Udayavni Special

ಆಹಾರ ಕೊರತೆ: ಸಿಗಡಿ ಕೃಷಿಗೂ ತಟ್ಟಿದ ಕೋವಿಡ್ 19

ಮರಿಗಳು ಸಾಯುವ ಭೀತಿ ,ಗೋವಾ - ಕೇರಳ ರಫ್ತಿಗೂ ತಡೆ,ಸುಮಾರು 300 ಮಂದಿ ಸಿಗಡಿ ಕೃಷಿಕರಲ್ಲಿ ಆತಂಕ

Team Udayavani, Apr 4, 2020, 11:43 AM IST

ಆಹಾರ ಕೊರತೆ: ಸಿಗಡಿ ಕೃಷಿಗೂ ತಟ್ಟಿದ ಕೋವಿಡ್ 19

ಕುಂದಾಪುರ: ಕೋವಿಡ್ 19 ದೇಶವ್ಯಾಪಿ ಹಬ್ಬುವ ಕಾರಣದಿಂದ ಕರ್ಫ್ಯೂ ಘೋಷಿಸಲಾಗಿರುವುದರಿಂದ ಸಿಗಡಿ ಕೃಷಿಗೂ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರುವ ಭೀತಿ
ಆವರಿಸಿದೆ. ಇದನ್ನೇ ನಂಬಿಕೊಂಡಿರುವ ಉಡುಪಿ, ದ.ಕ. ಜಿಲ್ಲೆಯ ಸಿಗಡಿ ಕೃಷಿಕರು ಈಗ ಕಂಗಾ ಲಾಗಿದ್ದಾರೆ. ಕರಾವಳಿ ಜಿಲ್ಲೆಗಳಿಂದ ಗೋವಾ, ಕೇರಳಕ್ಕೆ ಭಾರೀ ಪ್ರಮಾಣ ದಲ್ಲಿ ಪ್ರತಿದಿನ ಸಿಗಡಿ ರಫ್ತಾಗುತ್ತಿತ್ತು. ಕರ್ಫ್ಯೂ ಜಾರಿಯಲ್ಲಿ ಇರುವುದ ರಿಂದ ಸಿಗಡಿ ಸಾಗಾಟಕ್ಕೆ ಅಡ್ಡಿಯಾಗಿದೆ.

ಎಷ್ಟು ಮಂದಿ?
ಉಡುಪಿಯಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 300 ಮಂದಿ ಸಿಗಡಿ ಕೃಷಿ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ 20 ಹೆಕ್ಟೇರ್‌ ಪ್ರದೇಶ ದಲ್ಲಿ, ಉ.ಕ. ಜಿಲ್ಲೆಯಲ್ಲಿ 400-500 ಮಂದಿ ಸಿಗಡಿ ಕೃಷಿಕರಿ ದ್ದಾರೆ. ಆದರೆ ಹೆಚ್ಚಿನ ಸಿಗಡಿ ಉತ್ಪಾದನೆ ಆಗುವ ಜಿಲ್ಲೆಗಳ ಪೈಕಿ ಉಡುಪಿಗೆ ಅಗ್ರಸ್ಥಾನ. ಅದರಲ್ಲೂ ಕುಂದಾಪುರ ತಾಲೂಕಿನ ತಲ್ಲೂರು, ಬಂಟ್ವಾಡಿ, ಹಕ್ಲಾಡಿ, ಮೋವಾಡಿ, ಮತ್ತಿತರ ಭಾಗದಲ್ಲಿ ಅನೇಕ ಮಂದಿ ಸಿಗಡಿ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಈಗ ಸಿಗಡಿ ಮರಿಗಳು ದೊಡ್ಡದಾಗಿ, ಮಾರಾಟಕ್ಕೆ ಸಿದ್ಧವಾಗಿದ್ದರೂ, ಅದಕ್ಕೆ ಮಾರುಕಟ್ಟೆಯಿಲ್ಲ. ಬೇರೆಡೆ ಸಾಗಾಟಕ್ಕೂ ಸಮಸ್ಯೆಯಾಗಿದೆ.

ಆಂಧ್ರದಿಂದ ಆಹಾರ ಪೂರೈಕೆ
ಕರಾವಳಿ ಭಾಗಕ್ಕೆ ಸಿಗಡಿ ಮರಿಗಳಿಗೆ ಬೇಕಾದ  ಆಹಾರವನ್ನು ಆಂಧ್ರ, ತಮಿಳುನಾಡಿನಿಂದ ಪೂರೈಸಲಾಗುತ್ತಿತ್ತು. ಆದರೆ ಈಗ ವಾಹನ ಸಾಗಾಟಕ್ಕೆ ಸರಕಾರದ ಮಟ್ಟದಲ್ಲಿ ಅಗತ್ಯ ವಸ್ತುಗಳು ಎನ್ನುವ ನೆಲೆಯಲ್ಲಿ ಅನುಮತಿ ನೀಡಿದರೂ, ವಾಹನಗಳ, ಮಾಲಕರು ಚಾಲಕರು ಬರಲು ಹಿಂದೇಟು ಹಾಕಿದ್ದಾರೆ. ಕೆಲವರು ಸಿಗಡಿ ಕೃಷಿಕರಲ್ಲಿ ಆಹಾರ ಖಾಲಿಯಾಗಿದ್ದರೆ, ಇನ್ನು ಕೆಲವರಲ್ಲಿ ಒಂದೆರಡು ದಿನಗಳಿಗೆ ಆಗುವಷ್ಟೇ ದಾಸ್ತಾನಿದೆ.

ಸರಕಾರ ನೆರವಾಗಲಿ
ಸರಕಾರ ಎಲ್ಲ ವರ್ಗಕ್ಕೂ ಸಬ್ಸಿಡಿ ನೀಡಿದಂತೆ ಸಿಗಡಿ ಕೃಷಿಕರಿಗೂ ನೀಡಬೇಕು. ಪ್ರತಿ ನಿತ್ಯ ಗೋವಾ, ಕೇರಳಕ್ಕೆ ಸಿಗಡಿ ರಫ್ತಾಗುತ್ತಿತ್ತು. ಸ್ಥಳೀಯ ಮಾರುಕಟ್ಟೆಗಳಿಗೂ ಟನ್‌ಗಟ್ಟಲೆ ಸಿಗಡಿ ಮಾರಾಟವಾಗುತ್ತಿತ್ತು. ಅದೆಲ್ಲವೂ ಈಗ ಸ್ಥಗಿತಗೊಂಡಿದೆ. ಇದರಿಂದ ಭಾರೀ ನಷ್ಟ ಉಂಟಾಗುವ ಸಂಭವವಿದೆ. ಆಹಾರದ ಅಭಾವ ಕೂಡ ಎದುರಾಗಿದ್ದು, ಆಹಾರವಿಲ್ಲದಿದ್ದರೆ ಸಿಗಡಿ ಮರಿಗಳು ಸಾಯುತ್ತವೆ.
-ಕೃಷ್ಣಪ್ರಸಾದ್‌ ಅಡ್ಯಂತಾಯ, ಅಧ್ಯಕ್ಷರು, ಕರಾವಳಿ ಜಿಲ್ಲೆಗಳ ಸಿಗಡಿ ಕೃಷಿಕರ ಸಂಘ

ಸಿಗಡಿ ಕೃಷಿಕರಿಗೆ ಅಗತ್ಯ ನೆರವು : ಡಿಸಿ
ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸಿಗಡಿ ಕೃಷಿ ನೆಚ್ಚಿಕೊಂಡಿದ್ದು, ಆದರೆ ಕರ್ಫ್ಯೂನಿಂದಾಗಿ ತೊಂದರೆಯಾಗುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಸಿಗಡಿಗೆ ಬೇಕಾದ ಆಹಾರ ಹೊರ ರಾಜ್ಯದಿಂದ ಬರಬೇಕಾಗಿರುವುದರಿಂದ ಸಾಗಾಟಕ್ಕೆ ಸರಕಾರವೇ ಈಗ ಅನುಮತಿ ನೀಡಲು ಮುಂದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿದ್ದೇನೆ. ಸಾಗಾಟ ವಾಹನದ ಸಂಖ್ಯೆ ಹಾಗೂ ಎಲ್ಲಿಂದ ಬರುತ್ತದೆ ಎನ್ನುವ ಮಾಹಿತಿ ನೀಡಿದರೆ ಉಡುಪಿ ಜಿಲ್ಲೆಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುವುದು. ಇನ್ನು ಸಿಗಡಿಯನ್ನು ಮಾರುಕಟ್ಟೆಗೆ ಸಾಗಾಟಕ್ಕೂ ಅನುಕೂಲ ಮಾಡಲಾಗುವುದು ಎಂದು ಡಿಸಿ ಭರವಸೆ ನೀಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಪೊಲೀಸ್‌ ಇಲಾಖೆಗೆ ಗೃಹರಕ್ಷಕದಳ ಸಿಬಂದಿ ಬಲ!

ಪೊಲೀಸ್‌ ಇಲಾಖೆಗೆ ಗೃಹರಕ್ಷಕದಳ ಸಿಬಂದಿ ಬಲ!

ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ? ದ.ಕ. 150, ಉಡುಪಿ 20 ಸಿಟಿ ಬಸ್‌ಗಳ ಸಂಚಾರ

ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ? ದ.ಕ. 150, ಉಡುಪಿ 20 ಸಿಟಿ ಬಸ್‌ಗಳ ಸಂಚಾರ

ಮಾಜಿ ಸಚಿವ -ಡಿಸಿ ಮಧ್ಯೆ ಟ್ವೀಟ್‌ ಸಮರ !

ಮಾಜಿ ಸಚಿವ -ಡಿಸಿ ಮಧ್ಯೆ ಟ್ವೀಟ್‌ ಸಮರ !

ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ

ಮಂಗಳೂರು, ಉಡುಪಿಯಲ್ಲಿ ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

28-May-14

ಕೋವಿಡ್ ಸೋಂಕಿತರ ಹಾಸ್ಟೇಲ್‌ ಚಿಕಿತ್ಸೆಗೆ ವಿರೋಧ

28-May-13

ಅಭಿವೃದ್ಧಿ-ಕೃಷಿ ಚಟುವಟಿಕೆ ನಿರಂತರವಾಗಿರಲಿ

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

28-May-12

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಚ್ಚಿನ ಒತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.