ಸಂಕುಚಿತ ಭಾವನೆ ಬಿಟ್ಟು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

Team Udayavani, Jan 6, 2020, 12:56 PM IST

sdanckuchita

ತಿಪಟೂರು: ಮಹಿಳೆ ಸಂಕುಚಿತ ಮನೋಭಾವದಿಂದ ಹೊರಬಂದು ಆತ್ಮಸ್ಥೈರ್ಯ ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಸಮಾಜದಲ್ಲಿ ಧೈರ್ಯ, ಆತ್ಮವಿಶ್ವಾಸದಿಂದ ಬದುಕು ನಡೆಸಲು  ಸಾಧ್ಯ ಎಂದು ತಾಲೂಕಿನ ಕೊನೇಹಳ್ಳಿ ಆಯುಷ್‌ ವೈದ್ಯಾಧಿಕಾರಿ ಡಾ. ಸುಮನಾ ತಿಳಿಸಿದರು. ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಅರಳ ಗುಪ್ಪೆಯ ಮಹಿಳಾ ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಟೈಡ್‌ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಹಿಳಾ ನಾಯಕತ್ವ ತರಬೇತಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಗೌರವಿಸಿ: ಎಲ್ಲಾ ರಂಗಗಳಲ್ಲಿಯೂ ಸಾಧನೆಗೈಯುತ್ತಿರುವ ಉತ್ತಮ ಸ್ಥಾನಮಾನ  ಪಡೆದಿರುವ ಮಹಿಳೆಯರು ಶಿಕ್ಷಣವಂತರು, ಪ್ರಜ್ಞಾವಂತರಾಗಿದ್ದರೂ ಸಂಕುಚಿತ ಮನೋಭಾವ ಗಳಿಂದ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತ ತಮಗೆ ತಾವೇ ನಿರ್ದಿಷ್ಟ ಗುರಿ-ಗೆರೆ ಹಾಕಿಕೊಳ್ಳುತ್ತಿರುವುದು ನೋವಿನ ಸಂಗತಿ. ಮಹಿಳೆ ಎಲ್ಲಾ ತ್ರಗಳಲ್ಲಿಯೂ  ಸಾಧನೆ ಮಾಡುವ ಮೂಲಕ ಕುಟುಂಬದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾಳೆ.

ಯಶಸ್ವಿಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆ  ಇದ್ದೇ  ಇರುತ್ತಾಳೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಸಲಹೆ  ಡಿದರು. ಬೆಂಗಳೂರು ಟೈಡ್‌ ಸಂಸ್ಥೆ ಹಿರಿಯ ವ್ಯವಸ್ಥಾಪಕಿ ಎಸ್‌. ಪ್ರಮೀಳಾ ಮಾತನಾಡಿ, ಮಹಿಳೆ ಅಬಲೆ ಯಲ್ಲ ಸಬಲೆ. ಆತ್ಮಸ್ಥೈರ್ಯದಿಂದ  ವುದೇ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ.

ಮಹಿಳೆಯರು ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವ ಜತೆಗೆ  ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನೂ ಹೊತ್ತಿದ್ದಾಳೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ದೃಷ್ಟಿಯಿಂದ ಟೈಡ್‌ ಸಂಸ್ಥೆ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಆರ್ಥಿಕ ಸಾಕ್ಷರತೆ, ಸ್ವ ಉದ್ಯಮ ಅವಕಾಶಗಳು,  ಮಾರುಕಟ್ಟೆ ಕುರಿತು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ಪಿ. ರೇಖಾ, ಸಂಪನ್ಮೂಲ ವ್ಯಕ್ತಿ ಸುಧಾ ಮಾಹಿತಿ ಹಕ್ಕು ಅಧಿನಿಯಮ, ಗ್ರಾಮ ಪಂಚಾಯತ್‌ ವಿವಿಧ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆ ಗಳು ಹಾಗೂ ಮಹಿಳಾ ನಾಯಕತ್ವ ಕುರಿತು ಮಾಹಿತಿ  ನೀಡಿದರು. ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ವಿವಿಧ ಯೋಜನೆಗಳ ಬಗ್ಗೆ ತುಮಕೂರು ಮಹಿಳಾ ಶಕ್ತಿ ಕೇಂದ್ರದ ಮಹಿಳಾ ಕಲ್ಯಾಣ ಧಿಕಾರಿ  ಸುನೀತಾ ತಿಳಿಸಿದರು.

ವಿದ್ಯಾನಂದ ಯೋಗ ಮತ್ತು ಆರೋಗ್ಯದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಸಂಜಯ್‌, ಜಿಲ್ಲಾ  ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ, ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನ ಹಳ್ಳಿ ವಿವಿಧ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು, ಕ್ವೀನ್‌ ಕಾರ್ಯ ಕ್ರಮದ ಪ್ರೇರಕರು ಮತ್ತಿತರರಿದ್ದರು.

Ad

ಟಾಪ್ ನ್ಯೂಸ್

10-HC

Kudupu Mob Lynching: ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಣೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

9-moodbidri

ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್

Spinner Shoaib Bashir has been ruled out of the Test series against India

INDvsENG: ಭಾರತ ವಿರುದ್ದದ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಸ್ಪಿನ್ನರ್‌ ಶೋಯೆಬ್‌ ಬಶೀರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

24

Koratagere: ಕೈಕೊಟ್ಟ ಮಳೆರಾಯ; ಬಿತ್ತನೆ ಕಾರ್ಯ ಮುಗಿಸದ ರೈತ; ತಾಲೂಕಿನಲ್ಲಿ ಬರದ ಛಾಯೆ

2

ಬಿಲ್ ಪಾವತಿಸದ ಸರ್ಕಾರಿ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತ: ಡಯಾಲಿಸಿಸ್ ರೋಗಿಗಳ ಪರದಾಟ

ಸುರ್ಜೇವಾಲರಿಂದ ಅಭಿಪ್ರಾಯ ಸಂಗ್ರಹಕ್ಕೆ ರಾಜಣ್ಣ ಅಸಮಾಧಾನ

Congress: ಸುರ್ಜೇವಾಲರಿಂದ ಅಭಿಪ್ರಾಯ ಸಂಗ್ರಹಕ್ಕೆ ರಾಜಣ್ಣ ಅಸಮಾಧಾನ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಕಾಸರಗೋಡು ಪೊಲೀಸರಿಂದ ವಿಶೇಷ ಕಾರ್ಯಾಚರಣೆ: ಹಲವು ಪ್ರಕರಣ ದಾಖಲು

10-HC

Kudupu Mob Lynching: ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಣೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

9-moodbidri

ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.