ನಿರ್ವಹಣೆ ಕೊರತೆ; 20 ಘಟಕ ಸ್ಥಗಿತ

Team Udayavani, Jan 17, 2020, 2:49 PM IST

ಮಧುಗಿರಿ: ತಾಲೂಕಿನಾದ್ಯಂತ ಇರುವ 234 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 20 ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದೆ.

ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಕ್ಷೇತ್ರದಲ್ಲಿ ಬಹುತೇಕ ಮಂದಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. 1 ಸಾವಿರ ಅಡಿ ಆಳಕ್ಕೆ ಕೊರೆದರೂ ನೀರು ಬಾರದ ಸ್ಥಿತಿ ಇದ್ದು, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ತಾಲೂಕು ಆಡಳಿತಕ್ಕೆ ಸವಾಲಿನ ಕೆಲಸ. ಆದರೂ 300ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿರುವುದ ರಿಂದ ಅಲ್ಪಮಟ್ಟಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ 201 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 12 ಘಟಕಗಳು ನಾನಾ ಕಾರಣಗಳಿಂದ ದುರಸ್ತಿಗೆ ತುತ್ತಾಗಿವೆ.

ಇವುಗಳಲ್ಲಿ 2002-03ನೇ ಸಾಲಿನ ಭಕ್ತರಹಳ್ಳಿ, ಮಾದೇನಹಳ್ಳಿ, ತಿರುಮಲ ದೇವರಹಳ್ಳಿ, ಬೆಲ್ಲದಮಡುಗು, ಶ್ರೀನಿವಾಸಪುರ, ಎಸ್‌. ಅಪ್ಪೇನಹಳ್ಳಿಯ 6 ಘಟಕಗಳು ಕೆಟ್ಟಿದ್ದು, ಒಂದು ಘಟಕ ನಿರ್ವಹಣೆ ಕೊರತೆ ಹಾಗೂ ನೀರಿನ ಅಭಾವದಿಂದ ಸ್ಥಗಿತಗೊಂಡಿದೆ. ಮತ್ತೆ ಕೆಲವು ಕಡೆ ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ದಿಂದ ಸ್ಥಗಿತವಾಗಿದೆ. ಘಟಕಗಳಿ ಾಗಿಯೇ ಕೊಳವೆಬಾವಿ ಕೊರೆಸಲು ತಾಲೂಕು ಆಡಳಿತ ಮುಂದಾಗಿಲ್ಲ. ಕೆಆರ್‌ಐಡಿಎಲ್‌ 16 ನೀರಿನ ಘಟಕ ನಿರ್ಮಾಣ ಮಾಡಿದ್ದು, ಅದರಲ್ಲಿ 6 ಘಟಕಗಳು ಸ್ಥಗಿತವಾಗಿವೆ. ಉಳಿದವುಗಳನ್ನು ಗ್ರಾಮೀಣ ನೀರು ಸರಬರಾಜು ಇಲಾಖೆ ಸುಪರ್ದಿಗೆ ಒಪ್ಪಿಸಿದ್ದಾರೆ. ಈಗ ನಿರ್ವಹಣೆಗಾಗಿ ಟೆಂಡರ್‌ ಕರೆದಿದ್ದು, ಕಾರ್ಯ ಪ್ರಗತಿಯಲ್ಲಿದೆ.

ಕೆಎಂಎಫ್ ಘಟಕ ಉತ್ತಮ: ತಾಲೂಕಿನಲ್ಲಿ ಕೆಎಂಎಫ್ (ತುಮಕೂರು ಹಾಲು ಒಕ್ಕೂಟ) ನಿಂದ 11 ಶುದ್ಧ ಕುಡಿಯುವ ನೀರಿನ ಘಟಕ ತಾಲೂಕಿನಲ್ಲಿ ಆರಂಭಿಸಿದ್ದು, ಎಲ್ಲಾ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಲೋಕೋಪಯೋಗಿ ಇಲಾಖೆಯಿಂದ 6 ಘಟಕ, ಅಲ್ಪಸಂಖ್ಯಾತರ ಇಲಾಖೆಯಿಂದ 7ನೇ ವಾರ್ಡ್‌ನಲ್ಲಿ 1, ಜಾಮೀಯಾ ಮಸೀದಿ ಮುಂಭಾಗ 2, ಅರಣ್ಯ ಇಲಾಖೆ ಬಳಿ, ದಂಡೂರ ಬಾಗಿಲು, ಹಳೆ ತಾಲೂಕು ಕಚೇರಿ ರಸ್ತೆಯಲ್ಲಿ 1 ಘಟಕ ಆರಂಭಿಸಲಾಗಿದೆ. ಇದರಲ್ಲಿ ಅರಣ್ಯ ಇಲಾಖೆ ಬಳಿಯ ಘಟಕ ತಾಂತ್ರಿಕ ದೋಷದಿಂದ ಸ್ಥಗಿತವಾಗಿ 4 ತಿಂಗಳೇ ಕಳೆದಿದ್ದರೂ ಸಂಬಂಧಿ ಸಿದವರು ಇತ್ತ ಕಡೆ ತಿರುಗಿ ನೋಡಿಲ್ಲ. ಈ ಘಟಕಗಳನ್ನು ಪುರಸಭೆ ಸುಪರ್ದಿಗೆ ನೀಡಿದ್ದು, ಶೀಘ್ರ ರಿಪೇರಿ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

-ಮಧುಗಿರಿ ಸತೀಶ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ