
Kunigal News: ಪ್ರತ್ಯೇಕ ರಸ್ತೆ ಅಪಘಾತ… ಇಬ್ಬರು ಮೃತ್ಯು, ಮತ್ತಿಬ್ಬರಿಗೆ ಗಾಯ
Team Udayavani, Apr 5, 2023, 7:19 PM IST

ಕುಣಿಗಲ್ : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮದ ಎನ್.ಆರ್.ಗೋವಿಂದರಾಜು (23) ಹಾಗೂ ಮೂಲತಃ ಬೆಂಗಳೂರು ವಾಸಿ ಹಾಲಿ ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ತೆರೆದಕುಪ್ಪೆಯ ಕೊಪ್ಪಲುಭಾರೆ ಗ್ರಾಮದ ಗಂಗಶಾನಯ್ಯ (42) ಮೃತ ದುರ್ದೈವಿಗಳು.
ಪ್ರಕರಣ 1: ಗಂಗಶಾನಯ್ಯ ಕೆಲಸದ ನಿಮಿತ್ತ ಮಂಗಳವಾರ ಕುಣಿಗಲ್ ಪಟ್ಟಣಕ್ಕೆ ಬಂದು ಬೈಕ್‌ನಲ್ಲಿ ತನ್ನ ಗ್ರಾಮ ತೆರೆದಕುಪ್ಪೆಯ ಕೊಪ್ಪಲುಭಾರೆ ಗ್ರಾಮಕ್ಕೆ ವಾಪಸ್ಸ್ ಆಗುತ್ತಿದ್ದ ವೇಳೆ ಕೊತ್ತಗೆರೆ ಪಾಳ್ಯ ಬಳಿ ಹೆಬ್ಬೂರು ಕಡೆಯಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಗಂಗಶಾನಯ್ಯ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಗಂಗಶಾನಯ್ಯ ಮೃತಪಟ್ಟಿದ್ದಾರೆ.
ಪ್ರಕರಣ 2 : ಮತ್ತೊಂದು ಘಟನೆಯಲ್ಲಿ ಎನ್.ಆರ್.ಗೋವಿಂದರಾಜು ಬೈಕ್‌ನಲ್ಲಿ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮದಿಂದ ಜಿಮ್‌ಗೆ ಕುಣಿಗಲ್ ಪಟ್ಟಣಕ್ಕೆ ಬರುತ್ತಿರಬೇಕಾದರೆ, ಬಾಗೇನಹಳ್ಳಿ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಗೋವಿಂದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಈ ಘಟನೆಯಲ್ಲಿ ಜಗದೀಶ್, ಅಭಿಲಾಷ್‌ಗೆ ತೀವ್ರವಾದ ಗಾಯವಾಗಿದ್ದು, ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಎರಡು ಪ್ರಕರಣಗಳು ಕುಣಿಗಲ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Apple BKC: ಮುಂಬೈನಲ್ಲಿ ದೇಶದ ಮೊದಲ ಆಪಲ್ ಸ್ಟೋರ್ ಆರಂಭ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್
MUST WATCH
ಹೊಸ ಸೇರ್ಪಡೆ
Illicit ಸಂಬಂಧ; ವಿವಾಹಿತೆಗೆ ಬ್ಲಾಕ್ ಮೇಲ್: ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಸದಸ್ಯ ಅರೆಸ್ಟ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?