ಉಡುಪಿ: ಮಹಿಳೆಯಿಂದ ವಂಚನೆ; ದೂರು
Team Udayavani, Dec 8, 2022, 9:48 PM IST
ಉಡುಪಿ: ಸಾಲ ಪಡೆದು ಮಹಿಳೆಯೊಬ್ಬರು ವಂಚಿಸಿದ ಘಟನೆ ನಡೆದಿದೆ. ಮೆಸ್ಕಾಂ ಇಲಾಖೆಯಲ್ಲಿ ನೌಕರರಾಗಿರುವ ಗುರುಪ್ರಸಾದ್ ಅವರು ತನ್ನ ತಂಗಿಯ ಮದುವೆ ನಿಮಿತ್ತ ಹಣಕಾಸಿನ ಆವಶ್ಯಕತೆಯಿಂದಾಗಿ ಪಿಪಿಸಿ ಬಳಿ ಕಚೇರಿಯನ್ನು ಹೊಂದಿರುವ ಆರೋಪಿ ಮಹಿಳೆ ತಬಸುಂ ಎಂಬಾಕೆ ಸಾಲ ಕೊಡಿಸುವುದಾಗಿ ನಂಬಿಸಿದ್ದರು.
ಅ. 13ರಂದು ಆಕೆ ಗುರುಪ್ರಸಾದ್‌ರಿಂದ 7 ಸಾವಿರ ರೂ. ನಗದು ಹಾಗೂ ದಾಖಲೆಗಳನ್ನು ಪಡೆದು ಸಾಲ ನೀಡದೆ ಪಡೆದ ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಲಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.