ಅಂಚಿಕಟ್ಟೆ: ಹಗಲಿನಲ್ಲೂ ಉರಿಯುತ್ತಿವೆೆ ಬೀದಿದೀಪ
Team Udayavani, Oct 11, 2019, 5:45 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ ಮೂರನೇ ವಾರ್ಡ್ ಅಂಚಿಕಟ್ಟೆ 3ನೇ ಅಡ್ಡರಸ್ತೆಯಲ್ಲಿನ ಬೀದಿದೀಪ ಕಳೆದ 10 ದಿನಗಳಿಂದ ಹಗಲಿರುಳು ಉರಿಯುತ್ತಿದೆ. ಈ ಹಿಂದೆ ಇಲ್ಲಿನ ದೀಪ ಗಳನ್ನು ಸ್ಥಳೀಯರೇ ಅದರ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಇದರ ಸ್ವಿಚ್ ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆಯು ವುದರಿಂದ ದೀಪ ಆರಿಸಲು ಯಾರೂ ಮುಂದಾಗುವಂತಿಲ್ಲ.
ಒಂದೇ ಸ್ವಿಚ್
ಅಂಚಿಕಟ್ಟೆ 3ನೇ ಅಡ್ಡರಸ್ತೆಯಲ್ಲಿನ ಸುಮಾರು 26 ಬೀದಿದೀಪಗಳಿಗೆ ಒಂದೇ ಸ್ವಿಚ್ ಬೋರ್ಡ್ ಇದೆ. ಹೀಗಾಗಿ 26 ದೀಪಗಳು ನಿರಂತರವಾಗಿ ಉರಿಯುತ್ತಿವೆ.
ವಿದ್ಯುತ್ ನಷ್ಟ
ಬೋರ್ಡ್‌ನಲ್ಲಿನ ಸಮಸ್ಯೆಯಿಂದಾಗಿ ಸ್ಥಳೀಯರು ಬೀದಿದೀಪ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ. ಈ ಕುರಿತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದನೆಯಿಲ್ಲ . ಇದರಿಂದ ವಿದ್ಯುತ್ ನಷ್ಟದೊಂದಿಗೆ ಪುರಸಭೆ ವಿನಾಃ ಕಾರಣ ಬಿಲ್ ಪಾವತಿಸಬೇಕಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಶೀಘ್ರ ರಿಪೇರಿ
ಅಂಚಿಕಟ್ಟೆಯಲ್ಲಿನ ವಿದ್ಯುತ್ ಸಿcಚ್ ಬೋರ್ಡ್ ಸರಿ ಪಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಿಬಂದಿ ಕಾರ್ಯೋನ್ಮುಖರಾಗಲಿದ್ದಾರೆ. ತತ್‌ಕ್ಷಣವೇ ಸ್ವಿಚ್ ಬೋರ್ಡ್ ಸರಿಪಡಿಸಿ, ಸ್ಥಳೀಯರಿಗೆ ಸಮಸ್ಯೆಯಾಗದಂತೆ ಮಾಡಲಾಗುವುದು.
– ಸಂಪತ್, ಮೆಸ್ಕಾಂ ಜೆಇ, ಕಾರ್ಕಳ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ