
ಕೊರಟಗೆರೆ: ಅತ್ಯಾಚಾರದಿಂದ ಬಾಲಕಿ ಗರ್ಭಿಣಿ; ಯುವಕನ ಬಂಧನ
Team Udayavani, Sep 24, 2022, 4:38 PM IST

ಕೊರಟಗೆರೆ: ಯುವಕನೊಬ್ಬ ಅತ್ಯಚಾರವೆಸಗಿದ ಪರಿಣಾಮ ಅಪ್ರಾಪ್ತ ವಯಸ್ಕ ಬಾಲಕಿ ಗರ್ಭಿಣಿಯಾದ ಕಳವಳಕಾರಿ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ನವಿಲುಕುರಿಕೆ ಗ್ರಾಮದ ಮನೋಜ್(ಮನು) ಬಂಧಿತ ಆರೋಪಿಯಾಗಿದ್ದಾನೆ.
ಕಸಬಾ ಹೋಬಳಿಯ ಗೊಲ್ಲರಹಟ್ಟಿ ಗ್ರಾಮದ ಅಪ್ರಾಪ್ತ ವಯಸ್ಕ ಬಾಲಕಿಯು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು, ಸುಮಾರು ಆರು ತಿಂಗಳಿಂದ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿ ತನ್ನ ತಂದೆ- ತಾಯಿಯ ಜತೆ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
ಇತ್ತಿಚಿಗೆ ಬಾಲಕಿಯು ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದು, ಅಜ್ಜಿಯು ಮೊಮ್ಮಗಳನ್ನು ವಿಚಾರಿಸಿದಾಗ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಮೂರುವರೆ ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ.
ನೀನು ಗರ್ಭಿಣಿಯಾಗಲು ಯಾರು ಕಾರಣ ಎಂದು ಕೇಳಿದಾಗ, ಸುಮಾರು ಆರು ತಿಂಗಳ ಹಿಂದೆ ಮನೋಜ್ ಎಂಬುವನು ಪೋನ್ ಮೂಲಕ ಪರಿಚಯವಾಗಿ, ಆಗಾಗ್ಗೆ ಮಾತನಾಡುತ್ತಿದ್ದ, ನಾಲ್ಕು ತಿಂಗಳ ಹಿಂದೆ ಭೇಟಿ ಯಾಗುವಂತೆ ಹೇಳಿದ್ದ. ತೋಟದ ಹತ್ತಿರ ಬಂದು, ಪಕ್ಕದಲ್ಲಿದ್ದ ಹಳ್ಳದೊಳಗೆ ಕರೆದು ಕೊಂಡು ಹೋಗಿ ಬಲವಂತ ಮಾಡಿದ್ದು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬೈಲಮ್ಮ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಅ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು ಸಿಪಿಐ ಸುರೇಶ್ ಹಾಗೂ ಪಿಎಸ್ಐ ನಾಗರಾಜು.ಬಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
