ಪೊಲೀಸರ ಕಾವಲಿನಲ್ಲಿ ಮಹಿಳಾ ಸಂಘದ ಸಭೆ
Team Udayavani, Dec 22, 2020, 4:07 PM IST
ತುರುವೇಕೆರೆ: ಸಾಮಾನ್ಯವಾಗಿ ಪುರುಷರ ಸಂಘಸಂಸ್ಥೆಗಳ ಸಭೆ ಸಮಾರಂಭಗಳಿಗೆ ಪೊಲೀಸರ ರಕ್ಷಣೆ ಕೇಳುವುದು ಸಹಜ. ಆದರೆ ಮಹಿಳೆಯರು ನಡೆಸುವ ಸಹಕಾರ ಸಂಘದ ಸಭೆಗೆ ಪೊಲೀಸರ ರಕ್ಷಣೆ ಕೋರಿದ ಪ್ರಸಂಗ ಇಲ್ಲಿಯ ಸೋಪನಹಳ್ಳಿಯಲ್ಲಿ ನಡೆದಿದೆ.
ಹೌದು. ತಾಲೂಕಿನ ಸೋಪನಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಇದಕ್ಕೆ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಐದಾರು ಪೊಲೀಸರು ರಕ್ಷಣೆ ನೀಡಿದರು.ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕುಟುಂಬದ ಸದಸ್ಯರೇ ವಹಿವಾಟು ನಡೆಸುತ್ತಿದ್ದಾರೆ. ತಮ್ಮಸದಸ್ಯತ್ವವನ್ನು ಅನಗತ್ಯವಾಗಿ ರದ್ದು ಮಾಡಲಾಗಿದೆ. ಸಂಘದಲ್ಲಿ ಹಲವು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ ಅಲ್ಲಿನ ಕೆಲವು ಮಹಿಳೆಯರು ಮತ್ತುಗ್ರಾಮಸ್ಥರುಆಕ್ಷೇಪವ್ಯಕ್ತಪಡಿಸಿಜಿಲ್ಲಾಉಪನಿಬಂಧಕರು ಮತ್ತು ಸಹಾಯಕ ಉಪನಿಬಂಧಕರಿಗೆ ಲಿಖೀತವಾಗಿ ದೂರಿದ್ದರು. ಎಲ್ಲಾ ದೂರಿಗೂ ಸಾಮಾನ್ಯ ಸಭೆಯಲ್ಲಿ ಉತ್ತರ ಪಡೆದುಕೊಳ್ಳಿ ಎಂಬ ಸಾಮಾನ್ಯ ಉತ್ತರವೂ ಅಧಿಕಾರಿಗಳಿಂದ ಬಂತು.
ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಹಲವು ಮಹಿಳೆಯರು ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆ ಗೈದರು. ಆದರೆ, ಸಂಘದ ಅಧ್ಯಕ್ಷೆ ಜಯಂತಿ ತಮ್ಮ ಸಂಘ ಬಹಳ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕತೆಯಿಂದ ನಡೆಯುತ್ತಿದೆ. ಸಂಘಕ್ಕೆ ಹಾಲು ಹಾಕುತ್ತಿದ್ದ ಸದಸ್ಯೆಯೋರ್ವರು ಹಾಲಿಗೆ ಯೂರಿಯಾ ಬೆರೆಸಿ ಕಲುಷಿತ ಗೊಳಿಸಿದ್ದರು. ಎರಡು ಬಾರಿ ಎಚ್ಚರಿಕೆ ನೀಡಿದ್ದರೂ ಅದನ್ನೆ ಮುಂದುವರಿಸಿದ್ದಾರೆ. ಹಾಗಾಗಿ, ಸಂಘದಿಂದ ಅವರನ್ನು ತೆಗೆಯಲಾಗಿದೆ ಎಂದರು.
ಇದನ್ನೆ ನೆವ ಮಾಡಿಕೊಂಡುಕೆಲವರು ತಮ್ಮ ಸಂಘದ ವಿರುದ್ಧ ಇಲ್ಲ ಸಲ್ಲದ ದೂರು ಹೊರಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು. ಇದರಿಂದ ಕೆರಳಿದ ಹಲವು ಮಹಿಳೆಯರು, ಸಂಘದಲ್ಲಿ ಒಂದು ಕುಟುಂಬದ ಸದಸ್ಯರೇ ಆಡಳಿತ ಮಂಡಲಿಯ ಹಿಡಿತ ಸಾಧಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ. ತಮಗೆ ಬೇಕಾದವರಿಗೆ ಸಂಘದ ಸದಸ್ಯತ್ವ ನೀಡಲಾಗುತ್ತಿದೆ. ಹಣಕಾಸಿನ ವ್ಯವಹಾರವನ್ನು ಕೇಳುವವರ ಸದಸ್ಯತ್ವವನ್ನು ರದ್ದು ಮಾಡಲಾಗುತ್ತಿದೆ ಎಂದು ದೂರಿದರು.ಈ ವೇಳೆ ಮಾತಿಗೆ ಮಾತು ಬೆಳೆಯಿತು. ಸಂಘದ ಸದಸ್ಯೆಯರ ಪತಿಯಂದಿರೂ ಸಭೆಯ ಬಳಿ ಆಗಮಿಸಿದರು. ಪರಿಸ್ಥಿತಿ ಬಿಗಡಾಯಿಸ ತೊಡಗಿತು.
ಇದರಿಂದ ಎಚ್ಚೆತ್ತ ಪೊಲೀಸರು ಮಧ್ಯಪ್ರವೇ ಶಿಸಿ ಸಂಘದ ಮಹಿಳಾ ಸದಸ್ಯರು ಮತ್ತು ಅವರ ಪತಿರಾಯರನ್ನು ಸಮಾಧಾನ ಪಡಿಸಲು ಹರಸಾಹಸ ಮಾಡಿದರು. ಹಲವು ಗೊಂದಲಗಳ ನಡುವೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ ಅಂತ್ಯಗೊಂಡಿತು. ಸಭೆಯಲ್ಲಿ ಸಂಘದ ಅಧ್ಯಕ್ಷೆ ಜಯಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಗೌರಮ್ಮ, ಜಯ್ಯಮ್ಮ, ವಸಂತ, ಸುಜಾತ, ಕುಮಾರಮ್ಮ, ಸುಧಾರಾಣಿ, ಸವಿತಾ, ಲಕ್ಷ್ಮಮ್ಮ ಮತ್ತು ಮಂಜಮ್ಮ ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಕರ್ನಾಟಕ ಆಕ್ರಮಿತ ಕೆಲಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ: ಉದ್ಧವ್ ಠಾಕ್ರೆ
ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು
ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ
ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ
ಐಆರ್ಬಿ ಕಟ್ಟಡ ಉದ್ಘಾಟನೆ