Koratagere: ರೋಗಿಗಳ ಜೊತೆ ವೈದ್ಯ ಗಲಾಟೆ; ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ


Team Udayavani, Jun 25, 2024, 8:35 PM IST

11-koratagere

ಕೊರಟಗೆರೆ: ನೀನೇನು ಎಸಿನಾ ಅಥವಾ ಡಿಸಿನಾ.. ನಿನ್ನಿಂದ ನಾನು ಹೆದರೋಕೆ.. ನಿನ್ನ ಹೇಸರೇನು ಹೇಳಿ ನೋಡು.. ನಾನೇನು ಮಾಡ್ತೀನಿ ಅಂತಾ ಗೊತ್ತಾಗುತ್ತೆ.. ನಾನು ಯಾರಿಗೂ ಹೆದರೋದಿಲ್ಲ.. ಹೆದರಿಸೋಕೆ ಬರಬೇಡಿ ನೀವು.. ನಾನು ಪ್ರಕರಣ ದಾಖಲು ಮಾಡ್ತಿದ್ರೇ ನೀವು ಜೈಲಿಗೆ ಹೋಗ್ತಿರಾ ಹುಷಾರ್ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ ಚಿಕ್ಕರಂಗಯ್ಯನಿಗೆ ಡಾ.ನವೀನ್ ಹೆದರಿಸಿರುವ ಘಟನೆ ಜೂ.25ರ ಮಂಗಳವಾರ ನಡೆದಿದೆ.

ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂ.25ರ ಮಂಗಳವಾರ ಸುಮಾರು ಬೆಳಿಗ್ಗೆ 11 ಗಂಟೆಯ ಸಮಯ ಈ ಘಟನೆ ನಡೆದಿದೆ. ಡಾ.ನವೀನ್ ಜೂ.24ರ ಸೋಮವಾರ ಬೆ.9ರಿಂದ ಜೂ.25ರ ಮಂಗಳವಾರ ಬೆ.9 ರ ವರೆಗೆ ಕರ್ತವ್ಯನಿರತ ವೈದ್ಯರು. ಆದರೆ ಡಾ.ನವೀನ್‌ಗೆ ಜು. 25ರ ಬೆಳಿಗ್ಗೆ 11 ಗಂಟೆಯ ಮೇಲೂ ಆಸ್ಪತ್ರೆಯಲ್ಲಿ ಏನು ಕೆಲಸ ಇತ್ತು ? ವೈದ್ಯರು ಸಮವಸ್ತ್ರ ಧರಿಸದೇ ರೋಗಿಗಳ ಜೊತೆ ವರ್ತಿಸಿದ ರೀತಿ ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೂ ನವೀನ್‌ಗೂ ಸಂಬಂಧ ಏನು.?

ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ್‌ಗೆ ಪ್ರಶ್ನೆ ಮಾಡ್ತಾರೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯ ಡಾ.ನವೀನ್ ಏಕಾಏಕಿ “ಕಿರುಚಬೇಡಿ ಇಲ್ಲಿ ಹೆದರುವವರು ಯಾರು ಇಲ್ಲ… ನಿನ್ನ ಹೆಸರೇನು.. ನಿನಗೆ ಏನ್ ಮಾಡ್ತೀನಿ ನೋಡ್ತಾ ಇರು” ಎನ್ನುತ್ತಾರೆ. ವೈದ್ಯ ಡಾ.ಪುರುಷೋತ್ತಮ ಅವರು ಡಾ.ನವೀನ್‌ಗೆ ಸುಮ್ಮನಿರಲು ಸೂಚಿಸಿದರೂ ಸುಮ್ಮನಾಗದೇ ಜಗಳಕ್ಕೆ ಇಳಿದಿರುವುದು ಎಷ್ಟು ಸರಿ ಎಂಬುವುದಕ್ಕೆ ಆರೋಗ್ಯ ಇಲಾಖೆಯೇ ಸ್ಪಷ್ಟನೇ ನೀಡಬೇಕಾಗಿದೆ.

ಪೊಲೀಸ್ ಠಾಣೆಯಲ್ಲಿ ದೂರು: ಸಾರ್ವಜನಿಕ ಆಸ್ಪತ್ರೆಯ ಡಾ.ನವೀನ್ ಸಮವಸ್ತ್ರ ಇಲ್ಲದೇ ಚಿಕಿತ್ಸೆಗೆ ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈ ಎತ್ತಿ ಹೊಡೆಯಲು ಬಂದು ಜಾತಿಯ ಹೆಸರು ಹೇಳಿ ನಿಂದನೆ ಮಾಡಿದ್ದಾನೆ ಎಂದು ಕೊರಟಗೆರೆ ಪೊಲೀಸ್ ಠಾಣೆಗೆ ದಲಿತ ಮುಖಂಡ ಚಿಕ್ಕರಂಗಯ್ಯ ದೂರು ನೀಡಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪದೇ ಪದೇ ಕರ್ತವ್ಯಲೋಪ ಮಾಡುವ ಡಾ.ನವೀನ್‌ರನ್ನು ತಕ್ಷಣ ಅಮಾನತು ಮಾಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಮನವಿ ಮಾಡಿರುವ ಘಟನೆ ನಡೆದಿದೆ.

ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ಜಾರಿ: ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿವೆ. ವೈದ್ಯರಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ ಸಮಸ್ಯೆ ಸರಿ ಹೋಗಿಲ್ಲ. ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಆಗಮಿಸದೇ ಇದ್ದರೆ ವೈದ್ಯರೇ ನೇರ ಹೊಣೆ ಆಗಬೇಕಾಗುತ್ತೆ. ಚಿಕ್ಕರಂಗಯ್ಯ ಮೇಲೆ ಡಾ.ನವೀನ್ ನೀಡಿರುವ ದೂರು ಪತ್ರ ಕುರಿತು ವಿಚಾರಣೆ ಪ್ರಯುಕ್ತ ಜೂ.25ರ ಮಧ್ಯಾಹ್ನ 3.30ಕ್ಕೆ ಹಾಜರಾಗುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರೌಡಿಗಳಂತೆ ಡಾ.ನವೀನ್ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತು. ಸಮವಸ್ತ್ರವೇ ಇಲ್ಲದ ಕೊರಟಗೆರೆ ಆಸ್ಪತ್ರೆಯ ವೈದ್ಯ ಡಾ.ನವೀನ್, ನನ್ನ ಮೈಮೇಲಿನ ಬಟ್ಟೆ ಎಳೆದು ಜಾತಿನಿಂದನೆ ಮಾಡಿದ್ದಾರೆ. ಡಾ.ನವೀನ್ ಮೇಲೆ ಪ್ರಕರಣ ದಾಖಲಿಸಲು ಠಾಣೆಗೆ ದೂರು ನೀಡಿದ್ದೇನೆ.  -ಚಿಕ್ಕರಂಗಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ತುಮಕೂರು

ಸರಕಾರಿ ಆಸ್ಪತ್ರೆಗೆ ಚಿಕ್ಕರಂಗಯ್ಯ ಚಿಕಿತ್ಸೆಗೆ ಬಂದಾಗ ಡಾ.ನವೀನ್ ನಡುವೆ ವಾಗ್ವಾದ ನಡೆದಿದೆ. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸೌಮ್ಯತೆಯಿಂದ ವರ್ತಿಸಲು ಈಗಾಗಲೇ ನವೀನ್‌ಗೆ ಸೂಚಿಸಲಾಗಿದೆ. ದೂರಿನ ಬಗ್ಗೆ ನನಗೇನು ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಆಗದಂತೆ ಎಲ್ಲರಿಗೂ ಸೂಚಿಸಲಾಗುವುದು. ಆರೋಗ್ಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದೆ. –ಡಾ. ಲಕ್ಷ್ಮೀಕಾಂತ ಟಿ.ಎಸ್., ಮುಖ್ಯ ಆಡಳಿತ ವೈದ್ಯಾಧಿಕಾರಿ, ಕೊರಟಗೆರೆ

ಟಾಪ್ ನ್ಯೂಸ್

World Championship of Legends: India beat Pakistan to win the Legends Championship Final

World Championship of Legends: ಪಾಕ್ ಸೋಲಿಸಿ ಲೆಜೆಂಡ್ಸ್ ಚಾಂಪಿಯನ್ ಶಿಪ್ ಗೆದ್ದ ಭಾರತ

Donald Trump injured in shooting at campaign rally in Pennsylvania

USA; ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಸ್ವಲ್ಪದರಲ್ಲಿಯೇ ಪಾರಾದ ಮಾಜಿ ಅಧ್ಯಕ್ಷ

2-agumbe

Agumbe ಘಾಟಿಯಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ!

Laxmi-hebbalkar-Mang

Primary Education: ಅಂಗನವಾಡಿ ಇನ್ನು “ಸರಕಾರಿ ಮೊಂಟೆಸರಿ”: ಸಚಿವೆ ಲಕ್ಷ್ಮೀ

Nagendra

Valmiki Nigama Scam: ಇನ್ನು ಐದು ದಿನ ಮಾಜಿ ಸಚಿವ ನಾಗೇಂದ್ರ ಇ.ಡಿ. ವಶಕ್ಕೆ

HD-Kumaraswamy

MUDA Scam: ಸರ್ಕಾರದ ತನಿಖೆಯಿಂದ ನ್ಯಾಯ ಸಿಗಲ್ಲ: ಎಚ್‌.ಡಿ.ಕುಮಾರಸ್ವಾಮಿ

Basanagowda-Daddal

Valmiki Nigama Scam: ಶಾಸಕ ಬಸವನಗೌಡ ದದ್ದಲ್‌ ಬಂಧನ ಶೀಘ್ರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-koratagere

Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

MUST WATCH

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

ಹೊಸ ಸೇರ್ಪಡೆ

World Championship of Legends: India beat Pakistan to win the Legends Championship Final

World Championship of Legends: ಪಾಕ್ ಸೋಲಿಸಿ ಲೆಜೆಂಡ್ಸ್ ಚಾಂಪಿಯನ್ ಶಿಪ್ ಗೆದ್ದ ಭಾರತ

Donald Trump injured in shooting at campaign rally in Pennsylvania

USA; ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಸ್ವಲ್ಪದರಲ್ಲಿಯೇ ಪಾರಾದ ಮಾಜಿ ಅಧ್ಯಕ್ಷ

2-agumbe

Agumbe ಘಾಟಿಯಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ!

Laxmi-hebbalkar-Mang

Primary Education: ಅಂಗನವಾಡಿ ಇನ್ನು “ಸರಕಾರಿ ಮೊಂಟೆಸರಿ”: ಸಚಿವೆ ಲಕ್ಷ್ಮೀ

Nagendra

Valmiki Nigama Scam: ಇನ್ನು ಐದು ದಿನ ಮಾಜಿ ಸಚಿವ ನಾಗೇಂದ್ರ ಇ.ಡಿ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.