ಮಲ್ಪೆ: ಆಟೋರಿಕ್ಷಾ- ಟ್ಯಾಂಕರ್ ಢಿಕ್ಕಿ: ವಿದೇಶಿ ದಂಪತಿ ಸಹಿತ ಮೂವರಿಗೆ ಗಂಭೀರ ಗಾಯ
Team Udayavani, May 18, 2022, 7:20 PM IST
ಮಲ್ಪೆ: ಮಲ್ಪೆಯ ಸಿಟಿಜನ್ ಸರ್ಕಲ್ ಬಳಿ ಆಟೋರಿಕ್ಷಾ ಮತ್ತು ನೀರಿನ ಟ್ಯಾಂಕರ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸಹಿತ ರಿಕ್ಷಾದಲ್ಲಿದ್ದ ಫ್ರಾನ್ಸ್ ದಂಪತಿ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಫ್ರಾನ್ಸ್ ಮೂಲದ ದಂಪತಿ ಕ್ವಾಸ್ನೆಲ್ ಮತ್ತು ರಿಕೊನೊ ಹಾಗೂ ರಿಕ್ಷಾ ಚಾಲಕ ಆತ್ರಾಡಿಯ ಪ್ರಜ್ವಲ್ ಗಾಯಗೊಂಡವರು.
ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ಈಶ್ವರ ಮಲ್ಪೆ ಅವರು ತತ್‌ಕ್ಷಣ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.
ಇದನ್ನೂ ಓದಿ:ಮಂಗಳೂರು: ಸ್ಯಾಕ್ಸೋಫೋನ್ ವಾದಕಿ ನೇಣು ಬಿಗಿದು ಆತ್ಮಹತ್ಯೆ; ಆರ್ಥಿಕ ಮುಗ್ಗಟ್ಟಿನ ಶಂಕೆ
ಫ್ರಾನ್ಸ್ ದಂಪತಿ ಆಟೋದಲ್ಲಿ ಮಲ್ಪೆ ಬೀಚ್ ಕಡೆಗೆ ಹೊರಟಿದ್ದರೆನ್ನಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಶಿರೋಮಣಿ ಅಕಾಲಿದಳ ಬೆಂಬಲ: ರಾಗ ಬದಲಿಸಿದ ದೀದಿ
ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ
ಒನ್ಪ್ಲಸ್ ನೋರ್ಡ್ 2ಟಿ 5ಜಿ ಬಿಡುಗಡೆ: 80 ವ್ಯಾಟ್ ಫಾಸ್ಟ್ ಚಾರ್ಜಿಂಗ್
ಏಕಬಳಕೆ ಪ್ಲಾಸ್ಟಿಕ್ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್ ರೈ
ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ