
ಕುಣಿಗಲ್: ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದು ಗೃಹಿಣಿ ಆತ್ಮಹತ್ಯೆ
Team Udayavani, Jun 1, 2023, 10:16 PM IST

ಕುಣಿಗಲ್: ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಗಿಡದದಾಸನಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗಿಡದದಾಸನಪುರ ಗ್ರಾಮದ ಪವಿತ್ರ ( 25 ) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ,
ಘಟನೆ ವಿವರ: ಪವಿತ್ರ ಹಾಗೂ ಇಕೆಯ ಗಂಡ ಆನಂದ್ ವಿವಿಧ ಸಂಘಗಳಲ್ಲಿ (ಪೈನಸ್ಸ್) 3.50 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲಾ ಮರುಪಾವತಿ ಮಾಡಿರಲಿಲ್ಲ, ಈ ಸಂಬಂಧ ಸಾಲ ನೀಡಿದದರು ಪದೇ ಪದೇ ಮನೆ ಬಳಿಗೆ ಬಂದು ಸಾಲದ ಕತ್ತಿನ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಮೃತ ಪವಿತ್ರ ಅವಳ ಪತಿ ಆನಂದ್ ಸಾಲಗಾರರ ಹಿಂದೆ ತಾಳಲಾರದೆ ಕಳೆದ ಒಂದು ವಾರದ ಹಿಂದೆ ಮನೆ ಬಿಟ್ಟು ಹೊದವರು ಈವರೆಗೂ ಮನೆಗೆ ಹಿಂದಿರಿಗಿಲ್ಲ, ಇದರಿಂದ ಗಾಬರಿಗೊಂಡ ಪವಿತ್ರ ತನ್ನ ತವರು ಮನೆ ನೆಲಮಂಗಲದ ಜಗ್ಗಸಂದ್ರ ಗ್ರಾಮಕ್ಕೆ ಹೋಗಿದರು, ಈ ವಿಚಾರ ತಿಳಿದ ಸಾಲಗಾರರು ಜಗ್ಗಸಂದ್ರ ಗ್ರಾಮಕ್ಕೆ ಹೋಗಿ ಸಾಲದ ಹಣ ಈಗಲೇ ಕಟ್ಟಬೇಕೆಂದು ತೀವ್ರವಾಗಿ ಒತ್ತಾಯಿಸಿ ಬಳಿಕ ಮಂಗಳವಾರದಂದೇ ಗಿಡದದಾಸನಪುರ ಗ್ರಾಮಕ್ಕೆ ಪವಿತ್ರಳನ್ನು ಸಾಲಗಾರರು ಕರೆದುಕೊಂಡು ಬಂದರು, ಬಳಿಕ ಶನಿವಾರ ಬರುತ್ತೇವೆ ಅಷ್ಟರ ಒಳಗೆ ನಮ್ಮ ಹಣ ಕೊಡಬೇಕು, ಎಂದು ಗಡುವು ನೀಡಿ ಹೊದರು ಎನ್ನಲಾಗಿದೆ, ಶನಿವಾರ ಎಲ್ಲಿದ ಹಣ ತಂದು ಕಟ್ಟಲಿ ಎಂದು ಯೋಚನೆ ಮಾಡಿದ ಪವಿತ್ರ ಮನೆಯ ಪ್ಯಾನಿಗೆ ಸೀರೆ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಸಂಬಂದ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ದೇವರಿಗೇ ಪಾಠ ಮಾಡಬಲ್ಲರು ಪಿಎಂ ಮೋದಿ: Rahul Gandhi
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery; ತಮಿಳುನಾಡಿಗೆ ಮತ್ತೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ: ಸಿದ್ದರಾಮಯ್ಯ

ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಗುರಿ: ಅಮೆರಿಕದ ಕಂಪನಿಗಳೊಂದಿಗೆ ಸಚಿವ ಎಂ ಬಿ ಪಾಟೀಲ ಮಾತುಕತೆ

Cauvery issue; ಹೋರಾಟದ ನಡುವೆ ರಾಜ್ಯಕ್ಕೆ ಹಿನ್ನಡೆ; ಮತ್ತೆ 18 ದಿನ ನೀರು ಹರಿಸಲು ಸೂಚನೆ

Cauvery water: ಕಾವೇರಿ ಹೋರಾಟ; ಎಲ್ಲಾ ಪಕ್ಷದ ನಾಯಕರ ಒಗ್ಗಟ್ಟಿಗೆ ಕಿಚ್ಚ ಸುದೀಪ್ ಮನವಿ

Mysore; ನಾನು ಯಾವಾಗಲೂ ಗಟ್ಟಿಯಾಗಿಯೇ ಇರುತ್ತೇನೆ: ಸಿಎಂ ಸಿದ್ದರಾಮಯ್ಯ