ಜೆಇ ಲಸಿಕೆ ಪಡೆದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
Team Udayavani, Dec 5, 2022, 6:35 PM IST
ಮಧುಗಿರಿ: ಪಟ್ಟಣದ ಕೆ.ಆರ್.ಬಡಾವಣೆಯ ಇಬ್ಬರು ವಿದ್ಯಾರ್ಥಿಗಳಿಗೆ ಜೆಇ ಲಸಿಕೆ ಪಡೆದ ಹಿನ್ನಲೆಯಲ್ಲಿ ಉಸಿರಾಟದ ತೊಂದರೆ ಹಾಗೂ ಕೆಮ್ಮು ಹೆಚ್ಚಾದ ಕಾರಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಪರಿಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೆ.ಆರ್.ಬಡಾವಣೆಯ ಸರ್ಕಾರಿ ಶಾಲೆಯ 8 ನೇ ತಗರಗತಿಯ ವಿದ್ಯಾರ್ಥಿಗಳಾದ ಚಂದನ್ ಉಸಿರಾಟದ ತೊಂದರೆ ಅನುಭವಿಸಿದರೆ ಅದೇ ಶಾಲೆಯ ಅದೇ ತರಗತಿಯ ಪೂರ್ಣಿಮಾ ತೀವ್ರ ತರನಾದ ಕೆಮ್ಮಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಕೂಡಲೇ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿ 108 ವಾಹನದಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಸ್ಥಳದಲ್ಲಿ ಬಿಇಓ ಕೃಷ್ಣಮೂರ್ತಿ, ಮುಖ್ಯಶಿಕ್ಷಕಿ ಕಮಲಾನಾಯಕ್ ಹಾಗೂ ಶಿಕ್ಷಕರು ಇದ್ದರು…ದೂರವಾಣಿಯಲ್ಲಿ ಮಾತನಾಡಿದ ಶಾಸಕ ವೀರಭದ್ರಯ್ಯ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ತಿಳಿಸಿ ಡಿಹೆಚ್ಓ ರವರಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಇದನ್ನೂ ಓದಿ: ಒತ್ತಡದ ಜೀವನ: ಪ್ರತಿದಿನ ವಾಕಿಂಗ್ ನಿಂದ ಆರೋಗ್ಯಕ್ಕೆ ಹಲವಾರು ಉಪಯೋಗ…