ಕಾಂಗ್ರೆಸ್ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ: ಪರಮೇಶ್ವರ್
Team Udayavani, Feb 4, 2023, 9:06 PM IST
ತುಮಕೂರು: ನಾನು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು. ಪ್ರತಿ ದಿನ ಪ್ರಣಾಳಿಕೆ ರಚನೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಶುಕ್ರವಾರವೂ ಸಹ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರೊಂದಿಗೆ ಹಲವಾರು ಗಂಟೆಗಳ ಕಾಲ ಚರ್ಚೆ ನಡೆಯಿತು.
ಪ್ರಣಾಳಿಕೆಯನ್ನು ಆಯಾ ಜಿಲ್ಲೆಗಳ ಸಮಸ್ಯೆಗಳನ್ನೊಳಗೊಂಡಂತೆಯೇ ತಯಾರು ಮಾಡಲಾಗುವುದು ಎಂದು ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಾಲೇ ಕಲ್ಯಾಣ ಕರ್ನಾಟಕ ಮತ್ತು ಮಂಗಳೂರಿಗೆ ಭೇಟಿ ನೀಡಿ ಪ್ರಣಾಳಿಕೆಗೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವುದರ ಬಗ್ಗೆಯೂ ಆಲೋಚನೆಯಿದ್ದು, ಆಯಾ ಜಿಲ್ಲೆಯ 10 ವಿಷಯಗಳನ್ನು ಇಟ್ಟುಕೊಂಡು ಪ್ರಣಾಳಿಕೆ ರಚನೆಯಾಗಲಿದೆ ಎಂದರು.
ಪ್ರತಿ ಬಡ ಕುಟುಂಬದ ಮಹಿಳೆಗೆ 2000 ರೂ.ಗಳನ್ನು ನೀಡಲು ಪ್ರಣಾಳಿಕೆಯಲ್ಲಿ ಸೇರಿಸಲು ಒಪ್ಪಿದ್ದು, ಇದಕ್ಕೆ ವರ್ಷಕ್ಕೆ 24 ಸಾವಿರ ಕೋಟಿ ಹಣ ಬೇಕು. ಇದನ್ನು ಯಾವ ಮೂಲದಿಂದ ಭರಿಸಬೇಕೆಂದು ಸಹ ಚರ್ಚೆಯಾಗಿದೆ. ಇದಲ್ಲದೆ, 1 ರಿಂದ 5ನೇ ತರಗತಿಯ ಮಕ್ಕಳಿಗೆ 150 ರೂ.ಗಳು ಮತ್ತು 6 ರಿಂದ 10ನೇ ತರಗತಿಯಲ್ಲಿನ ಮಕ್ಕಳಿಗೆ ಪ್ರತಿ ತಿಂಗಳು 300 ರೂ.ಗಳನ್ನು ನೀಡುವ ಬಗ್ಗೆ ಆಲೋಚನೆಯಿದ್ದು, ಇದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚುನಾವಣಾ ಕಾವು: ಉತ್ತರ ಪ್ರದೇಶದ ಸಿ.ಎಂ ಯೋಗಿ ಭೇಟಿಯಾದ ಕೆ.ಎಂ ಮುನಿಯಪ್ಪ
ಮೋದಿ ಕಮಾಲ್ ಮುಂದೆ ಕಾಂಗ್ರೆಸ್ ಶೂನ್ಯ: ಜೆಪಿ ನಡ್ಡಾ ವಾಗ್ಧಾಳಿ
ಕೊರಟಗೆರೆಯ ದುಡ್ಡನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿ
ಮಾದಿಗ ಸಮುದಾಯ ಡಾ.ಜಿ.ಪರಮೇಶ್ವರ್ ಜತೆಗಿದೆ:ಕಾಂಗ್ರೆಸ್ ಮುಖಂಡ ವಾಲೇಚಂದ್ರಯ್ಯ
ಕಾಂಗ್ರೆಸ್ ಮುಳುಗುವ ಹಡಗು; ಪರಮೇಶ್ವರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿಎಂ ಬೊಮ್ಮಾಯಿ