ಕಸಾಯಿಖಾನೆಗೆ ಗೋ ಸಾಗಾಟ ತಡೆದವರ ಮೇಲೆ ಹಲ್ಲೆ; ನಾಲ್ವರ ಬಂಧನ
ಮೂರು ಮಂದಿಗೆ ಗಾಯ
Team Udayavani, Sep 24, 2022, 10:18 PM IST
ಕುಣಿಗಲ್ : ಆಕ್ರಮವಾಗಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ತಡೆದು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತರುತ್ತಿದ್ದ ವೇಳೆ, ಅಖಿಲ ಭಾರತ ಹಿಂದು ಮಹಾ ಸಭಾ ಕಾರ್ಯಕರ್ತರ ಮೇಲೆ ಗುಂಪೊಂದು ದಾಳಿ ನಡೆಸಿ, ಕಾರಿನ ಗಾಜನ್ನು ಜಖಂಗೊಳಿಸಿದ ಘಟನೆ ಕುಣಿಗಲ್ ಪಟ್ಟಣದ ಮಲ್ಲಾಘಟ್ಟ ಪೆಟ್ರೋಲ್ ಬಂಕ್ ಬಳಿ ನಡೆದಿದೆ, ಈ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಅಖಿಲ ಭಾರತ ಹಿಂದು ಮಹಾ ಸಭಾ ರಾಜ್ಯಾಧ್ಯಕ್ಷ, ಬೆಂಗಳೂರು ಶ್ರೀನಗರ ವಾಸಿ ಚಂದನ್‌ಗೌಡ, ಹಾಗೂ ಮುನಿರಾಜು, ವಿನಯ್ ಗಾಯಗೊಂಡ ಕಾರ್ಯಕರ್ತರು.
ಬೆಂಗಳೂರು ನಿವಾಸಿಗಳಾದ ಮಹಮದ್‌ಸಾಧಿಕ್, ಸಯ್ಯದ್‌ಸಾಧತ್, ಚನ್ನರಾಯಪಟ್ಟಣದ ಮಂಜೇಶ್‌ಗೌಡ, ಬಿಡದಿಯ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ, ಅರುಣ್ ಹಾಗೂ ಕುಮಾರ್ ತಲೆ ಮರೆಸಿಕೊಂಡಿದ್ದಾರೆ.
ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.