
Koratagere ಟೋಲ್ ತೆರವಿಗೆ ಗಡುವು ನೀಡಿದ ಸಚಿವ ಕೆ.ಎನ್.ರಾಜಣ್ಣ
ಸಿದ್ದರಬೆಟ್ಟ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶಿವಾದ ಪಡೆದ ಸಹಕಾರಿ ಸಚಿವ
Team Udayavani, May 29, 2023, 7:36 PM IST

ಕೊರಟಗೆರೆ: ಪೆಟ್ರೋಲ್ ಮತ್ತು ಡಿಸೇಲ್‌ಗೆ ನಮ್ಮ ಜನ ತೆರಿಗೆ ಕಟ್ಟೋದಿಲ್ವಾ.. ಸರ್ವಿಸ್ ರಸ್ತೆಯೇ ಇಲ್ಲದೇ ಕೊರಟಗೆರೆ ಕ್ಷೇತ್ರದ ಎರಡು ಕಡೆ ಅವೈಜ್ಞಾನಿಕ ಟೋಲ್ ನಿರ್ಮಾಣ ಆಗಿವೆ.. ಜನರಿಂದ ಹಣ ವಸೂಲಿ ಮಾಡದಂತೆ ಈಗಾಗಲೇ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಮಧುಗಿರಿ ಕ್ಷೇತ್ರದ ಶಾಸಕ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಸುಪ್ರಸಿದ್ದ ಸಸ್ಯಕಾಶಿಯಾದ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಶಾಖಾ ಶ್ರೀಮಠಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಮಾತನಾಡಿದರು.
ಪಿಡ್ಲ್ಯೂಡಿ ಸಚಿವರ ಜೊತೆ ನಾನೇ ಖುದ್ದಾಗಿ ಮಾತನಾಡಿ ಟೋಲ್ ತೆರವು ಮಾಡಿಸ್ತೀನಿ. ಪ್ರವಾಸೋಧ್ಯಮ ನಂಬಿಯೇ ಹತ್ತಾರು ದೇಶಗಳು ಅಭಿವೃದ್ದಿಯ ಪಥದತ್ತಾ ಸಾಗುತ್ತೀವೆ. ಉದ್ಯೋಗ ಸೃಷ್ಟಿಗೆ ಪ್ರವಾಸಿ ಕ್ಷೇತ್ರವು ಹೆಚ್ಚಿನ ಸಹಕಾರಿ ಆಗಲಿದೆ. ಪ್ರವಾಸಿ ಕ್ಷೇತ್ರ ಅಭಿವೃದ್ದಿ ಆದರೇ ಯುವಕರ ಜೀವನಮಟ್ಟ ಸುಧಾರಣೆ ಕಾಣಲಿದೆ. ತುಮಕೂರು ಜಿಲ್ಲೆಯ ಪ್ರವಾಸಿ ಕ್ಷೇತ್ರದ ಅಭಿವೃದ್ದಿಗೆ ಸರಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದರು.
ಸಿದ್ದರಬೆಟ್ಟ ಶ್ರೀಮಠ ಎಂದರೇ ನನಗೇ ತುಂಬಾನೇ ಪ್ರೀತಿ ವಿಶ್ವಾಸ. ಮಧುಗಿರಿ ಕ್ಷೇತ್ರದ ಜನರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಮಾತಿನಂತೆ ನನಗೇ ಸಚಿವ ಸ್ಥಾನ ಸಿಕ್ಕಿದೆ. ೫ವರ್ಷ ಮಧುಗಿರಿ ಕ್ಷೇತ್ರದ ಅಭಿವೃದ್ದಿ ಮತ್ತು ಬಡಜನರ ರಕ್ಷಣೆಗೆ ನಾನು ಸದಾ ಜೊತೆಗೆ ಇರುತ್ತೇನೆ. ನನ್ನನ್ನು ನಂಬಿದ ಜನರ ಜತೆಯಲ್ಲಿದ್ದು ಮಧುಗಿರಿ ಜಿಲ್ಲೆಯ ರಚನೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಭೇಟಿಯ ವೇಳೆ ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮಾಜಿ ಜಿಪಂ ಸದಸ್ಯೆ ಶಾಂತಲಾ ರಾಜಣ್ಣ, ಮುಖಂಡರಾದ ರಾಜ ರವೀಂದ್ರ ನಾಯಕ, ಹನುಮಂತರಾಯಪ್ಪ, ರವೀಶ್, ಗೋವಿಂದರಾಜು, ರಮೇಶ್, ರಾಮಚಂದ್ರಯ್ಯ, ಕೃಷ್ಣಪ್ಪ, ರುದ್ರಮುನಿ, ನಂಜುಂಡ ಸ್ವಾಮಿ ಸೇರಿದಂತೆ ಇತರರು ಇದ್ದರು.
ಸಹಕಾರಿ ಕ್ಷೇತ್ರದ ಕಾಳಜಿ ಮತ್ತು ಸಾಧನೆ ಮಾಡಿರುವ ನಾಯಕ ನಮ್ಮ ಕೆ.ಎನ್.ರಾಜಣ್ಣ. ಸಹಕಾರಿ ಕ್ಷೇತ್ರದಿಂದ ಬಡರೈತರಿಗೆ ಆಗುವ ಅನುಕೂಲದ ಬಗ್ಗೆ ಅವರಿಗೆ ಗೋತ್ತು. ಸಹಕಾರಿ ಕ್ಷೇತ್ರವು ಬಡ ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಮತ್ತು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಎರಡು ಕಣ್ಣು ಎಂದು ವೀರಭದ್ರ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kerur: ಸೋರುತಿಹುದು ಕೆರೂರ ನಾಡಕಚೇರಿ ಮಾಳಗಿ

‘Thalaivar 170’: 32 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ರಜಿನಿ – ಬಿಗ್ ಬಿ ನಟನೆ

Kalaburagi; ಹಿಂಗಾರು ಬೆಳೆಯೂ ಅನುಮಾನ: ಸಚಿವ ಚೆಲುವರಾಯಸ್ವಾಮಿ

Asian Games: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಬೇಟೆ; Video

Homework ಮಾಡದಕ್ಕೆ ತಲೆಗೆ ಹೊಡೆದ ಶಿಕ್ಷಕಿ; ಕುಸಿದು ಬಿದ್ದು 5 ವರ್ಷದ ವಿದ್ಯಾರ್ಥಿ ಮೃತ್ಯು