Udayavni Special

ಸಮುದ್ರದಲ್ಲಿ ಮೀನಿನ ಲಭ್ಯತೆ ಇಳಿಮುಖ

 ಮಲ್ಪೆ ಬಂದರು: ಲಂಗರು ಹಾಕಿದ ಬೋಟುಗಳು

Team Udayavani, Jan 9, 2021, 6:00 AM IST

ಸಮುದ್ರದಲ್ಲಿ  ಮೀನಿನ ಲಭ್ಯತೆ ಇಳಿಮುಖ

ಮಲ್ಪೆ,: ಕಳೆದ ಒಂದು ತಿಂಗಳಿನಿಂದ ಸಮುದ್ರದಲ್ಲಿ ಮೀನಿನ ಇಳುವರಿ ತೀರಾ ಕಡಿಮೆಯಾಗಿದ್ದು, ಮೀನುಗಾರಿಕೆಗೆ ಹೊರಟ ಮೀನುಗಾರರಿಗೆ  ನಿರೀಕ್ಷೆಯಷ್ಟು ಮೀನುಗಳು ಸಿಗದ ಕಾರಣ ಬರಿಗೈಯಲ್ಲಿ ಮರಳುತ್ತಿದ್ದಾರೆ.

ಈಗಾಗಲೇ ಮಲ್ಪೆ ಬಂದರಿನಲ್ಲಿ ಎಲ್ಲ ಸ್ತರದ ಒಟ್ಟು 2,000ದಷ್ಟು ಯಾಂತ್ರಿಕ ಬೋಟುಗಳಿದ್ದು ಈ ಪೈಕಿ ಶೇ. 70ರಷ್ಟು ಬೋಟುಗಳು ದ‌ಡ ಸೇರಿ ಲಂಗರು ಹಾಕಿವೆ. ಇದರಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಮಾಲಕರು, ಕಾರ್ಮಿಕರು  ಮತ್ತವರ ಕುಟುಂಬ ನಿರ್ವಹಣೆಯ ಮೇಲೆ  ಭಾರೀ ಪರಿಣಾಮ ಬೀರಿದೆ. ಲಭ್ಯ ಮೀನಿನ ದರವೂ ಕೂಡ ಅಧಿಕವಾಗಿ ಮೀನಿನ  ಖಾದ್ಯದ ಮೇಲೂ ಪರಿಣಾಮ ಬೀರಿದೆ.

ಪ್ರಮುಖ ಮೀನುಗಳೇ ಇಲ್ಲ :

ಆಳಸಮುದ್ರ ಮೀನುಗಾರಿಕೆಯಲ್ಲಿ ಹೇರಳವಾಗಿ ಸಿಗುತ್ತಿದ್ದ ಬೊಂಡಸ, ರಾಣಿಮೀನು, ರಿಬ್ಬನ್‌ಫಿಶ್‌, ಬಂಗುಡೆ ಮೀನುಗಳು ಕಳೆದ ಎರಡು ವರ್ಷದಿಂದ ತೀರ ಕುಸಿತ ಕಂಡಿವೆ. ಹಿಂದಿನ ಮೂರ್‍ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈಗ ಸಿಗುತ್ತಿರುವ ಬೊಂಡಸ ಮೀನಿನ ಪ್ರಮಾಣ ಶೇ.10ರಷ್ಟು  ಮಾತ್ರ ಇದೆ. ಪ್ರಸ್ತುತ ಮೀನಿನ ಅಲಭ್ಯದ ಜತೆಗೆ ಒಂದೇ ಸಮನೆ ಏರುತ್ತಿರುವ ಡೀಸಿಲ್‌ ದರದಿಂದಾಗಿ ಮೀನುಗಾರಿಕೆಗೆ ಭಾರಿ ಹೊಡೆತವನ್ನು  ನೀಡಿದೆ ಎನ್ನುತ್ತಾರೆ ಬೋಟ್‌ ಮಾಲಕ ಸತೀಶ್‌ ಕುಂದರ್‌ ಅವರು.

ಡೀಸಿಲ್‌ ಸಬ್ಸಿಡಿಯೂ ಬಂದಿಲ್ಲ  :

ಕಳೆದ ನಾಲ್ಕು ತಿಂಗಳಿನಿಂದ ಮೀನು ಗಾರರು ಬಳಸುವ ಡೀಸಿಲ್‌ ಮೇಲಿನ ಸಹಾಯಧನ ಸರಕಾರ ನೀಡಿಲ್ಲ. ಇದರಿಂದ ಮೀನುಗಾರರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೆಲವರಿಗೆ ಆಗಸ್ಟ್‌ನಿಂದ ಬಾಕಿ ಇದ್ದರೆ ಇನ್ನು ಕೆಲವರಿಗೆ ಸೆಪ್ಟೆಂಬರ್‌ನಿಂದ ಯಾವುದೇ ಸಬ್ಸಿಡಿ ಹಣ ಖಾತೆಗೆ ಜಮೆಯಾಗಿಲ್ಲ ಎನ್ನಲಾಗಿದೆ. ಅತೀ ಶೀಘ್ರದಲ್ಲಿ ಬಾಕಿ ಇರುವ ಹಣ ಪಾವತಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ಕಡಲಿಗಿಳಿಯಲು ಹಿಂದೇಟು :

ಮಲ್ಪೆ ಬಂದರು ದಕ್ಕೆಯಲ್ಲಿ ಹೊರಟ ಆಳಸಮುದ್ರ ಬೋಟ್‌ಗಳು ಕೇರಳ, ಗೋವಾ ಮಹಾರಾಷ್ಟ್ರದತ್ತ ತೆರಳಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿದರೆ ಮರಳಿ ಬರುವಾಗ 10ರಿಂದ 12 ದಿನವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಮ್ಮೆ ಹೋಗಿ ಬರಲು  ಡೀಸೆಲ್‌ ಮಂಜುಗಡ್ಡೆ, ಆಹಾರ ಸಾಮಗ್ರಿ, ವೇತನ ಸೇರಿದಂತೆ ಕನಿಷ್ಠ 6 ಲಕ್ಷ ರೂ. ಬೇಕಾಗುತ್ತದೆ. ಹಾಗಾಗಿ 7-8 ಲಕ್ಷ ರೂ. ಮೌಲ್ಯದ ಮೀನು ಸಂಗ್ರಹವಾದರೆ ಮಾತ್ರ ಆರ್ಥಿಕ ಲಾಭ ಗಳಿಸಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಮೀನಿನ ಲಭ್ಯತೆ ಕಡಿಮೆ ಇರುವ ಕಾರಣ ಹೆಚ್ಚೆಂದರೆ 3 ರಿಂದ 3.5 ಲಕ್ಷ ರೂ. ಮೌಲ್ಯದ ಮೀನುಗಳು ಮಾತ್ರ ಸಿಗುತ್ತದೆ. ಇದರಿಂದಾಗಿ ಬೋಟು ಮಾಲಕರು ಆರ್ಥಿಕವಾಗಿ ನಷ್ಟ ಹೊಂದುವುದರಿಂದ ಬೋಟ್‌ಗಳನ್ನು ಕಡಲಿಗೆ ಇಳಿಸಲು ಹಿಂದೇಟು ಹಾಕುತ್ತಾರೆ. ನೂರಾರು ಪಸೀìನ್‌ ಬೋಟುಗಳಿಗೂ ಸಂಪಾದನೆ ಇಲ್ಲದೆ ಅದರಲ್ಲಿ ದುಡಿಯುವ ಕಾರ್ಮಿಕರು ಕೆಲಸ ಬಿಟ್ಟು ಹೋಗಿದ್ದಾರೆ. ಇದರಿಂದ ಬೋಟು ಮಾಲಕರು ಆತಂಕಪಡುವಂತಾಗಿದೆ.

ಮೀನಿನ ಲಭ್ಯತೆ ಕಡಿಮೆ ಇರುವುದರಿಂದ ಮಲ್ಪೆಯಲ್ಲಿ ಸಾಕಷ್ಟು ಬೋಟುಗಳು ಈಗಾಗಲೇ ಲಂಗರು ಹಾಕಿವೆ. ಸಾಮಾನ್ಯವಾಗಿ ಡಿಸೆಂಬರ್‌, ಜನವರಿ ತಿಂಗಳಲ್ಲಿ ಇಂತಹ ಸ್ಥಿತಿ ಇರುತ್ತದೆ. ಈಗಾಗಲೇ ಇಲಾಖೆಯಿಂದ ಡೀಸಿಲ್‌ ಸಬ್ಸಿಡಿ ಖಜಾನೆಗೆ ಬಂದಿದೆ. ಕೆಲವೇ ದಿನದಲ್ಲಿ ಮೀನುಗಾರರ ಖಾತೆಗೆ ಜಮೆಯಾಗಲಿವೆ.  –ಗಣೇಶ್‌ ಕೆ., ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ

ಟಾಪ್ ನ್ಯೂಸ್

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

xfdrete

ವಾಯುಪಡೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ವಿ.ಆರ್‌. ಚೌಧರಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು ಪಡು ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕಾಪು ಪಡು ಬೀಚ್‌ನಲ್ಲಿ ಶವ ಪತ್ತೆ

ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

Untitled-1

ಪ್ರವಾಸಿಗರಿಗೆ ಮಲ್ಪೆ  ಬೀಚ್‌ ಮುಕ್ತ : ವಾಟರ್‌ ಸ್ಪೋರ್ಟ್ಸ್ ಆರಂಭ

Untitled-1

ಕೊಠಡಿ, ಶಿಕ್ಷಕರು ದೊರೆತರೆ ಶತಮಾನ ಸಂಭ್ರಮ ಇಮ್ಮಡಿ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಕೆನಡಾ: ಪ್ರಧಾನಿ ಟ್ರುಡೋ 3ನೇ ಬಾರಿ ಗೆದ್ದರೂ ಬಹುಮತವಿಲ್ಲ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.