ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಜೂ.1 ರಂದು 5 ಗ್ಯಾರಂಟಿಗೆ ಅಸ್ತು ಗೃಹ ಸಚಿವ ಸ್ಪಷ್ಟನೆ

Team Udayavani, May 29, 2023, 8:22 PM IST

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಕೊರಟಗೆರೆ: ನಾನೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ. 5 ಗ್ಯಾರಂಟಿಯ ಆರ್ಥಿಕತೆಯ ಬಗ್ಗೆ ನನಗೆ ಗೊತ್ತು. ಸರಕಾರಿ ಆದೇಶ ಮಾಡಿರೋದು ನಿಮಗೆ ಕಾಣುತ್ತಿಲ್ಲವೇ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈಗಾಗಲೇ ತಾಂತ್ರಿಕ ಅನುಮೋದನೆ ನೀಡಿದ್ದೇವೆ. ಬಿಜೆಪಿ ಪಕ್ಷ ವಿನಾಕಾರಣ ಗೊಂದಲ ಸೃಷ್ಟಿಸೋ ಕೆಲಸ ಮಾಡ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಕಿಡಿಕಾರಿದರು.

ಕೊರಟಗೆರೆ ಪಟ್ಟಣದ ರಾಜೀವ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ವಿಜಯೋತ್ಸವ ಸಮಾವೇಶದ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕೆ ಮಾಡಲಿ ನಾವು ಜನಪರ ಆಡಳಿತ ನೀಡುತ್ತೇವೆ. ನಾವು ಹೇಳಿದ ಮಾತಿನ ರೀತಿ ನಡೆದುಕೊಳ್ತಿವಿ. ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಗ್ಯಾರಂಟಿಯನ್ನು ಜಾರಿಗೆ ತರುತ್ತೀವಿ. ಸರಕಾರ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಕ್ಯಾಬಿನೆಟ್ ತಿರ್ಮಾನದ ಬಗ್ಗೆ ಗೊತ್ತಿಲ್ಲವೇ. ಸೋಲಿನ ನೋವು ಅವರ ಮನಸ್ಥಿತಿಯನ್ನೇ ಬದಲು ಮಾಡಿದೆ. ಅವರಿಗೆ ನೇರವಾಗಿ ಮಾತನಾಡೋದಿಕ್ಕೆ ಆಗುತ್ತೀಲ್ಲ ಎಂದು ತಿಳಿಸಿದರು.

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಅಧಿಕಾರ ನೀಡಿದೆ. ನಮ್ಮ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರಕಾರ ಜನಪರವಾದ ಆಡಳಿತ ನೀಡುತ್ತೇ. ಮತದಾರ ಪ್ರಭು ಬದಲಾವಣೆ ಬಯಸಿ ನಮಗೇ ಅಧಿಕಾರ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮತದಾರರ ಆರ್ಶಿವಾದದಿಂದ ಕಾಂಗ್ರೆಸ್ ಪಕ್ಷಕ್ಕೆ ಬರೋಬ್ಬರಿ 135 ಸೀಟ್ ಬಂದಿವೆ. ಕೊರಟಗೆರೆ ಕ್ಷೇತ್ರದ ಜನತೆಯು ನನಗೆ ಆರ್ಶಿವಾದ ಮಾಡಿದ್ದಾರೆ. ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ದಿಯ ಪಥದತ್ತಾ ಕೊಂಡ್ಯೋಯುತ್ತೇನೆ ಎಂದು ಭರವಸೆ ನೀಡಿದರು.

ಹಣಕಾಸು, ಇಂಧನ, ಆಹಾರ, ಸಾರಿಗೆ ಸೇರಿದಂತೆ 5 ಇಲಾಖೆಯ ಮುಖ್ಯಸ್ಥರಿಗೆ ಪ್ರಣಾಳಿಕೆಯ ಜಾರಿಯ ವರದಿ ಸಿದ್ದತೆಗೆ ಸೂಚಿಸಲಾಗಿದೆ. ಜೂ.1 ರ ಸಿಎಂ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಅಧಿಕೃತ ತಿರ್ಮಾನ ಆಗುತ್ತೇ. ಜನರು ನೀಡಿರುವ ತಿರ್ಮಾನದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷವು ಯೋಚನೆ ಮಾಡಲಿ. ನಾವು ಕರ್ನಾಟಕ ಜನರಿಗೆ ನೀಡಿರುವ ಭರವಸೆ ಈಡೇರಿಸುವ ಕೆಲಸ ಮಾಡ್ತೇವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.

ಪೂರ್ವಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಧುಗಿರಿ ಮಾಜಿ ಶಾಸಕ ಗಂಗಹನುಮಯ್ಯ, ಕೊರಟಗೆರೆ ಬ್ಲಾಕ್ ಅಧ್ಯಕ್ಷ ಅರಕೆರೆ ಶಂಕರ್, ಯುವಾಧ್ಯಕ್ಷ ವಿನಯ್, ಮಹಿಳಾಧ್ಯಕ್ಷೆ ಜಯಮ್ಮ, ಮುಖಂಡರಾದ ವಾಲೇಚಂದ್ರಯ್ಯ, ಕೇಶವಮೂರ್ತಿ, ಓಬಳರಾಜು, ಬೈರಪ್ಪ, ಕಾಮರಾಜು ಪ್ರಸನ್ನಕುಮಾರ್, ಹನುಮಾನ್, ಕವಿತಾ, ಎ.ಡಿ.ಬಲರಾಮಯ್ಯ, ಮೈಲಾರಪ್ಪ, ಜಯರಾಮು, ಚಂದ್ರಶೇಖರ್, ವೆಂಕಟಪ್ಪ, ವೆಂಕಟಬಾಬು, ಮೀನುಮಂಜಣ್ಣ ಸೇರಿದಂತೆ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಇದ್ದರು.

ಸ್ವಾಮೀಗಳ ಆರ್ಶಿವಾದ ಪಡೆದ ಗೃಹ ಸಚಿವ..

ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಸಂಜೆ ಎಲೆರಾಂಪುರ ಶ್ರೀನರಸಿಂಹಗಿರಿ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿಯವರ ಆರ್ಶಿವಾದ ಪಡೆದರು. ಇದೇ ಸಂದರ್ಭದಲ್ಲಿ ಎಲೆರಾಂಪರ ಶ್ರೀಮಠದ ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಸ್ವಾಮೀಜಿಗಳಿಗೆ ಭರವಸೆ ನೀಡಿದರು.

ಟಾಪ್ ನ್ಯೂಸ್

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

tdy-13

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ

World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Vijayapura: ಸ್ಮಾರಕ ವಿಕೃತಿಗೊಳಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಕೆ

Vijayapura: ಸ್ಮಾರಕ ವಿಕೃತಿಗೊಳಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಕೆ

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

tdy-17

Sandalwood: ‘ಟಿಆರ್‌ಪಿ ರಾಮ’ನಿಗಾಗಿ ಮತ್ತೇ ಬಂದ್ರು ಮಹಾಲಕ್ಷ್ಮೀ

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

tdy-16

ಪೊಲೀಸ್‌ ವಿಜಯ: ‘ಮರೀಚಿʼ ಟೀಸರ್‌ ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.