Udayavni Special

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ • ಸಾರ್ವಜನಿಕರು ಹೈರಾಣ

Team Udayavani, Aug 10, 2019, 3:18 PM IST

tk-tdy-1

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಸೋನೆ ಮಳೆಗೆ ಬಿ.ಎಚ್ ರಸ್ತೆಯ ಬದಿಯಲ್ಲಿ ನೀರು ನಿಂತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಮಳೆ ನೀರು ಚರಂಡಿಗೆ ಹರಿಯುವ ವ್ಯವಸ್ಥೆ ಮಾಡದಿರುವುದರಿಂದ ಕೆಲವೊಮ್ಮೆ ವಾಹನಗಳು ರಸ್ತೆ ಬಿಟ್ಟು ಪಕ್ಕದಲ್ಲಿ ಸಂಚರಿಸುವುದರಿಂದ ಕೆಸರುಗದ್ದೆಯಾಗಿ ಪರಿಣಮಿಸಿದೆ.

ನೆಹರು ಸರ್ಕಲ್ನಿಂದ ಶೆಟ್ಟಿಕೆರೆ ಗೇಟ್, ರೋಟರಿ ಶಾಲೆ ರಸ್ತೆಯಲ್ಲಿನ ಎರಡು ಬದಿ ಮಳೆ ನೀರು ಶೇಖರಣೆಯಾಗಿದ್ದು, ಪಾದಚಾರಿಗಳು ನಡೆದುಕೊಂಡು ಹೋಗಲು ತೀವ್ರ ತೊಂದರೆಯಾಗಿದೆ. ನೂರಾರು ವಿದ್ಯಾರ್ಥಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಶಾಲಾ- ಕಾಲೇಜುಗಳಿಗೆ ಹೋಗುತ್ತಾರೆ. ವಾಹನಗಳು ಪಕ್ಕದಲ್ಲೇ ಸಂಚರಿಸುವಾಗ ಕೆಸರು ಸಿಡಿದು ಬಟ್ಟೆಯ ಮೇಲಾಗುತ್ತದೆ. ವಾಹನಗಳು ಬಂದರೆ ಕೆಸರು ಸಿಡಿಯುವುದರಿಂದ ರಕ್ಷಿಸಿಕೊಳ್ಳಲು ಓಡುವ ಸ್ಥಿತಿ ಇದೆ. ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದಿರುವುದರಿಂದ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ.

ಚರಂಡಿಗೆ ನೀರು ಹೋಗದೆ ಸಮಸ್ಯೆ: ಬಿ.ಎಚ್. ರಸ್ತೆ ಬದಿಯಲ್ಲಿನ ಚರಂಡಿಗೆ ಮಳೆ ನೀರು ಸರಾಗವಾಗಿ ಹರಿಯಲು ಕಾಲುವೆ ಮಾಡದ ಕಾರಣ ಮಳೆ ನೀರು ರಸ್ತೆ ಪಕ್ಕ ನಿಂತುಕೊಳ್ಳುತ್ತಿದೆ. ದಿನನಿತ್ಯ ರಸ್ತೆಗೆ ಹಾಗೂ ಪುರಸಭೆಗೆ ಸಂಬಂಧಿಸಿದ ಅಧಿಕಾರಿಗಳು ಇದೇ ಮಾರ್ಗವಾಗಿ ಓಡಾಡುತ್ತಿದ್ದರೂ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ. ಮಳೆ ನೀರು ಚರಂಡಿಗೆ ಹೋಗುವಂತೆ ವ್ಯವಸ್ಥೆ ಮಾಡದ ಕಾರಣ ಸಾವಿರಾರು ಜನರಿಗೆ ತೊಂದರೆಯಾಗಿದೆ. ಪಟ್ಟಣದ ನಿರ್ವಹಣೆ ಹೊತ್ತಿರುವ ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋನೆ ಮಳೆ ಬಂದರೆ ಸಾಕು ಮಾರುತಿ ನಗರದ ತಗ್ಗು ಪ್ರದೇಶದಲ್ಲಿರುವ ಗ್ರ್ಯಾಂಟ್ ಮನೆಗಳು ಸೇರಿ 15ರಿಂದ 20 ಮನೆಗಳಿಗೆ ನೀರು ನುಗ್ಗುತ್ತಿದೆ.

ದುರ್ಗಮ್ಮನಗುಡಿ ಬೀದಿ, ಆಚಾರ್‌ ಬೀದಿ, ಲಿಂಗಾಯತರ ಬೀದಿ, ಮಸೀದಿ ಬೀದಿಯಲ್ಲಿ ಬೀಳುವ ಮಳೆ ನೀರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನುಗ್ಗುತ್ತದೆ. ಸಮಸ್ಯೆ ದಶಕಗಳಿಂದ ಇದೆ. ಜೋರು ಮಳೆ ಬಂದರಂತೂ ಬಡವರ ಪಾಡು ಹೇಳತೀರದು. ರಾತ್ರಿ ವೇಳೆ ಮಳೆ ಬಂದರೆ ಜಾಗರಣೆ ಅನಿವಾರ್ಯ. ಮಳೆಯ ನೀರು ಬಂದರೆ ಸಹಿಸಿಕೊಳ್ಳಬಹುದು. ಆದರೆ ತ್ಯಾಜ್ಯ ಹರಿದು ಬರುವುದರಿಂದ ದುರ್ನಾತ ಬೀರುತ್ತದೆ.

ಒಮ್ಮೆ ಮನೆ ಒಳಗೆ ನುಗ್ಗಿದರೆ ಒಂದು ವಾರ ಫಿನಾಯಿಲ್ ಹಾಕಿ ತೊಳೆದರೂ ವಾಸನೆ ಹೋಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಹರೀಶ್‌.

ಈ ಹಿಂದೆ ಗ್ರಾಪಂ ಇದ್ದಾಗ ಅನೇಕ ಸಲ ದೂರು ನೀಡಲಾಗಿದ್ದರೂ ಸ್ಪಂದಿಸಿಲ್ಲ. ಜೋರಾಗಿ ಮಳೆ ಬಂದರೆ ಮನೆ ಕುಸಿಯುವ ಆತಂಕದಲ್ಲಿ ದಿನ ಕಳೆಯುತ್ತಾರೆ. ಇನ್ನಾದರೂ ಅಧಿಕಾರಿಗಳು ಗಮನಹರಿಸಬೇಕಿದೆ.

 

● ಚೇತನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ

ರೈತರ ನೆರವಿಗೆ ಬಂದ ಜಿಲ್ಲಾಡಳಿತ

ರೈತರ ನೆರವಿಗೆ ಬಂದ ಜಿಲ್ಲಾಡಳಿತ

ಜಿಲ್ಲಾದ್ಯಂತ ಕುಡಿವ ನೀರಿಗೆ ಹಾಹಾಕಾರ

ಜಿಲ್ಲಾದ್ಯಂತ ಕುಡಿವ ನೀರಿಗೆ ಹಾಹಾಕಾರ

ವರ್ತಕರಿಂದ ಅಗತ್ಯ ವಸ್ತು ಸಂಗ್ರಹ

ವರ್ತಕರಿಂದ ಅಗತ್ಯ ವಸ್ತು ಸಂಗ್ರಹ

ದೆಹಲಿಯಿಂದ ಜಿಲ್ಲೆಗೆ ಬಂದ ಕೋವಿಡ್ 19

ದೆಹಲಿಯಿಂದ ಜಿಲ್ಲೆಗೆ ಬಂದ ಕೋವಿಡ್ 19

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌