ಡಾಕ್ಟರ್ ಎಂದು ನಂಬಿಸಿ ಆನ್ಲೈನ್ ಮೂಲಕ ವಂಚನೆ
Team Udayavani, Oct 9, 2022, 12:49 AM IST
ಉಡುಪಿ: ತಾನು ಡಾಕ್ಟರ್ ಎಂದು ಪರಿಚಯಿಸಿ ಕೊಂಡ ವ್ಯಕ್ತಿಯೊಬ್ಬ ಸ್ನೇಹ ಬೆಳೆಸಿಕೊಂಡು ಆನ್ಲೈನ್ ಮೂಲಕ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಎಗರಿಸಿದ್ದಾನೆ.
ಸೆ. 4ರಂದು ಇನ್ಸ್ಟಾಗ್ರಾಂನಲ್ಲಿ ಜೊವಾನ್ 871 ಎಂಬ ಹೆಸರಿನ ವ್ಯಕ್ತಿ ತಾನು ಕೆನಡಾದಲ್ಲಿ ಡಾಕ್ಟರ್ ಎಂದು ಚಾಂತಾರಿನ ಮಹಿಳೆ ಲವೀನಾ ಜೆನಿಫರ್(48) ಅವರನ್ನು ನಂಬಿಸಿ ಪರಿಚಯಿಸಿಕೊಂಡಿದ್ದ. ಅನಂತರ ವಾಟ್ಸ್ಆ್ಯಪ್ ಮೂಲಕ ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದರು. ಅ. 2ರಂದು ಐಫೋನ್, ಗೋಲ್ಡ್, ಯುಎಸ್ ಡಾಲರ್ ಕಳುಹಿಸುವುದಾಗಿ ಲವೀನಾ ಜೆನಿಫರ್ ಅವರಿಗೆ ತಿಳಿಸಿದ್ದ. ಬಳಿಕ ಕಸ್ಟಮ್ ಅಧಿಕಾರಿ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆನಡಾದಿಂದ ಬಂದಿರುವ ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೆಟ್ ಪಡೆ ಯಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ.
ಇದನ್ನು ನಂಬಿದ ಲವೀನಾ ಜೆನಿಫರ್ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 16,89,862 ರೂ. ಪಾವತಿಸಿದ್ದರು. ಬಳಿಕ ಪಾರ್ಸೆಲ್ ಕಳುಹಿ ಸದೆ, ಕಳುಹಿಸಿದ ಹಣವನ್ನು ವಾಪಸು ನೀಡದೆ ಮೋಸ ಮಾಡಿದ್ದಾರೆ. ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.