ಪೈಪ್‌ಲೈನ್‌ ದುರಸ್ತಿ ಮಾಡಿಸಿ ಕುಡಿವ ನೀರು ಉಳಿಸಿ

Team Udayavani, May 13, 2019, 5:03 PM IST

ತಿಪಟೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರ್‍ನಾಲ್ಕು ತಿಂಗಳಿನಿಂದಲೂ ನೀರಿನ ಪೈಪ್‌ಲೈನ್‌ ಒಡೆದು ನೀರು ಪೋಲಾಗುತ್ತಿದ್ದು, ಈ ಬಗ್ಗೆ ನಗರಸಭೆಗೆ ತಿಳಿಸಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿ 206ರ ರೇಷ್ಮೆ ಇಲಾಖೆಯ ಮುಂಭಾಗದ ರಸ್ತೆಯ ಮೇಲೆ ಈ ಭೀಕರ ಬರದಲ್ಲಿಯೂ ಜೀವಜಲ ಹರಿದು ಚರಂಡಿ ಪಾಲಾಗುತ್ತಿದೆ. ಸುಮಾರು 3-4 ತಿಂಗಳಿನಿಂದಲೂ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇದರ ಗೋಜಿಗೆ ಹೋಗದಿರುವುದು ಅಚರ ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ. ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನಗಳು ಅದರ ಮೇಲೆಯೇ ಸಂಚರಿಸುವುದರಿಂದ ರಸ್ತೆ ಹಾಳಾಗಿ ದೊಡ್ಡ ಗುಂಡಿ ಬಿದ್ದಿದೆ. ವಾಹನ ಸವಾರರು ವೇಗವಾಗಿ ಬಂದು ಗುಂಡಿಗೆ ಬೀಳುತ್ತಿದ್ದು, ಪ್ರಾಣಕ್ಕೆ ಸಂಚಾಕಾರ ಕಟ್ಟಿಟ್ಟಬುತ್ತಿಯಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇಡೀ ರಾಜ್ಯವೇ ಭೀಕರ ಬರಗಾಲ ಎದುರಿಸುತ್ತಿದ್ದು, ಹನಿಹನಿ ನೀರಿಗಾಗಿ ಪರದಾಡುತ್ತಿದ್ದರೂ ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿ ಕೆಲ ಬಡಾವಣೆಗಳಲ್ಲಿ ಪೈಪ್‌ಲೈನ್‌ ಒಡೆದು ಅಮೂಲ್ಯ ನೀರು ದಿನನಿತ್ಯ ಪೋಲಾಗುತ್ತಿದೆ. ನೀರು ಸರಬರಾಜು ಜವಾಬ್ದಾರಿ ಹೊತ್ತಿರುವ ನಗರಸಭೆ ಮಾತ್ರ ಜನತೆಯ ಜೀವ ಜಲವಾದ ನೀರು ಮತ್ತು ನಾಗರಿಕರ ಜೊತೆ ಚಲ್ಲಾಟವಾಡುತ್ತಿರುವುದು ನಾಚಿಕೆ ತರುವಂತಿದೆ.

ಈಗಲಾದರೂ ನಗರಸಭೆ ಇತ್ತ ಗಮನ ಹರಿಸಿ ಪೋಲಾಗುತ್ತಿರುವ ನೀರು ತಡೆಗಟ್ಟಿ, ನಗರಕ್ಕೆ ಸಮರ್ಪಕ ಕುಡಿವ ನೀರನ್ನು ಒದಗಿಸುಬೇಕಿದೆ.

● ಸ್ಥಳೀಯರು, ತಿಪಟೂರು


ಈ ವಿಭಾಗದಿಂದ ಇನ್ನಷ್ಟು

  • ಹುಳಿಯಾರು: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಇ-ಹರಾಜಿಗೆ ಉತ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಆದೇಶ ಉಲ್ಲಂಘಿಸಿ ಇ-ಹರಾಜು ಪ್ರಕ್ರಿಯೆ ನಡೆದಿದೆ. ಆದರೆ...

  • ಕೊರಟಗೆರೆ: ರೈತ ಬೆಳೆಯುವ ಬೆಳೆಗೆ ದರ ನಿಗದಿ ಮಾರುಕಟ್ಟೆ ಮಾಡುತ್ತಿದೆ. ಅದಕ್ಕೆ ಬದಲಾಗಿ ರೈತನೇ ನಿಗದಿ ಮಾಡುವಂತಾಗಬೇಕು ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌...

  • ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿಸುವ ಮಹಾಗಣಪತಿ ಎಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೂಳೂರು ಮಹಾಗಣಪತಿಯ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ವಿವಿಧ...

  • ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡುವ ಪುರಸಭೆ ತೀರ್ಮಾನಕ್ಕೆ ಸಾರ್ವಜನಿಕರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ....

  • ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ...

ಹೊಸ ಸೇರ್ಪಡೆ

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

  • ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ "ತ್ರಿವಿಕ್ರಮ' ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ...

  • ಈ ಹಿಂದೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌ ನೇತೃತ್ವದಲ್ಲಿ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸಿ ಕ್ರಿಕೆಟ್‌ ಪಂದ್ಯ ಶುರುಮಾಡಿದ್ದು ಗೊತ್ತೇ...

  • ಭಾರತ್‌ ಬಾಂಡ್‌ ಎಂಬ ಇ.ಟಿ.ಎಫ್. ಜಾತಿಗೆ ಸೇರಿದ ಮ್ಯೂಚುವಲ್‌ ಫ‌ಂಡು ಕೇವಲ ಸರಕಾರಿ ಸ್ವಾಮ್ಯದ ಕಂಪೆನಿಗಳ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಿದೆ. ಯಾವ ಸಾಲಪತ್ರಗಳಲ್ಲಿ...