ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ
ಆರು ತಿಂಗಳ ಬಳಿಕ ಅಸ್ತಿಪಂಜರವಾಗಿ ಪತ್ತೆಯಾದ ಮೃತದೇಹ
Team Udayavani, May 21, 2022, 1:21 PM IST
ಕುಣಿಗಲ್: ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದ ಪ್ರಿಯತಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮಾಗಡಿ ರಸ್ತೆ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಆರು ತಿಂಗಳ ಬಳಿಕ ಅಸ್ತಿಪಂಜರವಾಗಿ ಶವ ಪತ್ತೆಯಾಗಿದೆ.
ಮೂಲತಃ ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚಹಳ್ಳಿ ಗ್ರಾಮದ ಹಾಲಿ ಬೆಂಗಳೂರು ಸುಂಕದಕಟ್ಟೆ ನಿವಾಸಿ ಸಂತೋಷ್ (28), ಹುಲಿಯೂರುದುರ್ಗ ಹೋಬಳಿ ಕೆಬ್ಬಳಿ ಗ್ರಾಮದ ಶಾಲಿನಿ (21) ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಘಟನೆ ವಿವರ: ಸಂತೋಷ್ ಹಾಗೂ ಶಾಲಿನಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಹುಡುಗಿಯ ಕಡೆಯವರು ಸಂತೋಷನಿಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಯುವತಿ ಅಕ್ಟೋಬರ್-2021 ರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ತಿಳಿದ ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಬೆಳ್ತಂಗಡಿ: ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ
ಸಂತೋಷ್ ತನ್ನ ಪ್ರಿಯತಮೆಯ ನೆನಪಿನಿಂದ ಹೊರ ಬಾರಲಾಗದೇ ನ. 28 ರಂದು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ತನ್ನ ಸ್ವಗ್ರಾಮ ಅರಮನೆ ಹೊನ್ನಮಾಚನಹಳ್ಳಿಗೆ ಬಂದು ಬೆಂಗಳೂರಿಗೆ ವಾಪಸ್ಸ್ ಹೊಗುವ ವೇಳೆ ಹುಲಿಯೂರುದುರ್ಗ ದಟ್ಟ ಅರಣ್ಯ ಪ್ರದೇಶದಲ್ಲಿ ಗಿಡಕ್ಕೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಸ್ಥಿಪಂಜರವಾದ ಮೃತ ದೇಹ: ಹುಲಿಯೂರುದುರ್ಗ ದಟ್ಟ ಅರಣ್ಯ ಪ್ರದೇಶದಲ್ಲಿ ಅನಾಮದೇಯವಾಗಿ ನಿಲ್ಲಿಸಿದ ಬೈಕ್ ಹಾಗೂ ಅಸ್ತಿಪಂಜರವಾಗಿ ಬಿದ್ದಿದ್ದ ಮೃತ ದೇಹವನ್ನು ನೋಡಿದ ಅರಣ್ಯ ಸಿಬ್ಬಂದಿಗಳು ಹುಲಿಯೂರುದುರ್ಗ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಚೇತನ್ ಭೇಟಿ ನೀಡಿ ಪರಿಶೀಲಿಸಿ, ಬೈಕ್ ಹಾಗೂ ಅಸ್ತಿಪಂಜರ ದೇಹವನ್ನು ವಶಕ್ಕೆ ಪಡೆದು, ತನಿಖೆ ನಡೆಸಿ, ಸಂತೋಷ್‌ನ ಮೃತ ದೇಹ ಎಂದು ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಶ್ರೀಗಂಧದಲ್ಲಿ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿ
ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ
ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು
ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ
ಅಂಜನಾದ್ರಿಗೆ ಮೈಸೂರು ಒಡೆಯರ್ ಕುಟುಂಬ ಭೇಟಿ; ದೇವರ ದರ್ಶನ