ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌ ಮತಯಾಚನೆ

ಮಲ್ಪೆ ಬಂದರಿನ ಅಭಿವೃದ್ಧಿ, ಮೂಲಭೂತ ಸೌಕರ್ಯದ ಈಡೇರಿಕೆಗೆ ಬದ್ದ

Team Udayavani, May 3, 2023, 2:51 PM IST

1-PK

ಮಲ್ಪೆ: ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ರಾಜ್‌ ಅವರು ಮಂಗಳವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮತಪ್ರಚಾರ ನಡೆಸಿ, ಮತಯಾಚನೆಗೈದರು.

ಮೀನುಗಾರರಿಗೆ ಮೋಸ
ಈ ಸಂದರ್ಭದಲ್ಲಿ ಮೀನುಗಾರರೊಂದಿಗೆ ಮಾತನಾಡಿದ ಪ್ರಸಾದ್‌ರಾಜ್‌ ಕಾಂಚನ್‌ ಅವರು ಮೀನುಗಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಕೆಲವೊಂದು ಸೌಲಭ್ಯಗಳು ಇನೂ °ಕೂಡ ಸಿಗದೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮಲ್ಪೆ ಬಂದರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಸರಕಾರ‌ದಿಂದ ಮಂಜೂರಾದ ಕೆಲವೊಂದು ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಆದರೆ ಬಿಜೆಪಿ ಸರಕಾರ ಮಾತ್ರ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಿ ಅದನ್ನು ಅನುಷ್ಟಾನಗೊಳಿಸದೆ ಮೀನುಗಾರರಿಗೆ ಮೋಸ ಮಾಡುತ್ತಿದೆ ಎಂದರು.

ಮೀನುಗಾರ ಮಹಿಳೆಯರು ಇಂದು ಬಂದರಿನಲ್ಲಿ ಚುನವಣಾ ಪ್ರಚಾರದಲ್ಲಿ ನನಗೆ ಒಳ್ಳೆಯ ಸಹಕಾರ ನೀಡಿದ್ದಾರೆ. ಅವರ ಸಂಕಷ್ಟ, ಬೇಡಿಕೆಯನ್ನು ನನ್ನ ಬಳಿ ತಿಳಿಸಿದ್ದಾರೆ, ನಾನು ಶಾಸಕನಾಗಿ ಆಯ್ಕೆಯಾದರೆ ಮುಂದಿನ ದಿನಗಳಲ್ಲಿ ಅವರ ಎಲ್ಲ ಬೇಡಿಕೆಗಳನ್ನು ಪೂರೈಸುವುದಾಗಿ ತಿಳಿಸಿದರು.

ನ್ಯಾಯಯುತ ಬೇಡಿಕೆಗಳು
ಮೀನುಗಾರಿಕೆಯಿಂದ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಲಕ್ಷಾಂತರ ಜನರಿಗೆ ಉದ್ಯೋಗ, ಹಾಗೂ ಸತ್ವ ಭರಿತ ಆಹಾರ ನೀಡುತ್ತಿದರು. ಸರಕಾರ ಮೀನುಗಾರರ ಬಗ್ಗೆ ನಿರ್ಲಕ್ಷéಧೋರಣೆಯನ್ನು ತೋರಿಸುತ್ತದೆ. ಅವರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲ. ಮುಖ್ಯವಾಗಿ ಬಂದರುಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ಹೈಜಿನಿಕ್‌ ಟಾಯ್ಲೆಟ್‌, ಸಮರ್ಪಕ ಒಳಚರಂಡಿ, ಶುಚಿತ್ವ ಆಗಬೇಕಿದೆ. ನಾಡದೋಣಿ ಮೀನುಗಾರರಿಗೆ ಮಾಸಿಕ ಸೀಮೆ ಎಣ್ಣೆ ಹೆಚ್ಚಳ ಮತ್ತು ಪ್ರತ್ಯೇಕ ಧಕ್ಕೆ ನಿರ್ಮಾಣ, ದುರ್ಮರಣ ಹೊಂದಿದ ಮೀನುಗಾರರ ಬಾಕಿಯಿರುವ ಸಂಕಷ್ಟ ಪರಿಹಾರ ನಿಧಿಯನ್ನು ಆದಷ್ಟು ಶೀಘ್ರದಲ್ಲಿ ಒದಗಿಸಿಕೊಡುವುದು ಮತ್ತು ಮೀನುಗಾರಿಕೆಯ ತುರ್ತು ಸಂದರ್ಭದಲ್ಲಿ ಅವಘಡ ಸಂಭವಿಸಿದಾಗ ಸುರಕ್ಷಾ ಬೋಟ್‌ ಮತ್ತು ಸೀ ಅಂಬುಲೆನ್ಸ್‌ ಅನ್ನು ಒದಗಿಸುವ ಕೆಲಸ ಅವಶ್ಯವಾಗಿ ಆಗಬೇಕಾಗಿದೆ. ಶಾಸಕನಾಗಿ ಆಯ್ಕೆಗೊಂಡಲ್ಲಿ ಈ ಎಲ್ಲವನ್ನೂ ಆತೀ ಶೀಘ್ರದಲ್ಲಿ ಮಾಡುವ ಉದೇªಶ ನನ್ನದಾಗಿದೆ ಎಂದು ಪ್ರಸಾದ್‌ರಾಜ್‌ ಹೇಳಿದರು.

ಉಡುಪಿ ಸ್ವತ್ಛ ಸುಂದರ ನಗರದ ಕನಸು
ಉಡುಪಿಯನ್ನು ಎಲ್ಲ ಸೌಲಭ್ಯದೊಂದಿಗೆ ಸ್ವಚ್ಛ, ಸುಂದರ, ಹಸುರು ನಗರವಾಗಿಸುವುದು ನನ್ನ ಕನಸು. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ. ದೇಶದಲ್ಲಿ ಯಾವುದೇ ನಗರವನ್ನು ನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ಕಲುಷಿತವಾಗಿದೆ. ಶುದ್ದ ನೀರು, ಪರಿಶುದ್ದವಾದ ವಾತಾವರಣ ಇಲ್ಲ. ಇದು ಮಕ್ಕಳು ಬೆಳೆಯುವಾಗ ಇದು ತುಂಬ ಅವಶ್ಯಕವಾದ ವಿಚಾರ. ಹಾಗಾಗಿ ಮುಂದಿನ 50 ವರ್ಷಕ್ಕೆ ಯೋಜನೆಯನ್ನು ಹಾಕಬೇಕಾಗಿದೆ. ಇಲ್ಲಿರುವ ಡ್ರೈನೇಜ್‌, ಕೊಳಚೆ ನೀರನ್ನು ಸಮುದ್ರಕ್ಕೆ ಬಿಡುವ ವ್ಯವಸ್ಥೆ ಅದನ್ನೆಲ್ಲ ನಾವು ಮೊದಲು ಸರಿಪಡಿಸಬೇಕಾಗಿದೆ.

ಬಿಜೆಪಿ ದುಡ್ಡಿದ್ದರವರಿಗೆ ಮಾತ್ರ
ಬಿಜೆಪಿ ಸರಕಾರ ಶ್ರೀಮಂತರಿಗೆ ಮಾತ್ರ ಮಣಿ ಹಾಕುತ್ತದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ದುಡ್ಡಿದ್ದವರು ಇನ್ನೂ ಕೂಡ ಬಿಜೆಪಿ ಸರಕಾರವೇ ಬರಲಿ ಎಂದು ಹೇಳುತ್ತಿದ್ದಾರೆ. ಆದರೆ ನಾವು ಬಡವರು ಎಲ್ಲಿಗೆ ಹೋಗಬೇಕು. ಎಲ್ಲದಕ್ಕೂ ಬೆಲೆ ಏರಿಕೆ ಮಾಡಿದ್ದಾರೆ. ದಿನ ನಿತ್ಯದ ಮನೆ ಸಾಮಾಗ್ರಿಅಕ್ಕಿ, ಗ್ಯಾಸ್‌, ಕರೆಂಟ್‌ ಬಿಲ್‌ ಹೆಚ್ಚು ಹೆಚ್ಚು ಮಾಡುತ್ತಲೇ ಇದ್ದಾರೆ. ಬಂಗಾರ ಬೆಲೆ ಹೆಚ್ಚಳದಿಂದ ಇಂದು ಹೆಣ್ಣು ಮಕ್ಕಳಿಗೆ ಮದುವೆ ಮಾಡದ ಪರಿಸ್ಥಿತಿ ಇದೆ ಎಂದು ಮೀನುಗಾರ ಮಹಿಳೆಯರು ತಮ್ಮ ಆಳಲನ್ನು ತೋಡಿಕೊಂಡರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಉಸ್ತುವಾರಿ ಪ್ರತಾಪನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಮುಖಂಡರಾದ ಗಣೇಶ್‌ ನೆರ್ಗಿ, ಕೇಶವ ಎಂ. ಕೋಟ್ಯಾನ್‌, ಪದ್ಮನಾಭ್‌ ಸಾಲ್ಯಾನ್‌, ಮಹಾಬಲ ಕುಂದರ್‌, ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರ, ಪ್ರವೀಣ್‌ ಜಿ. ಕೊಡವೂರು, ಚಂದ್ರಕಾಂತ್‌ ಪುತ್ರನ್‌, ಸತೀಶ್‌ ಕೊಡವೂರು, ಸುದರ್ಶನ್‌ ಪಡುಕರೆ, ಅಶೋಕ್‌ ಸುವರ್ಣ ಪಡುಕರೆ, ಸತೀಶ್‌ ಕುಂದರ್‌ ಕಲ್ಮಾಡಿ, ಆನಂದ ಕಾಂಚನ್‌ ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.