ನೀರಿನ ಘಟಕಗಳ ನಿರ್ವಹಣೆ ಕೊರತೆ

Team Udayavani, Jan 2, 2020, 3:00 AM IST

neerina-ghata

ಹುಳಿಯಾರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ಸಾವಿರ ಜನಸಂಖ್ಯೆಗೆ ಕೇವಲ ಮೂರು ನೀರಿನ ಘಟಕಗಳು ನೀರು ಪೂರೈಸುತ್ತಿವೆ. ಅದರಲ್ಲೂ ಧರ್ಮಸ್ಥಳ ಸಂಸ್ಥೆಯ ನೀರಿನ ಘಟಕ ಸ್ಥಾಪನೆಯಾದ 2 ವರ್ಷದಿಂದ ತೊಂದರೆಯಿಲ್ಲದೆ ನೀರು ಪೂರೈಸುತ್ತಿದೆ.

ನಾಲ್ಕೈದು ವರ್ಷದ ಹಿಂದೆ ಡಾ.ವಾಟರ್‌ ಸಂಸ್ಥೆಯಿಂದ ಘಟಕ ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆವಿಗೆ ಶಾಸಕರು, ಸಂಸದರ ನಿಧಿ, ಗ್ರಾಮೀಣ ಕುಡಿಯುವ ನೀರು ಯೋಜನೆ ಸೇರಿ 10 ಘಟಕಗಳು ಸ್ಥಾಪನೆಗೊಂಡಿವೆ. ಆದರೆ ಕೆಲ ಘಟಕಗಳ ನಿರ್ವಹಣೆ ಕೊರತೆಯಿಂದಪಕ್ಕದ ಊರಿನ ಘಟಕಗಳಿಂದ ನೀರು ತರಬೇಕು. ಇಲ್ಲವೇ ಫ್ಲೋರೈಡ್‌ ಯುಕ್ತ ನೀರು ಕುಡಿಯಬೇಕು.

ಹುಳಿಯಾರಿನ ನಾಡಕಚೇರಿ ಬಳಿಯ ಸರ್ಕಾರದ ನೀರಿನ ಘಟಕ, ಪೊಲೀಸ್‌ ಠಾಣೆ ಪಕ್ಕದ ಡಾ.ವಾಟರ್‌ ಘಟಕ ಹಾಗೂ ಪಂಚಾಯಿತಿ ಕಚೇರಿ ಬಳಿಯ ಧರ್ಮಸ್ಥಳ ಸಂಸ್ಥೆಯ ಘಟಕ ಬಿಟ್ಟರೆ ಉಳಿದ ಘಟಕಗಳು ಆಗಾಗ ಕೆಡುತಿರುತ್ತವೆ. ಕೆಟ್ಟು ತಿಂಗಳಾದರೂ ದುರಸ್ತಿ ಮಾಡುವುದಿಲ್ಲ. ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೆ ಘಟಕಗಳ ನಿರ್ವಹಣೆ ಹೊಣೆ ಹೊತ್ತವರ ಕಡೆ ಬೆರಳು ಮಾಡುತ್ತಾರೆ.

ತಾಲೂಕು ಕುಡಿಯುವ ನೀರಿನ ಎಂಜಿನಿಯರ್‌, ಗುತ್ತಿಗೆದಾರರು ಸ್ಪಂದಿಸುವುದಿಲ್ಲ. ಕೆಂಕೆರೆ ರಸ್ತೆಯ ಬಿಎಂಎಸ್‌ ಪಕ್ಕದ ಘಟಕ ಕೆಟ್ಟು ವರ್ಷ ಕಳೆದಿದೆ. ವೈ.ಎಸ್‌.ಪಾಳ್ಯ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯದ ನಿವಾಸಿಗಳು ಶುದ್ಧ ನೀರಿಗೆ ಪರದಾಡಬೇಕು. ಬೈಕ್‌ ಇರುವವರು ಅಕ್ಕಪಕ್ಕದ ಊರಿನ ಘಟಕಗಳಿಂದ ನೀರು ತಂದರೆ ಬೈಕ್‌ ಇಲ್ಲದವರು ಕೊಳವೆ ಬಾವಿ ನೀರು ಕುಡಿಯಬೇಕು.

ದುರ್ಗಾಪರಮೇಶ್ವರಿ ದೇವಾಲಯ ಆವರಣದಲ್ಲಿರುವ ಘಟಕ ನೀರು ಸರಬರಾಜು ಮಾಡಿದ್ದಕ್ಕಿಂತ ಕೆಟ್ಟಿದ್ದೇ ಹೆಚ್ಚು. ಪ್ರಸ್ತುತ ಈ ಘಟಕ ಕೆಟ್ಟಿದ್ದರೂ ದುರಸ್ತಿಗೆ ಇನ್ನೂ ಮುಂದಾಗಿಲ್ಲ. ಎಪಿಎಂಸಿ ಆವರಣದಲ್ಲಿನ ಘಟಕ, ವೈ.ಎಸ್‌.ಪಾಳ್ಯದ ಘಟಕವೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಆರಂಭವಾಗಿಲ್ಲ.

ಘಟಕ ಕೆಟ್ಟರೆ ಅಥವಾ ತಾಂತ್ರಿಕ ಸಮಸ್ಯೆ ತಲೆದೋರಿದರೆ ರಿಪೇರಿ ಮಾಡಲು ಯಾರಿಗೆ ತಿಳಿಸಬೇಕೆಂದು ತಿಳಿಯುವುದಿಲ್ಲ. ಪಪಂ ಅಧಿಕಾರಿಗಳಿಗೆ ಕೇಳಿದರೆ ನಮ್ಮ ಜವಾಬ್ದಾರಿಯಲ್ಲ ಎನ್ನುತ್ತಾರೆ. ನಿರ್ವಹಣೆ ಮಾಡಬೇಕಿರುವ ಕಂಪನಿಯವರು ಘಟಕದ ಹಣ ತಪ್ಪದೆ ಕೊಂಡೊಯ್ಯುತ್ತಾರೆ. 10 ನೀರಿನ ಘಟಕಗಳಿದ್ದರೂ ಶುದ್ಧ ನೀರಿಗೆ ಪರದಾಡುವುದು ತಪ್ಪಿಲ್ಲ.
-ಜಯಲಕ್ಷ್ಮೀ, ಸಾಮಾಜಿಕ ಕಾರ್ಯಕರ್ತೆ

ನೀರಿನ ಘಟಕ ನಿರ್ವಹಣೆ ಬೇರೆ ಬೇರೆ ಕಂಪನಿ ವಹಿಸಿದೆ. ಆದರೆ ಕೆಟ್ಟರೆ ಜನರು ಪಂಚಾಯಿತಿಗೆ ಬಂದು ಕೇಳುತ್ತಾರೆ. ಸಣ್ಣಪುಟ್ಟ ರಿಪೇರಿ ಮಾಡಿಸಿ ನೀರು ಕೊಟ್ಟಿದ್ದೇವೆ. ಎಲ್ಲಾ ಘಟಕ ಪಂಚಾಯ್ತಿಗೆ ಬಿಟ್ಟುಕೊಟ್ಟರೆ ಸಮರ್ಪಕವಾಗಿ ನಿರ್ವಹಿಸುತ್ತೇವೆ.
-ಮಂಜುನಾಥ್‌, ಪಪಂ ಮುಖ್ಯಾಧಿಕಾರಿ

* ಎಚ್‌.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

police

Kunigal;ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಏಳು ಮಂದಿ ಬಂಧನ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.