
ಬೇಡಿಕೆ ಈಡೇರಿಕೆಗೆ ಸಮುದಾಯ ಆರೋಗ್ಯ ನೌಕರರ ಆಗ್ರಹ
Team Udayavani, Nov 19, 2022, 5:20 PM IST

ತುಮಕೂರು: ಸೇವೆ ಖಾಯಂ, ಪ್ರೋತ್ಸಾಹಧನ ಹೆಚ್ಚಳ, ಮೇಲಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಪಿ.ಎಚ್.ಸಿ ಉಪಕೇಂದ್ರಗಳಲ್ಲಿ ರಾಷ್ಟ್ರೀ ಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಪ್ರವೇಶ ಪರೀಕ್ಷೆ ಬರೆದು ಗೌರವಧನದ ಆಧಾರದಲ್ಲಿ ನೇಮಕಗೊಂಡಿರುವ ಬಿ.ಎಸ್.ಸಿ ನರ್ಸಿಂಗ್, ಎಂ.ಎಸ್ಸಿ ನರ್ಸಿಂಗ್ ಓದಿರುವ ಸು ಮಾರು 394 ಜನರು ಸಮುದಾಯ ಆರೋಗ್ಯಾ ಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದು, ಮೇಲಧಿಕಾರಿ ಗಳಿಂದ ಕಿರುಕುಳ ಅನುಭವಿಸುತ್ತಿದ್ದು, ಜೊತೆಗೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಖಾಯಂ ಸಹಪಾಠಿಗಳಿಂದಲೂ ದೌರ್ಜನ್ಯ ಒಳಗಾಗುತ್ತಿದ್ದಾರೆ ಎಂಬುದು ಸಂಘದ ಆರೋಪವಾಗಿದೆ.
ಇಡೀ ರಾಜ್ಯದಾದ್ಯಂತ ಶುಕ್ರವಾರ ಎಲ್ಲಾ ಸಮು ದಾಯ ಆರೋಗ್ಯಾಧಿಕಾರಿಗಳು ತಮ್ಮ ಸೇವೆ ಸ್ಥಗಿತಗೊಳಿಸಿ ಎಲ್ಲಾ ಡಿಎಚ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರೋತ್ಸಾಹಧನ ಹೆಚ್ಚಳ: ಸಮುದಾಯ ಆರೋ ಗ್ಯಾಧಿಕಾರಿಗಳ ಬೇಡಿಕೆ ಕುರಿತಂತೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಸಮುದಾಯ ಆರೋಗ್ಯಾಧಿಕಾರಿಗಳ ಸೇವೆ ಖಾಯಂಗೊಳಿಸ ಬೇಕು ಹಾಗೂ ಅವರಿಗೆ ಮುಂಬಡ್ತಿಗೆ ಅವಕಾಶ ನೀಡಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನೇಮಕವಾಗಿರುವ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಬೇರೆ ರಾಜ್ಯಗಳಲ್ಲಿ 15 ಸಾವಿರ ರೂ ನೀಡುತಿದ್ದಾರೆ. ಕರ್ನಾಟಕದಲ್ಲಿ ಮಾತ್ರ 8,000 ಸಾವಿರ ರೂ. ನೀಡಲಾಗುತ್ತಿದೆ. ಬೇರೆ ರಾಜ್ಯಗಳ ರೀತಿ ನಮಗೂ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು ಎಂದರು.
ಮುಕ್ತ ನಿಧಿಯಲ್ಲಿ 50 ಸಾವಿರ ರೂ.ನೀಡಬೇಕು: ಆರೋಗ್ಯ ಉಪಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಷಿಕ ಮುಕ್ತ ನಿಧಿಯಲ್ಲಿ 50 ಸಾವಿರ ರೂ.ನೀಡಬೇಕು ಹಾಗೂ ಅದನ್ನು ನೇರವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಅಂತರ ಜಿಲ್ಲಾ ವರ್ಗಾವಣೆಗೂ ಅವಕಾಶ: ಸಂಘದ ಮಹಿಳಾ ನಿರ್ದೇಶಕಿ ಶಿಲ್ಪಾ ಮಾತನಾಡಿ, ಏನಾದರೂ ಸಲಹೆ ನೀಡಿದರೆ ನೀವು ಖಾಯಂ ನೌಕರರಲ್ಲ ಎಂದು ಕೀಳಾಗಿ ನೋಡುತ್ತಾರೆ. ಮೊದಲು ಇದು ನಿಲ್ಲಬೇಕು. ಇಲ್ಲದಿದ್ದರೆ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ. ಅಂತರ ಜಿಲ್ಲಾ ವರ್ಗಾವಣೆಗೂ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್ ವಾರದ, ಪದಾಧಿಕಾರಿಗಳಾದ ಚನ್ನ ಲಿಂಗೇಶ್‌ಮೂರ್ತಿ, ರೋಹಿತ್‌ರಾಜ್, ನಾಗೇಂದ್ರ, ಕುಮಾರ್, ಶಾಂತಕುಮಾರ್ ಸೇರಿದಂತೆ ಜಿಲ್ಲೆಯ 394 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ

ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ದರಬೆಟ್ಟ ಶ್ರೀಗಳಿಂದ ಅರ್ಜಿ ಆಹ್ವಾನ

ರೈತರಿಗೆ ಸಾಗುವಳಿ ಚೀಟಿ ನೀಡಲು ಮೀನಾಮೇಷ: ಕಂದಾಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಮುಕ ಶಿಕ್ಷಕ ಕರ್ತವ್ಯದಿಂದ ಅಮಾನತು

ಕೊರಟಗೆರೆ ಕುರುಬರ ನಡೆ ಡಾ.ಜಿ.ಪರಮೇಶ್ವರ್ ಕಡೆ; ಜಾಗೃತಿ ಸಮಾವೇಶ
MUST WATCH
ಹೊಸ ಸೇರ್ಪಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು