ನೀರು, ಮೇವಿಲ್ಲದೇ ಜಾನುವಾರುಗಳಿಗೆ ಸಂಕಷ್ಟ

ಜಿಲ್ಲೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ಕುರಿಗಾಯಿಗಳು • ದನಕರುಗಳನ್ನು ಉಳಿಸಿಕೊಳ್ಳಲು ರೈತರು ಪರದಾಟ

Team Udayavani, May 18, 2019, 4:48 PM IST

ಮೇವು, ನೀರಿ ಇಲ್ಲದೇ ಅಲೆದಾಡುತ್ತಿರುವ ಕುರಿಗಳು

ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶ ವಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬರದ ಸಿಡಿಲು ಜಾನುವಾರುಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ದನ, ಕರುಗಳನ್ನು ಸಾಕಲು ರೈತರು ಪಡಬಾರದ ಪಾಟಲು ಬೀಳುತ್ತಿದ್ದಾರೆ. ಎಲ್ಲಿ ಹೋದರೂ ಮೇವಿಲ್ಲ, ನೀರಿಲ್ಲ. ಅಲ್ಪ ಸ್ವಲ್ಪ ಮೇವಾ ದರೂ ಹೊಲದಲ್ಲಿ ಬರುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ಅದು ಇಲ್ಲದಂತಾಗಿ ಮೇವು ಬ್ಯಾಂಕ್‌ಗಳು ತೆರೆದಿ ದ್ದರೂ, ದೂರದ ಊರಿನ ಜನರು ಜಾನುವಾರುಗಳಿಗೆ ಮೇವು ತರಲು ತೊಂದರೆಯಾಗು ತ್ತಿದೆ. ಮೇ ನಂತರ ಬಿಸಿಲಿನ ಬೇಗೆ ಇನ್ನೂ ಹೆಚ್ಚಾದರೆ, ಜಾನುವಾರುಗಳ ಕುಡಿಯುವ ನೀರು, ಮೇವಿಗಾಗಿ ರೈತರು ತೀವ್ರ ತೊಂದರೆ ಅನುಭವಿಸಲಿದ್ದಾರೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯ ರೈತರು ದನಕರು ಗಳನ್ನು ಕಟ್ಟಿಕೊಂಡು ಕೃಷಿ ಚಟುವಟಿಕೆ ಈ ಹಿಂದಿ ನಿಂದಲೂ ಮಾಡಿಕೊಂಡು ಬರುತ್ತಿದ್ದು, ಇತ್ತೀಚಿನ ವೈಜ್ಞಾನಿಕತೆ ಬೆಳೆದಂತೆ ಹೆಚ್ಚು ಕೃಷಿ ಕೆಲಸದಲ್ಲಿ ತೊಡಗುತ್ತಿದ್ದ ಸ್ವದೇಶಿ ತಳಿಗಳಾದ ಅಮೃತ್‌ ಮಹಲ್, ಹಳ್ಳಿಕಾರ್‌ ತಳಿಗಳನ್ನು ಸಾಕಲಾರದೆ ದಿನೇ ದಿನೆ ಮಾರಾಟ ಮಾಡುತ್ತಿದ್ದಾರೆ. ಅಳಿದುಳಿದು ಇರುವ ದನಕರುಗಳನ್ನು ಉಳಿಸಿಕೊಂಡರೆ ಸಾಕಪ್ಪಾ ಎನ್ನುವುದು ರೈತರ ಮನದಾಳದ ಮಾತಾಗಿದೆ.

ಯಾವ ಹಳ್ಳಿಗೆ ಹೋದರೂ ದನಕರುಗಳ ಹಿಂಡು, ಹಿಂಡು ಗೋ ಮಾಳದ ಕಡೆಗೆ ಮೇಯಲು ಹೋಗು ತ್ತಿದ್ದುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಗೋ ಮಾಳಗಳು, ಗೋ ಕಟ್ಟೆಗಳನ್ನು ಭೂಗಳ್ಳರು ಅಕ್ರಮವಾಗಿ ವಶಪಡಿಸಿ ಕೊಂಡಿರುವಂತೆಯೇ ಸಕಾಲದಲ್ಲಿ ಮಳೆಯಾಗದೇ ದನಕರುಗಳಿಗೆ ಮೇವು ಸಿಗದೆ ಸಂಕಷ್ಟ ದಿನಗಳು ದಿನೇ ದಿನೆ ಹೆಚ್ಚುತ್ತಿವೆ.

ಜಿಲ್ಲೆಯಲ್ಲಿ ಎಷ್ಟಿವೆ ಜಾನುವಾರುಗಳು?: ಜಿಲ್ಲೆಯಲ್ಲಿ ಕಳೆದ 2012ರ ಜಾನುವಾರು ಜನಗಣತಿಯಂತೆ ಜಿಲ್ಲೆಯಲ್ಲಿ 5.27.067 ದನಗಳಿದ್ದು, 1.81.118 ಎಮ್ಮೆಗಳಿವೆ. ಇದಲ್ಲದೇ 10.61.330 ಕುರಿಗಳು, 3.26.890 ಮೇಕೆಗಳು ಜಿಲ್ಲೆಯಲ್ಲಿವೆ. ರಾಜ್ಯದಲ್ಲೇ ಅತಿ ಹೆಚ್ಚು ಕುರಿ ಸಾಕಾಣಿಕೆಯ ಜಿಲ್ಲೆ ಎನ್ನುವ ಹೆಸರು ಪಡೆದಿದ್ದು, ಜಿಲ್ಲೆಯಲ್ಲಿ 10.61.330 ಕುರಿಗಳಿರುವುದು ವಿಶೇಷವಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಕನಿಷ್ಠ ದನಕರುಗಳಿಗೆ ಮೇವಾಗುವಂತೆ ಅಲ್ಲಲ್ಲಿ ಮಳೆಯಾಗುತ್ತಿತ್ತು. ತುಂತುರು ಮಳೆ ಬಿದ್ದು ಕನಿಷ್ಠ ಸೈಕ್ಲೋನ್‌ ಆದರೂ ಬಂದು ಅಲ್ಲಲ್ಲಿ ಹಸಿರು ಹುಲ್ಲು ದನ, ಎಮ್ಮೆ, ಕುರಿ ಮೇಕೆಗಳಿಗೆ ಸಿಗುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳು ಬಂದರೂ ಮಳೆ ಕೊರತೆಯುಂಟಾಗಿ ಬಿಸಿಲ ಝಳ ತೀವ್ರವಾಗಿ ದನ ಕರುಗೆ ಮೇವು ಸಿಗದಂತಾಗಿದೆ.

ಜಾನುವಾರಿಗೆ ಮೇವಿನ ಭೀಕರತೆ ಹೆಚ್ಚಲಿದೆ: ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಈ ವರ್ಷ ಮಳೆ ಇಲ್ಲದೇ ಯಾವ ರೈತರು ಬಣವೆಗಳನ್ನು ಒಟ್ಟಿ ಹುಲ್ಲು ಶೇಖರಣೆ ಮಾಡಿಕೊಂಡಿಲ್ಲ. ಅಲ್ಲಲ್ಲಿ ಅಲ್ಪ, ಸ್ವಲ್ಪ ಇದ್ದ ಮೇವನ್ನು ಮಾರ್ಚ್‌ವರೆಗೆ ಕೆಲ ತಾಲೂಕುಗಳಲ್ಲಿ ರೈತರು ಜಾನುವಾರುಗಳ ನಿಗಾ ವಹಿಸುವರು. ಆದರೆ, ಮೇ ಅಂತ್ಯಕ್ಕೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇನ್ನೂ ತೀವ್ರಗೊಳ್ಳಲಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಇನ್ನು 11 ವಾರಗಳು ಅಲ್ಲಲ್ಲಿ ಮೇವು ಲಭ್ಯವಾಗಲಿದೆ ಎನ್ನುತ್ತಾರೆ. 264519 ಟನ್‌ ಒಣ ಮೇವು ಇದೆ, 586771 ಟನ್‌ ಹಸಿ ಮೇವು ಉತ್ಪಾದನೆಯಾಗುತ್ತದೆ ಎಂದು ಹೇಳುತ್ತಾರೆ.

ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ಸಿರಾ ಮತ್ತು ತಿಪಟೂರು ತಾಲೂಕುಗಳಲ್ಲಿ 21 ಮೇವು ಬ್ಯಾಂಕ್‌ಗಳನ್ನು ತೆರೆಯ ಲಾಗಿದೆ. ಇನ್ನು 8 ಮೇವು ಬ್ಯಾಂಕ್‌ ತೆರೆಯಲು ಸ್ಥಳ ಗುರುತಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರನ ವ್ಯವಸ್ಥೆಗಾಗಿ ಜನವಸತಿ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ.

13 ಲಕ್ಷ ಕುರಿ ಮೇಕೆಗಳು ಮೇವಿಗಾಗಿ ಪರದಾಟ: ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿಸಾಕಾಣಿಕೆ ಹೆಸರಾಗಿ ರುವ ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ದಾರರು ಈಗ ಸಂಕಷ್ಟ ಪಡುವ ದಿನ ಎದುರಾರಿದೆ. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 10.61.330 ಕುರಿಗಳಿದ್ದು, ಈಗ ಈ ಕುರಿಗಳ ಸಂಖ್ಯೆ ಇನ್ನು ಹೆಚ್ಚಾಗಿದೆ. ಜಿಲ್ಲೆಯ ಸಿರಾ, ಮಧುಗಿರಿ, ಚಿಕ್ಕನಾಯಕನ ಹಳ್ಳಿ, ಪಾವಗಡ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚು ಕುರಿ, ಮೇಕೆ, ಸಾಕಾಣಿಕೆಗಾರರು ಇದ್ದು, ತಮ್ಮ ಗ್ರಾಮ ದಲ್ಲಿ ಸಿಗುವ ಹಸಿಮೇವನ್ನು ತಿನ್ನಿಸಿ, ಸಾಕಿ ಸಲುಹಿ, ತಮ್ಮಗೆ ಹಣದ ಅವಶ್ಯಕತೆ ಇರುವಾಗ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಬರದಿಂದ ಮೇವು ಸಿಗದಂತಾಗಿದೆ. ಕುರಿ ಹಿಂಡನ್ನು ಬೇರೆ ಬೇರೆ ಭಾಗ ಗಳಿಗೆ ಹೊಡೆದುಕೊಂಡು ಹೋಗಿ ಸಾಕುವ ಪರಿಸ್ಥಿತಿ ಬಂದಿದೆ. ನೂರಾರು ಕುರಿಗಳೊಂದಿಗೆ ಕುರಿಗಾಹಿಗಳು ಹುಲ್ಲು ಸಿಗುವ ಕಡೆಗಳಿಗೆ ಹೋಗುತ್ತಿರುವುದು, ಜಿಲ್ಲೆಯಲ್ಲಿ ಕಂಡುಬಂದಿದೆ.

ಇದಲ್ಲದೇ 3.26.890 ಮೇಕೆಗಳು ಜಿಲ್ಲೆಯಲ್ಲಿದ್ದು, ಈ ಮೇಕೆಗಳನ್ನು ಬೇರೆಕಡೆ ಹೊಡೆದುಕೊಂಡು ಹೋಗಲು ಸಾಧ್ಯವಾಗದೇ ಸ್ಥಳೀಯ ವಾಗಿಯೇ ಸಿಗುವ ಸೊಪ್ಪು ಸೆದೆಗಳನ್ನು ತಿಂದು ಬದುಕುತ್ತಿದ್ದವು. ಆದರೆ, ಈಗ ಈ ಮೇಕೆಗಳಿಗೂ ಸೊಪ್ಪು ಸಿಗದ ಸ್ಥಿತಿಯಾಗಿದೆ. ಆದರಿಂದ ಕುರಿ, ಮೇಕೆಗಳು ಮೇವು ಮತ್ತು ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿವೆ.

ಜಿಲ್ಲೆಯಲ್ಲಿ ಆವರಿಸಿದೆ ಭೀಕರ ಬರ: ಕಳೆದ 40 ವರ್ಷಗಳಲ್ಲಿ ಕಂಡಿರದಷ್ಟು ಭೀಕರ ಬರ ಜಿಲ್ಲೆಯನ್ನು ಆವರಿಸಿದ್ದು, 10 ತಾಲೂಕುಗಳಲ್ಲಿಯೂ ಬರ ಪೀಡಿತ ತಾಲೂಕುಗಳಾಗಿವೆ. ಜಾನುವಾರುಗಳಿಗೆ ನೀರು ಮೇವಿನ ಸಂಕಷ್ಟ ತೀವ್ರವಾಗಿದೆ. ಜಿಲ್ಲೆಯ 21 ಕಡೆಗಳಲ್ಲಿ ಆರಂಭ ಮಾಡಿರುವ ಮೇವು ಬ್ಯಾಂಕ್‌ಗಳು ಇನ್ನು ಹೆಚ್ಚು ಕಡೆಗಳಲ್ಲಿ ಪ್ರಾರಂಭ ಮಾಡಬೇಕು. ಅಗತ್ಯವಿರುವ ಕಡೆ ಗೋ ಶಾಲೆಗಳನ್ನು ಆರಂಭಿಸ ಬೇಕು. ಕುರಿಮೇಕೆಗಳಿಗೂ ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಇನ್ನು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

● ಚಿ.ನಿ.ಪುರುಷೋತ್ತಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋವಿಡ್ 19 ವೈರಸ್ ರೋಗಿಗಳ ಆರೈಕೆ, ಶುಶ್ರೂಷೆಯಲ್ಲಿ ತೊಡಗಿರುವ ದೇಶದ ಲಕ್ಷಾಂತರ ವೈದ್ಯರು, ವೈದ್ಯಕೀಯ ಸಿಬಂದಿಗಾಗಿ ಕೇಂದ್ರ ಸರಕಾರ ಇತ್ತೀಚೆಗೆ ಪ್ರಕಟಿಸಿದ್ದ...

  • ಕೋವಿಡ್ 19 ವೈರಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ತಿಂಗಳಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ ಎಂಬ ಸುದ್ದಿಯನ್ನು ಭಾರತೀಯ ಸೇನೆ ಅಲ್ಲಗಳೆದಿದೆ. ಏಪ್ರಿಲ್‌...

  • ಕೋವಿಡ್‌ 19ಗೆ ಹೆಚ್ಚಾಗಿ ಬಾಧಿತರಾಗುವುದು ವಯೋವೃದ್ಧರು. ಅದರಲ್ಲೂ ವಿಶ್ವಾದ್ಯಂತ ವಯೋಸಹಜ ಆರೋಗ್ಯ ಸಮಸ್ಯೆ ಇರುವಹಿರಿಯರೇ ಈ ವೈರಸ್‌ಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ....

  • ಬೆಂಗಳೂರು: ರಾಜ್ಯದ ಪಾಲಿಗೆ ಎಪ್ರಿಲ್‌ ಮೊದಲ ವಾರ ನಿರ್ಣಾಯಕ ಘಟ್ಟ. ಈ ವಾರವನ್ನು ಅತ್ಯಂತ ಎಚ್ಚರಿಕೆಯಿಂದ ಕಳೆದರೆ ನಿಶ್ಚಿಂತೆ. ತಪ್ಪಿದರೆ ಇನ್ನೂ ಒಂದು ತಿಂಗಳು...

  • ಮಂಗಳೂರು/ಮಣಿಪಾಲ: ಸಂಪೂರ್ಣ ಲಾಕ್‌ಡೌನ್‌ ಆದೇಶಕ್ಕೆ ಸ್ಪಂದಿಸಿ 3ನೇ ದಿನವಾದ ಸೋಮವಾರವೂ ಜಿಲ್ಲೆಯಾದ್ಯಂತ ಬಂದ್‌ ವಾತಾವರಣವಿತ್ತು. ಅಂಗಡಿ ಮುಂಗಟ್ಟುಗಳು ಸ್ಥಗಿತಗೊಂಡಿದ್ದು,...