ಹಿಂದಿನ ತಪ್ಪುಗಳು ಬಗರ್‌ಹುಕುಂನಲ್ಲಿ  ಆಗಬಾರದು


Team Udayavani, May 28, 2022, 4:12 PM IST

Untitled-1

ಮಧುಗಿರಿ: ಕಳೆದ ಅವಧಿಯಲ್ಲಿ ಬಗರ್‌ಹುಕುಂ ಸಮಿತಿಯಿಂದ ಪಕ್ಷಪಾತ-ಜಾತಿವಾದದ ಸೋಂಕುತಗುಲಿ ಕೆಲ ಅರ್ಹ ಫ‌ಲಾನುಭವಿಗಳಿಗೆಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವಕೆಲಸವನ್ನು ನಾವೆಲ್ಲ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಮರಿತಿಮ್ಮನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಕಳೆದ ಬಗರ್‌ಹುಕುಂ ಸಮಿತಿಯಿಂದತುಂಬಾ ಲೋಪವಾಗಿದ್ದು, ಅರ್ಹರನ್ನು ಕಡೆಗಣಿಸಿಜಾತಿ ಆಧಾರದ ಮೇಲೆ ಸಾಗುವಳಿ ಚೀಟಿನೀಡಲಾಗಿದೆ. ಇದರಲ್ಲಿ ಮತ್ತಷ್ಟೂ ಕಾನೂನು ಉಲ್ಲಂಘನೆ ಕಡತಗಳಿದ್ದು, ಫ‌ಲಾನುಭವಿಗಳ ಬಳಿ ರಶೀದಿ ಇದ್ದರೂ ಕಚೇರಿಯಲ್ಲಿ ಅರ್ಜಿಯಿಲ್ಲದಾಗಿದೆ.

ಈ ಬಾರಿ ತಹಶೀಲ್ದಾರ್‌ ಹೊಸ ಆಯಾಮದಲ್ಲಿ ಕಡತ ಪರಿಶೀಲನೆ ಮಾಡುತ್ತಿದ್ದು ಸರಿಪಡಿಸ ಲಾಗುವುದು. ಆದರೆ ಕಳೆದ ಬಾರಿಯ ಪಟ್ಟಿಯಲ್ಲಿಹೆಸರಿದ್ದು ಸಾಗುವಳಿ ಚೀಟಿಯಿಲ್ಲ. ಚೀಟಿ ನೀಡಿದರೆ ಪಹಣಿಯಿಲ್ಲ. ಪಹಣಿ ನೀಡಿದರೆ ಹದ್ದುಬಸ್ತಿಲ್ಲ. ಒಂದೇ ಸ.ನಂ ನಲ್ಲಿ 10 ಜನರ ಹೆಸರಿದ್ದರೂಇಬ್ಬರಿಗೆ ಕೊಟ್ಟು 8 ಜನರಿಗೆ ನೀಡಿಲ್ಲ. ಇಂತಹ ಹಲವಾರು ದೋಷಗಳು ನಡೆದಿವೆ. ಈ ಬಗ್ಗೆ ಯಾರನ್ನೂ ದೂಷಿಸಲ್ಲ. ಆದರೆ, ಕಾನೂನು ಪ್ರಕಾರ ಅರ್ಹರಿರುವ ಎಲ್ಲ ಬಡವರಿಗೆ ಜಮೀನಿನ ಹಕ್ಕು ನೀಡುತ್ತೇನೆ. ಇದರಲ್ಲಿನನಗೆ ಜಾತಿ-ಪಕ್ಷ ಹಾಗೂ ಯಾವುದೂ ಮುಖ್ಯವಲ್ಲ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ತಹಶೀಲ್ದಾರ್‌ಗೆ ಕೆಳ ಹಂತದ ಸಿಬ್ಬಂದಿಗಳು ಪ್ರಾಮಾಣಿಕ ಸಹಕಾರನೀಡಬೇಕು. ಆದರೆ ಕೆಳಹಂತದ ಸಿಬ್ಬಂದಿಗಳ ಸಹಕಾರ ಸಿಗುತ್ತಿಲ್ಲ ಎಂಬ ದೂರು ಬಂದಿದ್ದು ತಪ್ಪು ತಿದ್ದುಕೊಳ್ಳಿ ಎಂದರು.

ಕಚೇರಿಗೆ ಬಂದ ಜನರನ್ನು ಕೂರಿಸಿ ಸಮಾಧಾನದಿಂದ ಮಾತನಾಡಿಸಿ ಕೆಲಸ ಮಾಡಿಕೊಡಿ. 100 ಅರ್ಜಿಗಳು ಬಂದರೆ ಅದರಲ್ಲಿ 50 ಅರ್ಜಿಗಳುಸ್ಥಳದಲ್ಲೇ ಬಗೆಹರಿದರೆ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿದೆ ಎಂದರು.

ಬಗರ್‌ಹುಕುಂ ಸಮಿತಿ ಹಿಂದಿನ ಅವಧಿಯಲ್ಲಿ ಜಾತಿ, ಪಕ್ಷದ ಆಧಾರದ ಮೇಲೆ ಕೆಲಸ ಮಾಡಿದ್ದು,ನನಗೆ ಕಾನೂನು ಮುಖ್ಯವೇ ಹೊರತು ಜಾತಿಮುಖ್ಯವಲ್ಲ. ಎಲ್ಲ ಜಾತಿಯಲ್ಲಿ ಬಡವರಿದ್ದುಅರ್ಹರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಸುರೇಶಾಚಾರ್‌, ಗ್ರೇಡ್‌ 2 ತಹಶೀಲ್ದಾರ್‌ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಕಂದಾಯಾಧಿಕಾರಿ ಜಯರಾಮಯ್ಯ, ವಿಐಗಳಾದ ಪರಮೇಶ್‌, ಶರಣಪ್ಪ, ಶಿವಕುಮಾರ್‌, ಗ್ರಾಮಸಹಾಯಕರಾದ ಗಂಗಾಧರ್‌, ರಾಮಕೃಷ್ಣ,ಕೆಂಚಪ್ಪ, ಓಬಳೇಶ್‌, ಗೋವಿಂದರಾಜು, ಗ್ರಾಪಂಸದಸ್ಯೆ ಗೌರಮ್ಮ, ಗಣೇಶ್‌, ನರಸಿಂಹಮೂರ್ತಿ,ಪಿಡಿಒ ಗೌಡಪ್ಪ, ಮುಖ್ಯಶಿಕ್ಷಕ ವೀರಕ್ಯಾತಪ್ಪ,ಶಿಕ್ಷಕರಾದ ನರಸಿಂಹಮೂರ್ತಿ, ಸಂಪತ್‌ಕುಮಾರ್‌, ಮುಖಂಡ ರಾದ ಶಿವಣ್ಣ, ನಾಗರಾಜು,ಶಿವಕುಮಾರ್‌, ತಾಲೂಕು ಮಟ್ಟದ ಇತರೆಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.