Udayavni Special

2.75 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ


Team Udayavani, Mar 9, 2021, 6:07 PM IST

Untitled-1

ಕೊರಟಗೆರೆ: ರಾಜ್ಯ ಸದನದಲ್ಲಿ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿದ್ದು ಅದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇನ್ನು ಸದನ ಕಲಾಪಕ್ಕೆ ಮಾಧ್ಯಮಗಳ ನಿಷೇಧ ಪ್ರಜಾಪ್ರಭುತ್ವದಲ್ಲಿ 4ನೇ ಅಂಗವಾದ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯವನ್ನು ಅಡ್ಡಿ ಪಡಿಸಿದಂತಾಗುತ್ತದೆ ಎಂದು ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿ 15 ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ 2.75 ಕೋಟಿ ರೂ.ಗಳ ಕಾಮಗಾರಿಗೆಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಕಾಂಗ್ರೆಸ್‌ನಿಂದ ಜನಧ್ವನಿ ಕಾರ್ಯಕ್ರಮ ಪ್ರಾರಂಭವಾಗಿದ್ದು ರಾಜ್ಯದ ಸಾಕಷ್ಟು ನಾಯ ಕರು, ಈ ಕಾರ್ಯಕ್ರಮದಲ್ಲಿ ಒಟ್ಟಾಗಿ ಶ್ರಮಿಸುತ್ತಿದ್ದೇವೆ. ಆದರೆ, ಹೈಕಮಾಂಡ್‌ ತನಗೆ ನೆರೆಯ ಕೇರಳ ಚುನಾವಣೆ ಉಸ್ತುವಾರಿ ಸಮಿತಿಯಲ್ಲಿ ಜವಾಬ್ದಾರಿ ನೀಡಿದ್ದು, ಎಲ್ಲರೂ ಪಕ್ಷದ ಕೆಲಸನಿಷ್ಠೆಯಿಂದ ಮಾಡುತ್ತಿದ್ದೇವೆಂದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಎತ್ತಿನಹೊಳೆ ಮತ್ತು ಹೇಮಾವತಿ ಕುಡಿಯುವ ನೀರಿನ ಯೋಜನೆಯಿಂದ ಕ್ಷೇತ್ರದ ಕೆರೆಗಳಿಗೆನೀರು ತುಂಬಿಸುವ ಕೆಲಸ ತ್ವರಿತವಾಗಿಆಗಬೇಕಿದೆ. ಈ ಭಾಗದ 19 ಕೆರೆಗೆ 9.50ಕೋಟಿ ರೂ.ಗಳ ವೆಚ್ಚದಲ್ಲಿ ಹೇಮಾವತಿ ಕುಡಿಯುವ ನೀರಿನ ಯೋಜನೆ ಮಂಜೂರಾತಿಕೆಲಸ ಪ್ರಾರಂಭಿಸಿ ಕಾರ್ಯರೂಪದಲ್ಲಿದೆ.ಎತ್ತಿನಹೊಳೆ ಯೋಜನೆಯಲ್ಲಿ ಕೆಸ್ತೂರು, ಕೋರಾ, ಬ್ರಹ್ಮಸಂದ್ರ ಕೆರೆಗಳಿಗೆ ನೀರುಒದಗಿಸಲಾಗುವುದೆಂದರು. ಕೈಗಾರಿಕಾ ವಲಯವಾದ ವಸಂತನರಸಾಪುರದಲ್ಲಿ ನೀರು ಸಂಗ್ರಹಣಾ ಘಟಕ ಸ್ಥಾಪಿಸಿ ಶುದ್ಧೀಕರಣ ಮಾಡಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.

ಲೋಕೋಪಯೋಗಿ, ಕೆಆರ್‌ಐಡಿಎಲ್‌, ಜಿಪಂ, ಗ್ರಾಮೀಣ ಕುಡಿಯುವ ನೀರುನೈರ್ಮಲ್ಯ ಇಲಾಖೆ, ಬೆಸ್ಕಾಂ ಇಲಾಖೆಗಳಡಿ2.75 ಕೋಟಿ ರೂ.ಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಗ್ರಾಮೀಣರಸ್ತೆಗಳ ಅಭಿವೃದ್ಧಿ ಹಿಂದುಳಿದಿದ್ದು ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿ ಚುರುಕಾದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ರಸ್ತೆಗಳು ಸೊರಗಿವೆ.ಅವುಗಳ ಅಭಿವೃದ್ಧಿಗೆ ಇಲಾಖೆ ಮೇಲೆ ಒತ್ತಡಹೇರಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡದವರಿಗೆ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಸಾಕಷ್ಟು ಮನೆ,ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಸಾಮಾನ್ಯ ವರ್ಗದವರಿಗೆ ಮನೆ ಮಂಜೂರಾತಿ ಕಷ್ಟಕರವಾಗಿದ್ದು, ಅವರಿಗೂ ವಿಶೇಷವಾದಯೋಜನೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅರಕೆರೆ ಶಂಕರ್‌, ಕೋಡ್ಲಹಳ್ಳಿ ಅಶ್ವತ್ಥನಾರಾಯಣ್‌, ಗ್ರಾಪಂ ಅಧ್ಯಕ್ಷರಾದ ಚಂದ್ರಕಲಾ, ಶ್ವೇತಾ,

ಮುಖಂಡರಾದ ಕುಂತಿಹಳ್ಳಿ ಗಂಗಾಧರಪ್ಪ,ಚಂದ್ರಶೇಖರ್‌ಗೌಡ, ಎ.ಡಿ. ಬಲರಾಮಯ್ಯ, ದೇವರಾಜು, ಕುಮಾರ್‌, ರಾಜೇಶ್‌, ಸಿದ್ದರಾ ಜು, ಕಿರಣ್‌, ಸಿದ್ದಪ್ಪ, ಚಂದ್ರಶೇಖರ್‌ ಇದ್ದರು.

ಟಾಪ್ ನ್ಯೂಸ್

Migrant workers problem

ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Migrant workers problem

ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು

The discovery of an ancient Vishnu idol

ಪುರಾತನ ವಿಷ್ಣು ವಿಗ್ರಹ ಪತ್ತೆ

Aim to make the Kannada organization literary

ಕನ್ನಡ ಸಂಘಟನೆಗೆ ಸಾಹಿತ್ಯಾಸಕ್ತಿ ಮೂಡಿಸುವ ಗುರಿ

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

Awareness Campaign by MLA

ಕೋವಿಡ್: ಶಾಸಕರಿಂದ ಜಾಗೃತಿ ಅಭಿಯಾನ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

gtrte

ಗದಗ ಜಿಲ್ಲೆಯಲ್ಲಿ ಶ್ರೀರಾಮನವಮಿ ಸರಳ ಆಚರಣೆ

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

juyoyu

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.