
Viral ತುಣುಕು: 31 ವರ್ಷಗಳ ಹಿಂದೆ ‘ತರಂಗದಲ್ಲಿ ಬಂದಿತ್ತು ಕೊರೊನಾ ಸುದ್ದಿ!
ಆರೋಗ್ಯ ಲೇಖನ ಸಂಗ್ರಹ ಹವ್ಯಾಸಿಯೊಬ್ಬರಿಂದ ಲಭ್ಯವಾದ ಮಾಹಿತಿ...
Team Udayavani, Mar 6, 2020, 6:37 PM IST

ಮಣಿಪಾಲ: ಇದೀಗ ಎಲ್ಲೆಡೆಯೂ ಕೊರೊನಾ ವೈರಸ್ ನದ್ದೇ ಸುದ್ದಿ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭೀತಿಯ ಅಲೆಯನ್ನೇ ಎಬ್ಬಿಸಿ ಮರಣ ಮೃದಂಗ ನುಡಿಸುತ್ತಿರುವ ಈ ಮಾರಣಾಂತಿಕ ವೈರಸ್ ಹೊಸದಾಗಿ ಸೃಷ್ಟಿಯಾದದ್ದಲ್ಲ. ಈ ವೈರಸ್ ಗೆ ಸುಮಾರು ಅರ್ಧ ಶತಮಾನಗಳ ಇತಿಹಾಸವಿದೆ. ಇದೀಗ ಈ ವೈರಸ್ ಕುರಿತಾದ ಮಾಹಿತಿ ಒಂದು 1989ರ ‘ತರಂಗ’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದರ ತುಣುಕೊಂದು ಇದೀಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪತ್ರಿಕೆಗಳಲ್ಲಿ ಬರುವ ಆರೋಗ್ಯ ಸಂಬಂಧಿ ಮಾಹಿತಿ, ಲೆಖನಗಳನ್ನು ಸಂಗ್ರಹಿಸಿಡುವ ಹವ್ಯಾಸವನ್ನು ಹೊಂದಿರುವ ಮುಕುಂದ ಚಿಪ್ಲೂಂಕರ್ ಎನ್ನುವವರು 31 ವರ್ಷಗಳ ಹಿಂದೆ ಜುಲೈ 16ರ ತರಂಗದಲ್ಲಿ ಪ್ರಕಟಗೊಂಡಿದ್ದ ವೈರಸ್ ಸಂಬಂಧಿ ಮಾಹಿತಿ ಲೇಖನವೊಂದರಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿ ಪ್ರಕಟವಾಗಿತ್ತು ಎಂಬುದನ್ನು ಮುಕುಂದ ಅವರು ಪತ್ತೆ ಹಚ್ಚಿ ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.
ಈ ಸಂಚಿಕೆಯಲ್ಲಿ ವಿವಿಧ ವೈರಸ್ ಗಳ ಕುರಿತಾದ ಮಾಹಿತಿ ಇದ್ದು ಅದರಲ್ಲಿ ಒಂದು ಕೊರೊನಾ ವೈರಸ್ ಕುರಿತಾಗಿಯೂ ಮಾಹಿತಿಯನ್ನು ನೀಡಲಾಗಿದೆ. ಈ ವೈರಸ್ ಹೇಗೆ ಪರಾವಲಂಬಿಯಾಗಿದೆ ಮತ್ತು ಇವುಗಳು ಹೇಗೆ ತಮ್ಮ ಸಂತಾನಾಭಿವೃದ್ಧಿಯನ್ನು ಮಾಡುತ್ತವೆ ಎಂಬ ಕಿರು ಮಾಹಿತಿ ಈ ಪುಟದಲ್ಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?