ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಸೋಮಣ್ಣ ಡಿಸಿ, ಅಧಿಕಾರಿಗಳಿಗೆ ತರಾಟೆ


Team Udayavani, Jun 14, 2024, 1:12 PM IST

5-

ತುಮಕೂರು: ಮಂತ್ರಿಯಾಗಿ ಬಂದ ಮೊದಲ ದಿನವೇ ಡಿಸಿ, ಸಿಇಒಗೆ ಕೇಂದ್ರದ ಮಂತ್ರಿ ವಿ. ಸೋಮಣ್ಣ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭುಗೆ ಕರೆ ಮಾಡಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರ ಆರೋಗ್ಯ ವಿಚಾರಿಸಲು ತೆರಳಿದ ವೇಳೆ ಯಾವುದೇ ಅಧಿಕಾರಿಗಳು ಇಲ್ಲದ್ದನ್ನು ಕಂಡು ವಿ.ಸೋಮಣ್ಣ ಗರಂ ಆದರು. ಜಿಲ್ಲಾಸ್ಪತ್ರೆಯಲ್ಲೇ ಕರೆ ಮಾಡಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು

ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕರೆ ಮಾಡಿದ ಸೋಮಣ್ಣ, ಅಮ್ಮಾ ಯಾರೂ ಗತಿ ಇಲ್ವಲ್ಲಮ್ಮಾ. ನಾನು ಮಂತ್ರಿ ಫಸ್ಟ್ ಟೈಮ್ ಬಂದಿದಿನಿ. ಆಸ್ಪತ್ರೆಗೆ ಬರ್ತಿದಿನಿ ನೀವು ಇಲ್ಲ. ನಿಮ್ಮ ಸಿಇಒನೂ ಇಲ್ಲ. ನೀರಾವರಿ ಇಲಾಖೆಯವರೂ ಯಾರೂ ಇಲ್ಲ. ಯಾವನೂ ಇಲ್ಲ ಎಂದರು.

ಮುಂದುವರೆದು ಮಾತನಾಡಿ, ಒಬ್ಬ ಡಿಎಸ್ ಇದಾರೆ. ಮಧುಗಿರಿಯಲ್ಲಿ ಗಿಡ ನೆಡೋದು ದೊಡ್ಡದಾ? ನಾನು ಆಸ್ಪತ್ರೆಗೆ ಬಂದೊಗ್ತಿನಿ ಅಂದ್ರಿ ಆಯ್ತಮ್ಮಾ ಅಂದೆ. ತಾವೇ  ಹೇಳುದ್ರೋ ಇಲ್ವಮ್ಮಾ? ಕಾಂಟ್ರವರ್ಸಿ ಮಾಡಕೋಬೇಡಿ ಅಮ್ಮ. ದಯವಿಟ್ಟು ಕಾಂಟ್ರುವರ್ಸಿ ಮಾಡಕೋಬೇಡಿ. ನಾನು ಇವರೆಲ್ಲರಿಗಿಂತ ಸರ್ವಿಸ್ ಇದೆ. ನಾನು ಬಂದಿದಿನಿ ಅಂದರೆ ರಿಸೀವ್ ಮಾಡಿಕೊಳ್ಳೋಕೆ ಅಟ್ಲಿಸ್ಟ್ ಒಬ್ಬ ಗತಿ ಇಲ್ಲವಲ್ಲ. ತಾವೇ ಮಂತ್ರಿಯಾಗಿ ನಾನು ಡಿಸಿಯಾಗಿ ಏನು ಮಾಡ್ತಿದ್ರಿ? ಹೇಳಮ್ಮ ಎಂದು ಕೇಳಿದರು.

ಮುಂದುವರೆದು, ಆ ಪ್ರಭು ನಿನ್ನೆ ಕಾಲ್ ಮಾಡಿದಾಗ ಮೇಡಂ ಅಸ್ಪತ್ರೆ ಬರ್ತಾರೆ ಅಂದ್ರು. ಆಯ್ತಪ್ಪ ಅಂದೆ. ನಾನು ಬಂದಿದಿನಿ, ಯಾವೊಬ್ಬ ಅಧಿಕಾರಿನೂ ಇಲ್ಲ. ನೀವೇ ಹೇಳಿದ್ರಲ್ಲಮ್ಮ ಆಸ್ಪತ್ರೆಗೆ ಬರ್ತಿನಿ ಅಂದ್ರಲ್ಲ. ಆಯ್ತು ಬಾ ಅಮ್ಮ ಅಂದೆ.   ನನ್ ಪ್ರಜೆನ್ಸಿಲಿ ಇರಬೇಕೋ ಬೇಡ್ವೋ? ನಾನು ಮಂತ್ರಿ ಅಲ್ವಾ? ಸೆಂಟ್ರಲ್ ಗೌರ್ನಮೆಂಟ್  ಲೆಕ್ಕ ಇಲ್ವಾ? ನಿಮಗೆಷ್ಟು ಭಯ ಇರಬೇಕು? ನನಗೆ ಹರ್ಟ್ ಆಯ್ತಮ್ಮ. ಬರ್ತಿನಿ ಅಂದು ಬರ್ಲಿಲ್ಲ. ಬರಬೇಕಾಗಿದ್ದು ನಿಮ್ ಡ್ಯೂಟಿ ಅಲ್ವಾ? ಜಿಲ್ಲಾಧಿಕಾರಿ ಅಂದ್ರೆ ಸ್ಟೇಟ್ ಅಷ್ಟೇ ಸೀಮಿತನಾ? ಸೆಂಟ್ರಲ್ ಗವರ್ನ್ಮೆಂಟ್ ಏನೇನು ಇಲ್ವಾ? ನನಗೆ ರಿಪೋರ್ಟ್ ಕಳುಹಿಸಿ ಸಂಜೆ ಒಳಗೆ ಎಂದು ಖಾರವಾಗಿಯೇ ಬೈದರು.

ಯಾವನೂ ಇಲ್ಲ, ಜಿಪಂ ಸಿಇಒಗೆ ಹಿಗ್ಗಾಮುಗ್ಗಾ ತರಾಟೆ: ಜಿಲ್ಲಾ ಪಂಚಾಯತ್ ಸಿಇಒಗೆ ಕರೆ ಮಾಡಿದ ವಿ.ಸೋಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನಾನು ಆಸ್ಪತ್ರೆಗೆ ಬಂದಿದಿನಿ. ಯಾವನೂ ಬಂದಿಲ್ಲ. ಡಿಎಚ್ಒಗೂ ಕುಡಿಯುವ ನೀರಿಗೂ ಏನ್ ಸಂಬಂಧ ಅಪ್ಪಾ? ನೀರು ಕೊಡೋರು ಯಾರಪ್ಪ? ಚಿನ್ನೇನಹಳ್ಳಿಗೆ ನಾನು ಬರ್ತಿನಿ ಅಂತಾ ಹೇಳಿಲ್ಲ. ಇಲ್ಲಿ ಯಾವನೂ ಗತಿ ಇಲ್ಲ. ನನಗೂ ಆದ ಇದಿದೆಯಪ್ಪಾ? ಒಬ್ಬ ಅಧಿಕಾರಿ ಇಲ್ಲ. ನನ್ ಟೂರ್ ಪ್ರೋಗ್ರಾಂ ನಲ್ಲಿ ಚಿನ್ನೇನಹಳ್ಳಿಗೆ ಬರ್ತಿನಿ ಅಂತೇಳಿಲ್ಲ. ಯಾವುದಕ್ಕೋ ಏನು ಯಾರೊ ಬರ್ತಾರಂತಾ ಹೋಗಿಬಿಟ್ಟು ನನಗೆ ಮಕ್ ಮಲ್ ಟೋಪಿ ಹಾಕ್ತಿದ್ದೀರಾ? ನನಗೆ ಹಂಗೆ ಮಾಡೊಕೆ ಆಗಲ್ಲ. ದಯವಿಟ್ಟು ಬೇಡ. ನಾನು ಎಂಪಿಯಾಗಿ ಮಾತಾಡುತ್ತಿದ್ದೇನೆ. ಇಬ್ಬರು ಬಿಟ್ರೆ ಯಾರೂ ಗತಿಯಿಲ್ಲ. ಇದಾಗಬಾರದು. ಇದು ಒಳ್ಳೆಯದಲ್ಲ. ಜನರಿಗೆ ಈ ತರ ಮಾಡಬೇಡಿ. ಬಾರಪ್ಪ ಅಂದೆ. ಇನ್ಯಾರೋ ಬರ್ತಾರಂತ ಹೋಗಿದಿರಾ? ನನಗೆ ಹೇಳಬೇಡಿ. ನೀವು ಕೂಡ ಬ್ಯಾಕ್ ರೌಂಡ್ ನಲ್ಲಿ ಬಂದಿದಿರಾ ಅನ್ನೊದನ್ನ ಅರ್ಥ ಮಾಡಿಕೊಳ್ಳಿ. ಡಿಸಿನೂ ಇಲ್ಲ. ಯಾವನೂ ಇಲ್ದ್ರಿ ಎಂದರು.

ತುಮಕೂರು: ನೂತನ ಸಚಿವ ವಿ‌. ಸೋಮಣ್ಣ ಶ್ರೀಕ್ಷೇತ್ರ ಸಿದ್ದಗಂಗಾ ಮಠಕ್ಕೆ ಭೇಟಿ

ತುಮಕೂರು: ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರು ಕ್ಷೇತ್ರಕ್ಕೆ ವಿ. ಸೋಮಣ್ಣ ಭೇಟಿ ನೀಡಿದರು.

ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಗೆದ್ದುಗೆ ದರ್ಶನ ಪಡೆದು, ಆಶೀರ್ವಾದ ಪಡೆದರು. ಬಳಿಕ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿಯ ಆಶೀರ್ವಾದ ಪಡೆದರು.

ಈ ವೇಳೆ ಮಾಜಿ ಸಂಸದ ಜಿ.ಎಸ್. ಬಸವರಾಜ್, ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ ಭಾಗಿಯಾಗಿದ್ದರು.

ಟಾಪ್ ನ್ಯೂಸ್

3-madikeri

Madikeri: ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

hd-kumarswaamy

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-koratagere

Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

3-madikeri

Madikeri: ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.