

Team Udayavani, May 26, 2020, 7:07 AM IST
ತುಮಕೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದ್ದು ಸೋಮವಾರವೂ ಒಬ್ಬರಲ್ಲಿ ಕೋವಿಡ್ 19 ಸೋಂಕು ಕಾಣಿಸಿ ಕೊಂಡಿದ್ದು, ಈಗ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದುವರೆಗೂ ನಗರ ಪ್ರದೇಶದಲ್ಲಿ ಮಾತ್ರ ಕಾಣುತ್ತಿದ್ದ ಕೋವಿಡ್-19 ಈಗ ಹಳ್ಳಿಗಳತ್ತ ಮುಖ ಮಾಡಿದೆ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಕಬಂದ ಬಾಹು ಹೆಚ್ಚಿಸಿ ಕೊಳ್ಳುತ್ತಿದೆ. ಹೆಬ್ಬೂರು ಹೋಬಳಿಯಲ್ಲಿ ಕಾಣಿಸಿ ಕೊಂಡಿರುವ ಈ ಮಹಾಮಾರಿ ಈಗ ಬೆಳ್ಳಾವಿ ಹೋಬಳಿಯಲ್ಲಿ ಕಾಣಿಸಿ ಕೊಂಡಿದೆ. ಈ ವರೆಗೆ ಸೋಂಕಿನಿಂದ ಮುಕ್ತವಾಗಿದ್ದ ಗ್ರಾಮಾಂತರಕ್ಕೂ ಕೋವಿಡ್ 19 ಲಗ್ಗೆ ಇಟ್ಟಿದೆ.
ಚಾಲಕನಿಗೆ ಕೋವಿಡ್ 19: ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ಮಾವಿನ ಕುಂಟೆ ಗ್ರಾಮದ 35 ವರ್ಷದ ಕೆಎಸ್ಸಾರ್ಟಿಸಿ ಚಾಲಕನಿಗೆ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ, ಇವರನ್ನು ಪಿ- 2135 ಎಂದು ಗುರುತಿಸಲಾದೆ. ಆರೋಗ್ಯಾಧಿಕಾರಿ ಮಾಹಿತಿ: ಸೋಂಕಿತ ವ್ಯಕ್ತಿ ಕೆ.ಎಸ್.ಆರ್.ಟಿ.ಸಿ ಮಾಗಡಿ ಡಿಪೋ ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು, ಕರ್ತವ್ಯಕ್ಕೆ ಹಾಜರಾಗುವ ವೇಳೆ ಚಾಲಕನ ಗಂಟಲು ದ್ರವ ಪರೀಕ್ಷೆ ನಡೆಸಲಾ ಗಿತ್ತು ಅದರ ವರದಿ ಈಗ ಬಂದಿದ್ದು ಚಾಲಕ ನಲ್ಲಿ ಕೋವಿಡ್ 19 ಸೋಂಕು ಇರುವುದು ದೃಢ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
25 ಮಂದಿ ಕ್ವಾರಂಟೈನ್: ಸೋಂಕು ತಗುಲಿ ರುವ ಕೆಎಸ್‌ಆರ್‌ಟಿಸಿ ಚಾಲಕನ ಬಗ್ಗೆ ಮಾಹಿತಿ ಪಡೆದು, ಆತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಗ್ರಮವನ್ನು ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವೃದ್ಧೆ ತುಮಕೂರು ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಾದರೂ ಬೇರೆ ಮೃತರು ಬೇರೆ ಜಿಲ್ಲೆಯವರಾಗಿರುವುದರಿಂದ ಜಿಲ್ಲೆಯಲ್ಲಿ ಇಬ್ಬರು ಮೃತರು ಎಂದು ಡಿಎಚ್‌ಒ ಸ್ಪಷ್ಟಪಡಿಸಿದರು.
ಇನ್ನೂ 1,433 ಮಂದಿ ವರದಿ ಬರಬೇಕು: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಈವರೆಗೂ ನಗರ ಪ್ರದೇಶದಲ್ಲಿ ಇದ್ದ ಈ ಸೋಂಕು ಈಗ ಗ್ರಾಮೀಣ ಪ್ರದೇಶ ಹಳ್ಳಿಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದು, ಇದರಿಂದ ಜನರಲ್ಲಿ ಕೋವಿಡ್ 19 ಬಗ್ಗೆ ಆತಂಕ ಹೆಚ್ಚಾಗಲು ಕಾರಣವಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸಂಚಾರ ಮಾಡುತ್ತಾರೆ. ಜಿಲ್ಲೆಯಲ್ಲಿ ಕೋವಿಡ್ 19 ಮಾದರಿ ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಿರುವ 1,433 ವರದಿ ಬಾಕಿ ಇದೆ.
ತುಮಕೂರು ತಾಲೂಕಿನ ಮಾವಿನ ಕುಂಟೆ ಗ್ರಾಮದ ಕೆ.ಎಸ್.ಆರ್.ಟಿ.ಸಿ. ಚಾಲಕನು ಕೆಲಸಕ್ಕೆ ಹೋಗುವ ವೇಳೆಯಲ್ಲಿ ಗಂಟಲು ಸ್ರಾವ ಪರೀಕ್ಷಿಸ ಲಾಗಿತ್ತು, ಅದರ ವರದಿ ಬಂದಿದ್ದು ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 1686 ಸೋಂಕಿತ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ -19 ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಅವರು ನೆಲಮಂಗಲದವರಾಗಿದ್ದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲು ದ್ರವ ಪರೀಕ್ಷಿಸಲಾಗಿ ಅವರಲ್ಲಿ ಕೋವಿಡ್ 19 ಸೋಂಕು ಇರುವುದು ಬೆಳಕಿಗೆ ಬಂದಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಅವರು ಮೃತಪಟ್ಟಿದ್ದಾರೆ.
-ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
Ad
ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ಮೀನಾಮೇಷ: ಎ.ಸಿ., ಡಿ.ಸಿ. ಸೂಚನೆಗೂ ಕೇರ್ ಮಾಡದ ಗ್ರಾ.ಪಂ.
Koratagere: ಕಲ್ಲುಕ್ವಾರೆ ಅವಘಡ; ಓರ್ವ ಸಾವು, ಇಬ್ಬರಿಗೆ ಗಾಯ
ಕ್ಯಾಂಟರ್-ಕಾರು ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃ*ತ್ಯು
ಪ್ರಧಾನಿ ಮೋದಿ ಬಿಜೆಪಿಯ ಮಾರ್ಗದರ್ಶಕ ಮಂಡಳಿಗೆ ಹೋಗಬೇಕು: ಕೆ.ಎನ್.ರಾಜಣ್ಣ
Koratagere: ನಿದ್ದೆ ಮಂಪರು… ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್…
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
You seem to have an Ad Blocker on.
To continue reading, please turn it off or whitelist Udayavani.