
ಮಗುವಿನ ನರ ಕತ್ತರಿಸಿ ಹತ್ಯೆ; ಕತ್ತು ಕೂಯ್ದುಕೊಂಡ ತಾಯಿ ಸ್ಥಿತಿ ಗಂಭೀರ
ಮಧುಗಿರಿಯಲ್ಲಿ ಹೃದಯ ವಿದ್ರಾವಕ ಘಟನೆ
Team Udayavani, Jun 9, 2023, 8:27 PM IST

ಮಧುಗಿರಿ:ಒಂದು ವರ್ಷದ ಹೆಣ್ಣು ಮಗುವಿನ ಎಡಗೈನ ನರ ಕತ್ತರಿಸಿದ ಹೆತ್ತ ತಾಯಿ ತಾನೂ ಕತ್ತು ಸೀಳಿಕೊಂಡಿದ್ದು ಗಂಭೀರ ಸ್ಥಿತಿಯಲ್ಲಿದ್ದಾಳೆ. ಈ ಬಗ್ಗೆ ಪತಿ ಶಿವಾನಂದ ಹೇಳಿಕೆ ನೀಡಿದ್ದು ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಚೌಡೇಶ್ವರಿ ಗುಡಿ ಬೀದಿ ವಾಸಿ ಶ್ವೇತಾ (25) ಕೃತ್ಯವೆಸಗಿದ ಮಹಿಳೆ. ಪತಿ ಶಿವಾನಂದ ಹೇಳುವ ಪ್ರಕಾರ ಪತ್ನಿ ಶ್ವೇತ ಮಾನಸಿಕ ಅಸ್ವಸ್ಥೆಯಾಗಿದ್ದಳು. ನನ್ನ ಮಗಳು ಕೃತಿಷಾ (1) ಳನ್ನು ಅವಳೇ ಕೊಂದಿದ್ದಾಳೆಂದು ಆರೋಪಿಸಿದ್ದಾನೆ.
ನರ ಕತ್ತರಿಸಿದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಮಗು ಪ್ರಾಣಬಿಟ್ಟಿದ್ದು ತಾಯಿ ಶ್ವೇತಾಳ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇತ್ತಕಡೆ ಸಂಬಂಧಿಕರು ಈ ರೀತಿ ನಡೆಯಲು ಪತಿ ಶಿವಾನಂದನೇ ಕಾರಣ ಎಂದು ದೂರಿದ್ದಾರೆ. ಪೊಲೀಸರ ತನಿಖೆಯ ಮೂಲಕ ಸತ್ಯ ತಿಳಿದು ಬರಬೇಕಿದೆ.
ಟಾಪ್ ನ್ಯೂಸ್
