಭರಣ ದೋಚಿ ಪರಾರಿ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

alchohol

Karnataka: ಬೊಕ್ಕಸ ಭರ್ತಿಗೆ 400 ಹೊಸ ಮದ್ಯದಂಗಡಿ- ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ

ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

Mangaluru ವಿದ್ಯಾರ್ಥಿಗಳ ಬ್ಯಾಗ್‌ ತೂಕ ಇಳಿಕೆ: ಸಚಿವ ಮಧು ಬಂಗಾರಪ್ಪ

dam

Cauvery: ಬೆಂಗಳೂರು ಬಂದ್‌ಗೆ ರೈತ ಹಿತರಕ್ಷಣ ಸಮಿತಿ ಬೆಂಬಲ

1wewqewq

Asian Games; ನಿಖತ್‌ ಗೆಲುವಿನೊಂದಿಗೆ ಬಾಕ್ಸಿಂಗ್‌ ಶುಭಾರಂಭ

ashwath narayan

NEP ಜಾರಿ ಅವಸರದ ಕ್ರಮವಲ್ಲ: ಡಾ| ಸಿ.ಎನ್‌.ಅಶ್ವತ್ಥನಾರಾಯಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.