ಕರಾವಳಿಯ ವಿವಿಧೆಡೆ ಉತ್ತಮ ಮಳೆ


Team Udayavani, Jun 17, 2022, 6:14 AM IST

ಕರಾವಳಿಯ ವಿವಿಧೆಡೆ ಉತ್ತಮ ಮಳೆ

ಮಂಗಳೂರು/ಉಡುಪಿ: ಹಲವು ದಿನಗಳ ಮಳೆ ವಿರಾಮದ ಬಳಿಕ ಕರಾವಳಿಯ ವಿವಿಧೆಡೆ ಗುರುವಾರ ಉತ್ತಮ ಮಳೆಯಾಗಿದೆ. ಹಲವೆಡೆ ಮಳೆಗಾಲದ ರೀತಿ ದಟ್ಟ ಕಾರ್ಮೋಡ ಕವಿದು ಭಾರೀ ಮಳೆ ಸುರಿದಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ನಾಪತ್ತೆಯಾಗಿತ್ತು. ಇದರಿಂದ ಮತ್ತೆ ಸೆಕೆಯ ವಾತಾವರಣ ಇತ್ತು. ಗುರುವಾರ ಬೆಳಗ್ಗೆಯಿಂದಲೇ ಉತ್ತಮ ಮಳೆ ಸುರಿದಿದೆ. ಇದರಿಂದ ಉಷ್ಣಾಂಶದಲ್ಲಿಯೂ ಬದಲಾವಣೆ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಕೂಡ ಸಾಧಾರಣ ಮಳೆಯಾಗಿತ್ತು. ಗುರುವಾರ ಅಪರಾಹ್ನದವರೆಗೆ ಮೋಡ ಮತ್ತು ಬಿಸಿಲಿನ ವಾತಾವರಣವಿದ್ದು, ಅನಂತರ ಉತ್ತಮ ಮಳೆ ಸುರಿದಿದೆ.

ಸುಬ್ರಹ್ಮಣ್ಯ ಪರಿಸರದಲ್ಲಿ ಸುಮಾರು ಒಂದು ಗಂಟೆ ಅವಧಿ ಉತ್ತಮ ಮಳೆಯಾಗಿದ್ದರೆ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಪುತ್ತೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಮಧ್ಯಾಹ್ನ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಸುಳ್ಯ: ಧಾರಾಕಾರ ಮಳೆ :

ಸುಳ್ಯ ತಾಲೂಕಿನ ಅಲ್ಲಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರ ಮಳೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇದ್ದು, ಬಳಿಕ ಮೋಡ ಕವಿದು ನಿರಂತರ ಮಳೆ ಸುರಿಯಿತು.

ಸುಳ್ಯ ಪೇಟೆ, ಜಾಲ್ಸೂರು, ಐವರ್ನಾಡು, ಕಲ್ಮಡ್ಕ, ಸೋಣಂಗೇರಿ, ಬೆಳ್ಳಾರೆ, ಪಂಜ, ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಉಡುಪಿ: ಉತ್ತಮ ಮಳೆ :

ಉಡುಪಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ, ಗುರುವಾರ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ ಭಾಗದಲ್ಲಿ ಕೆಲವೆಡೆ ಮಳೆ ಸುರಿದಿದ್ದು, ಉಡುಪಿ, ಮಲ್ಪೆ, ಪರ್ಕಳ, ಮಣಿಪಾಲ ಭಾಗದಲ್ಲಿ ಕೆಲಕಾಲ ಧಾರಾಕಾರ ಮಳೆಯಾಗಿದೆ.

ಇಳಿಕೆಯಾದ ತಾಪಮಾನ :

ಕಳೆದ ಎರಡು-ಮೂರು ದಿನಗಳಲ್ಲಿ ಸೆಕೆಯ ಅನುಭವ ಹೆಚ್ಚಿತ್ತು. ಗುರುವಾರ ಮಳೆ ಆರಂಭವಾದ ಬಳಿಕ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡು ಬಂತು. ಮಂಗಳೂರಿನಲ್ಲಿ 31ರಿಂದ 32 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದ ಗರಿಷ್ಠ ತಾಪಮಾನ ಗುರುವಾರ 30 ಡಿಗ್ರಿ ಸೆಲ್ಸಿಯಸ್‌ನಲ್ಲಿತ್ತು.  ಕನಿಷ್ಠ ತಾಪಮಾನ 24 ಡಿ.ಸೆ. ದಾಖಲಾಗಿತ್ತು. ಮುಂದಿನ ಒಂದು ವಾರದ ಅವಧಿಯಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ. ಒಳಗೆ ಇರುವ ಸಾಧ್ಯತೆ ಇದ್ದರೆ, ಕನಿಷ್ಠ ತಾಪಮಾನ 23 ಡಿ.ಸೆ. ಒಳಗೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೃಷಿ ಕಾರ್ಯಕ್ಕೆ ಜೀವ :

ಕೆಲವು ದಿನ ಮಳೆ ಇಲ್ಲದೆ ಜೀವಕಳೆ ಕಳೆದುಕೊಂಡಿದ್ದ ಕೃಷಿ ಕಾರ್ಯ ಮತ್ತೆ ಚುರುಕಾಗಿದೆ. ಬುಧವಾರ ರಾತ್ರಿಯೇ ಹೆಚ್ಚಿನೆಡೆ ಮಳೆ ಸುರಿದಿದ್ದು, ಗುರುವಾರ ಇನ್ನೂ ಉತ್ತಮವಾಗಿ ಮಳೆ ಸುರಿದಿದ್ದರಿಂದ   ಒಣಗಿದ್ದ ಗದ್ದೆಗಳಲ್ಲಿ ನೀರು ನಿಂತಿತು.

ಟ್ರ್ಯಾಕ್ಟರ್‌, ಟಿಲ್ಲರ್‌ ಬಂದು ನಿಂತಿದ್ದರೂ ಮಳೆ ಬಾರದೆ ಉಳುಮೆ ಮಾಡಲು ಅಸಾಧ್ಯವಾಗಿದ್ದ ರೈತರು ಗುರುವಾರ ಉಳುಮೆ ಕಾರ್ಯದಲ್ಲಿ ತೊಡಗಿಕೊಂಡದ್ದು ಕಾಣಿಸಿತು.

ಎಲ್ಲೋ, ಆರೆಂಜ್‌ ಅಲರ್ಟ್‌ :

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ. 17ಮತ್ತು 18ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದ್ದು,  ಈ ಅವಧಿಯಲ್ಲಿ ಗಾಳಿ,  ಗುಡುಗು ಸಿಡಿಲಿನಿಂದ ಕೂಡಿದ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.

ಜೂನ್‌ 19 ಮತ್ತು 20ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದಿರುವ ಹವಾಮಾನ ಇಲಾಖೆ, ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ : 

ಪ್ರಸ್ತುತ ಸಮುದ್ರ ಪ್ರಕ್ಷುಬ್ಧವಾಗಿದೆ. ಜತೆಗೆ ಆಗಾಗ ವೇಗವಾಗಿ ಗಾಳಿ ಕೂಡ ಬೀಸುತ್ತಿದೆ. ಆದುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಕರಾವಳಿಯಾದ್ಯಂತ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೊಮ್ಮೆ ಗಾಳಿಯ ವೇಗ ಗಂಟೆಗೆ 60.ಕಿ.ಮೀ. ವರೆಗೆ ತಲುಪುವ ಸಾಧ್ಯತೆ ಇದೆ. ಈ ವೇಳೆ ಮಂಗಳೂರಿನಿಂದ ಕಾರವಾರದವರೆಗಿನ ಸಮುದ್ರದಲ್ಲಿ ಎರಡರಿಂದ 2.6 ಮೀಟರ್‌ ಎತ್ತರದವರೆಗೆ ಅಲೆಗಳು ಏಳುವ ಸಂಭವ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-udupi

Udupi: ನಗರಸಭಾ ಸದಸ್ಯನ ಕಾರಿಗೆ ಕಲ್ಲು ಎಸೆತ

18-missing-case

Missing case: ಹಾವಂಜೆ: ಯುವತಿ ನಾಪತ್ತೆ

17-thekkatte

Kumbhashi: ಟಯರ್‌ ಸಿಡಿದು ರಸ್ತೆ ವಿಭಾಜಕ ಏರಿದ ಕಾರು !

16-brahmavara

Bramavara: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

14-basrur

Road Mishap; ಬಳ್ಕೂರು: ಸ್ಕೂಟರ್‌ಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.