Crime: ಅಪರಿಚಿತ ವ್ಯಕ್ತಿಗಳಿಂದ ವೃದ್ದೆಗೆ ಮೋಸ; ಮನೆ ಬಾಡಿಗೆ ಪಡೆದು ಚಿನ್ನಾಭರಣ ದೋಚಿ ಪರಾರಿ

Team Udayavani, Sep 20, 2023, 8:03 AM IST

Crime: ಅಪರಿಚಿತ ವ್ಯಕ್ತಿಗಳಿಂದ ವೃದ್ದೆಗೆ ಮೋಸ; ಮನೆ ಬಾಡಿಗೆ ಪಡೆದು ಚಿನ್ನಾಭರಣ ದೋಚಿ ಪರಾರಿ

ಕುಣಿಗಲ್ : ಅಪರಿಚಿತ ವ್ಯಕ್ತಿಗಳು ತರಕಾರಿ ವ್ಯಾಪಾರಿಗಳೆಂದು ವೃದ್ದೆಯನ್ನು ನಂಬಿಸಿ, ಆಕೆಯ ಮನೆಯನ್ನು ಬಾಡಿಗೆ ಪಡೆದು, ಮೂರು ದಿನದ ಬಳಿಕ ವೃದ್ದೆಯ ಬಳಿ ಇದ್ದ ಲಕ್ಷಾಂತರೂ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕು ಹುಲಿಯೂರುದುರ್ಗ ಟೌನ್ ಹೊಸಪೇಟೆಯಲ್ಲಿ ನಡೆದಿದೆ.

ಹುಲಿಯೂರುದುರ್ಗ ಹಳೇವೂರು ರಸ್ತೆ ಹೊಸಪೇಟೆಯ ಜಯಲಕ್ಷ್ಮಮ್ಮ  (80) ವಡವೆ ಕಳೆದುಕೊಂಡ ವೃದ್ದೆ.

ಘಟನೆ ವಿವರ :  ವೃದ್ದೆ ಜಯಲಕ್ಷ್ಮಮ್ಮ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬ ಮಗಳು ಬೆಂಗಳೂರು ಮತೊಬ್ಬ ಮಗಳು  ಮೈಸೂರಿನಲ್ಲಿ ವಾಸವಾಗಿದ್ದಾರೆ. ಜಯಲಕ್ಷ್ಮಮ್ಮಒಬ್ಬರೇ ಹುಲಿಯೂರುದುರ್ಗ ಟೌನ್ ಹೊಸಪೇಟೆಯಲ್ಲಿ ವಾಸವಾಗಿದ್ದಾರೆ. ಮೂರು ದಿನದ ಹಿಂದೆ ಅಪರಿಚಿತ ತಾಯಿ, ಮಗ ಜಯಲಕ್ಷ್ಮಮ್ಮ ಅವರ ಮನೆಗೆ ಹೋಗಿ ನಾವು ಬಡವರು ನಾವು ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಹೀಗಾಗಿ ನಿಮ್ಮ ಮನೆ ಪಕ್ಕದಲ್ಲಿ ಇರುವ ಮನೆಯನ್ನು ಬಾಡಿಗೆ ನೀಡುವಂತೆ ಅಜ್ಜಿಯನ್ನು ನಂಬಿಸಿ ಹತ್ತು ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿ ಮನೆಗೆ ಸೇರಿಕೊಂಡರ., ಕಳೆದ ಮೂರು ದಿನಗಳಿಂದ ಮನೆಯಲ್ಲಿ ವಾಸವಾಗಿದ್ದ ಅಪರಿಚಿತರು ರಾತ್ರಿ ಅಜ್ಜಿ ಜೊತೆಯೊಂದಿಗೆ ಊಟ ಮಾಡಿದರು. ಅಜ್ಜಿ ಮಲಗಿದ ಬಳಿಕ ಅಪರಿಚಿತರು ಅಜ್ಜಿಯ ಮನೆಯ ಮತ್ತೊಂದು ಬಾಗಿಲು ಮೂಲಕ ಮನೆ ಒಳಗೆ ಪ್ರವೇಶಿಸಿ ಮನೆಯಲ್ಲಿ ಇದ್ದ ಸುಮಾರು ನಾಲ್ಕು ಲಕ್ಷ ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಅಜ್ಜಿ ಜಯಲಕ್ಷ್ಮಿಮ್ಮ ಬೆಳಗ್ಗೆ ಎದ್ದು ನೋಡಿದಾಗ, ಅಪರಿಚಿತ ತಾಯಿ ಮಗ ಇಬ್ಬರು ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಜಯಲಕ್ಷ್ಮಮ್ಮ ತನ್ನ ಮನೆ  ಒಳಗೆ ಹೋಗಿ ಒಡವೆ ನೋಡಿದಾಗ ಒಡವೆಗಳು ಕಳವಾಗಿದ್ದವು.

ಜಯಲಕ್ಷ್ಮಮ್ಮ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,

ಎಚ್ಚರ ವಹಿಸಿ ಪಿಎಸ್‌ಐ : ಗುರುತು ಪರಿಚಯ ಇಲ್ಲದವರಿಗೆ ಮನೆ ಬಾಡಿಗೆ ಕೊಡಬಾರದು ಅವರಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಪಡೆದು ಪರಿಶೀಲಿಸಿ ಮನೆ ಬಾಡಿಗೆಗೆ ನೀಡಬೇಕು ಇಲ್ಲವಾದಲ್ಲಿ ಅಪರಿಚಿತ ವ್ಯಕ್ತಿಗಳು ನಂಬಿಸಿ ಮೋಸ ಮಾಡಲಿದ್ದಾರೆ. ಸಾರ್ವಜನಿಕರು ಈ ಸಂಬಂಧ ಎಚ್ಚರ ವಹಿಸುವಂತೆ ಪಿಎಸ್‌ಐ ಸುನೀಲ್‌ಕುಮಾರ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-tumkur

Tumkur: ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಹತ್ಯೆ

1-wqeewqe

Kunigal:ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟದ ಇಬ್ಬರು ಗಾಯಾಳುಗಳು ಸಾವು

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

pvs

Malaysia Master ಬ್ಯಾಡ್ಮಿಂಟನ್‌: ಸೆಮಿಫೈನಲ್‌ ಪ್ರವೇಶಿಸಿದ ಸಿಂಧು

Sunil Chhetri

FIFA ವಿಶ್ವಕಪ್‌ ಕ್ವಾಲಿಫೈಯರ್‌; ಭಾರತ ಫುಟ್‌ಬಾಲ್‌ ತಂಡ ಪ್ರಕಟ: ಛೇತ್ರಿಗೆ ವಿದಾಯ ಪಂದ್ಯ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.