ಅಪ್ರಾಪ್ತ ಬಾಲಕಿಯ ಮದುವೆ: ಮಗುವಾದ ಬಳಿಕ ಪ್ರಕರಣ ಬೆಳಕಿಗೆ!


Team Udayavani, Oct 12, 2021, 9:13 PM IST

thumakuru news

ಕೊರಟಗೆರೆ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿ ಹೆಣ್ಣು ಮಗುವಿನ ಜನನದ ನಂತರ ಸಿಡಿಪಿಒ ದೂರಿನ ಮೇರೆಗೆ ಪತಿಯನ್ನು ಪೋಸ್ಕೋ ಕಾಯಿದೆಯಡಿ   ಬಂಧಿಸಿರುವ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲ್ಲೂಕಿನ ಇರಕಸಂದ್ರ ಕಾಲೋನಿಯ ರಾಮಕೃಷ್ಣಯ್ಯನ ಮಗ ರಮೇಶ್ ಎಂಬುವನೆ ಪೋಸ್ಕೋ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿಯಾಗಿದ್ದು, ಹೆರಿಗೆಯ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಪ್ರಾಪ್ತ ಬಾಲಕಿಯ ಮದುವೆ ಬಗ್ಗೆ ದೂರು ನೀಡಿದೆ ಎನ್ನಲಾಗಿದೆ.

ರಮೇಶ್ ಆಟೋ ಡ್ರೈವರ್ ಆಗಿದ್ದು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಅಪ್ರಾಪ್ತ ಬಾಕಿಯನ್ನು ಮದುವೆಯಾಗಿ  ಕೊರಟಗೆರೆ ಮಾರುತಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಇಲಾಖೆಯ ಸಿಡಿಪಿಒ ದೂರಿನ ಮೇರೆಗೆ ಕೋಳಾಲ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ  ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ

ಈ ಹಿಂದೆ ಮದುವೆಯ ಮಾಹಿತಿ ಅರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಬಿಕಾ , ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಪಂ  ಪಿಡಿಒ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಗುಟ್ಟಾಗಿ ಬೇರೆಡೆ ಮದುವೆ ಮಾಡಿ ಹೆಣ್ಣಿನ ಕಾಲುಂಗರ ಮತ್ತು ತಾಳಿಯನ್ನು ತೆಗೆದಿಟ್ಟು ಬಂದು ಪರಿಶೀಲಿಸುವವರನ್ನು ಯಾಮಾರಿಸಿದ್ದರು ಎನ್ನಲಾಗಿದೆ.

ಈಗ ಹೆರಿಗೆಯಾದ ನಂತರ ಸಿಕ್ಕಿಬಿದ್ದಿದ್ದು ಸಿಡಿಪಿಒ ದೂರಿನ ಮೇರೆಗೆ ಗಂಡ ಹಾಗೂ ಮದುವೆಗೆ ಸಹಕರಿಸಿದ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ  ಎನ್ಬಲಾಗಿದೆ‌.

ಈ ಸಂಬಂಧ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ್ ಹಾಗೂ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಬಿಲ್ಚಾರ್ಚನೆ ಸ್ವಾಮೀಜಿ

ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

MUST WATCH

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

ಹೊಸ ಸೇರ್ಪಡೆ

ವಿಷದ ಮಳೆ…ಮಣ್ಣು ಪಾಲಾದ ತೊಗರಿ

ವಿಷದ ಮಳೆ…ಮಣ್ಣು ಪಾಲಾದ ತೊಗರಿ

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

ಮಕ್ಕಳಿಗೆ ಮೊಟ್ಟೆ-ಬಾಳೆ ಹಣ್ಣು ಭಾಗ್ಯ

ಮಕ್ಕಳಿಗೆ ಮೊಟ್ಟೆ-ಬಾಳೆ ಹಣ್ಣು ಭಾಗ್ಯ

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.