ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ
Team Udayavani, Nov 27, 2022, 11:07 AM IST
ಕುಣಿಗಲ್: ರಾಜಕೀಯ ದ್ವೇಷದಿಂದಾಗಿ ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ ಮಾಡಿದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ವಡಾಘಟ್ಟ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಜೋಡಿ ಹೊಸಹಳ್ಳಿ ಗ್ರಾಮದ ಚಂದನ್ ಎಂಬವರು ಈ ಕೆರೆಯನ್ನ ಮೀನು ಸಾಕಾಣಿಕೆ ಮಾಡಲೆಂದು ಗುತ್ತಿಗೆಗೆ ಪಡೆಕೊಂಡಿದ್ದರು. ಚಂದನ್ ಪತ್ನಿ ಚೈತ್ರ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದು, ಈ ಕಾರಣ ರಾಜಕೀಯ ದ್ವೇಷಕ್ಕಾಗಿ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.
ಚಂದನ್ ಕಳೆದ ಎರಡು ತಿಂಗಳ ಹಿಂದೆ ಬರೋಬ್ಬರಿ ಐದುವರೆ ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಟ್ಟಿದ್ದು, ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಮೀನುಗಳನ್ನು ಸಾಕುತ್ತಿದ್ದರು. ಕೆರೆಗೆ ವಿಷ ಮಿಶ್ರಣವಾದ ಹಿನ್ನೆಲೆ ಕೆರೆಯಲ್ಲಿದ್ದ ಮೀನುಗಳೆಲ್ಲಾ ಮಾರಣಹೋಮವಾಗಿರುವುದು ಬೆಳಗ್ಗೆ ಗ್ರಾಮಸ್ಥರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bigg Boss: ವಾರದ ಮಧ್ಯದಲ್ಲೇ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ
Dubai Miracle Garden: ಮರು ಭೂಮಿಯಲ್ಲಿ ಮೂಡಿ ಬಂದ ಪುಷ್ಪ ಸಿರಿ ವೈಭವ
Viral video; ಕನ್ಸರ್ಟ್ ವೇಳೆ ಲೇಸರ್ ಬಿಟ್ಟ ಪ್ರೇಕ್ಷಕ!: ವೇದಿಕೆಯಿಂದ ಹೊರಗೋಡಿದ ನಿಕ್
Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ
Chikkamagaluru: ಭಾರೀ ಮಳೆಗೆ ಮನೆ ಮುಂದೆಯೇ ಭೂಮಿ ಕುಸಿದು ಮನೆ ಗೋಡೆ ಬಿರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.